ಹುಬ್ಬಳ್ಳಿ- ಮೂರುಸಾವಿರ ಮಠ ಮರಳಿ ಪಡೆಯಲು ನಮ್ಮ ಹೋರಾಟ ನಿರಂತರವಾಗಿರಲಿದೆ. ಇದರಿಂದ ಹಿಂದೆ ಸರಿಯುವ ಮಾತು ಇಲ್ಲ ಎಂದು ಬಾಲೆಹೊಸೂರು ಮಠದ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ನಗರದಲ್ಲಿಂದು ಮಾತನಾಡಿದ ಅವರು, ವಿಷಯ ಕುರಿತಂತೆ ಮಠಗಳ ಆಸ್ತಿ ಉಳಿಸುವ ಉದ್ದೇಶದಿಂದ ಅಖಿಲ ಭಾರತ ವೀರಶೈವ ಮಹಾಸಭೆ ಶಂಕರ್ ಬಿದರಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದೆ. ಈ ಸಮಿತಿ ಮೂರುಸಾವಿರ ಮಠದ ಆಸ್ತಿ ಮರಳಿ ಕೊಡಿಸುವ ಕೆಲಸ, ಮಾಡಬೇಕು ಎಂದು ಒತ್ತಾಯಿಸಿದರು. ಕೆ ಎಲ್ ಇ ಸಂಸ್ಥೆ ಹಠಮಾರಿ ಧೋರಣೆ ತೋರುತ್ತಿರುವುದು ವಿಷಾದನಿಯವಾಗಿದೆ.
ಕೋರ್ಟ್ ತೀರ್ಪು ಕೊಡುವ ಪೂರ್ವದಲ್ಲಿ ಮಠದ ಆಸ್ತಿ ಮಠಕ್ಕೆ ಬಿಡಬೇಕು. ಹಾವೇರಿ ಗದಗ, ಹುಬ್ಬಳ್ಳಿಯಲ್ಲಿ ಮಠದ ಅಭಿಮಾನಿಗಳು ಹಾಗೂ ಭಕ್ತರ ಸಭೆ ಕರೆದು ಮುಂದಿನ ಹೋರಾಟದ ರೂಪರೇಷ ಸಿದ್ದಪಡಿಸಲಾಗುವದು. ಶಂಕರಣ್ಣ ಮುನವಳ್ಳಿಯವರು ಹಿರಿಯರ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದರು. ಹೀಗಾಗಿ ಕೆಲ ದಿನಗಳ ಕಾಲ ಹೋರಾಟ ಸ್ಥಗಿತಗೊಳಿಸಿದ್ದೇವು. ಆದ್ರೆ ಈಗ ನಮ್ಮ ಹೋರಾಟವನ್ನು ಮತ್ತೊಂದು ದಿಕ್ಕಿನಲ್ಲಿ ತಿರುಗಯವ ಸೂಚನೆ ಕಾಣುತ್ತಿದೆ. ಹೀಗಾಗಿ ಮತ್ತೊಮ್ಮೆ ಹೋರಾಟ ನಡೆಸಲು ಸಿದ್ಧತೆ ಮಾಡುತ್ತಿದ್ದೇವೆ ಎಂದರು.
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News