ಇಂದು ಹುನಗುಂದ ತಾಲೂಕಿನ ಅಮೀನಗಡ ನಗರದ ಪೊಲೀಸ್ ಠಾಣೆಯಲ್ಲಿ ಇಂದು ಗಣೇಶ ಚತುರ್ಥಿ ಹಾಗೂ ಮೊಹರಂ ಹಬ್ಬದ ನಿಮಿತ್ಯವಾಗಿ ಇಂದು ಠಾಣೆಯ ಪಿ ಎಸ್ ಐ ಬಸವರಾಜ ತಿಪ್ಪಾರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಗಣೇಶ ಚತುರ್ಥಿ ಹಾಗೂ ಮೊಹರಂ ಹಬ್ಬದ ನಿಮಿತ್ಯ, ಸಾರ್ವಜನಿಕವಾಗಿ ಬಹಿರಂಗ ಶಾಂತಿ ಸಭೆಯನ್ನು ಮಾಡಲಾಯಿತು.

ಈ ವರ್ಷ ಕರೋನ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಸರಕಾರ ಸಂಪೂರ್ಣವಾಗಿ ಸಾರ್ವಜನಿಕ ಇಂತಹ ಹಬ್ಬ, ಮದುವೆ,ಜಾತ್ರೆ, ಬಹಿರಂಗ ಎಲ್ಲಾ ಕಾರ್ಯಕ್ರಮ ನಿಷೇಧ ಮಾಡಿದ್ದು ಜನತೆ,ಹಾಗೂ ಗಜಾನನ ಸಂಘದವರು ಈ ವರ್ಷ ಈ ಕೇಳಕಂಡ ಎಲ್ಲಾ ರೀತಿಯ ಸೂಚನೆಗಳನ ಪಾಲಿಸಲು ತಿಳಿಸಿದರು.
೧) ಸಾರ್ವಜನಿಕವಾಗಿ ರಸ್ತೆಗಳಲ್ಲಿ ಗಣೇಶ್ ಮೂರ್ತಿಗಳನ್ನು ಪ್ರತಿಷ್ಠಾಪಿಸುವಂತಿಲ್ಲ. ದೇವಸ್ಥಾನಗಳಲ್ಲಿ ಗಣೇಶ್ ಪ್ರತಿಷ್ಠಾಪಿಸಬೇಕು.
೨) ಗಣೇಶ್ ದರ್ಶನಕ್ಕೆ ಬರುವ ಭಕ್ತರಿಗೆ ಕಡ್ಡಾಯವಾಗಿ ಸ್ಯಾನಿಟೈಸರ್, ತರ್ಮಲ್ ಸ್ಕ್ರೀನಿಂಗ್. ಹಾಗೂ ಗಣೇಶ್ ಪ್ರತಿಷ್ಠಾಪಿಸಿದ ಸ್ಥಳದ ಸುತ್ತಮುತ್ತಲಿನಲ್ಲಿ ಸ್ಯಾನಿಟೈಸರ್ ಮಾಡುವುದು.
೩) ಪ್ರಸಾದ್ ಹಾಗೂ ಅಣ್ಣಸಂತರ್ಪಣೆ ನಿಷೇಧ.
೪) ಪೆಂಡಾಲ್ ಹಾಗೂ ಸೌಂಡ್ ಸಿಸ್ಟಮ್ ಬಳಕೆಗೆ ನಿಷೇಧ.
೫) ದೇವಸ್ಥಾನಗಳಲ್ಲಿ ಇತರೇ ಸ್ಥಳಗಳಲ್ಲಿ ಪ್ರತಿಷ್ಠಾಪಿಸಿದ ಗಣೇಶ್ ಮೂರ್ತಿಗಳನ್ನು ಒಂದೇ ದಿವಸ ಕುಡಿಸಿ ಅದೆ ದಿವಸ ವಿಸರ್ಜಿಸುವುದು.
೬) ಗಣೇಶ್ ಮೂರ್ತಿ ತರುವಾಗ ಹಾಗೂ ವಿಸರ್ಜನೆ ಸಮಯದಲ್ಲಿ ೦೪ ರಿಂದ ೦೫ ಜನರಿಗೆ ಮಾತ್ರ ಅವಕಾಶ.
೭) ಸಾರ್ವಜನಿಕವಾಗಿ ರಸ್ತೆಗಳಲ್ಲಿ ಪಂಜೆ ಹಾಗೂ ಡೋಲಿಗಳನ್ನು ಕುಡಿಸುವಂತಿಲ್ಲ.
೮) ಕತಾಲ್ ರಾತ್ರಿ ಹಾಗೂ ದೇವರನ್ನು ಸವಾರಿಗೆ ಹೋಗುವುದನ್ನು ನಿಷೇಧಿಸಲಾಗಿದೆ.
೯) ಮೋಹರಂ ಕೊನೆಯ ದಿನದಂದು ದೇವರನ್ನು ವಿಸರ್ಜಿಸುವಾಗ ೦೪ ರಿಂದ ೦೫ ಜನರಿಗೆ ಮಾತ್ರ ಅವಕಾಶ,

ಈ ಶಾಂತಿ ಸಭೆಯಲ್ಲಿ ಅಮೀಮಗಡ ಪಟ್ಟಣದ ಮುಖಂಡರಾದ ಗುರುಚಳ್ಳಮರದ, ಬಸವರಾಜ ನಿಡಗುಂದಿ, ಅಜ್ಮೀರ್ ಮುಲ್ಲಾ, ಸಂಗಮೇಶ ಗೌಡರ, ಮಲ್ಲಪ್ಪ ಬಂಡಿವಡ್ಡರ, ಅಮರೇಶ್ ಮಡ್ಡಿಕಟ್ಟಿ, ಹುಸೇನ್ ಪಟೇಲ್, ಮನೋಹರ್ ರಕ್ಕಸಗಿ, ಯಮನಪ್ಪ ಕುರಿ, ಶಂಕ್ರಪ್ಪ ಮುಸರಿ. ಸಿಬ್ಬಂದಿಗಳಾದ ಆನಂದ್ ಸಾಲಮಂಟಪಿ, ರಮೇಶ ಸಮಗಾರ, ಲೊಕೇಶ್ ವಂದಗನೂರ, ಚಂದ್ರು ಗೌಡರ, ಹಣಮಂತ ಆಡ್ಗಲ್, ನಾಗ್ರಾಜ್ ಅಂಕೋಲಿ ಮುಂತಾದವರು ಉಪಸ್ಥಿತರಿದ್ದರು..
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News