Breaking News

ಕಾಂಗ್ರೆಸ್ ಭದ್ರಕೋಟೆಯ ಅಧಿಪತಿ ರಾಜ್ಯ ಕೆಪಿಸಿಸಿ ಪ್ರಾಧಾನ ಕಾರ್ಯದರ್ಶಿ ಮರಿಯಪ್ಪ ಗೊತಗಿ

ತುಮರಿಕೊಪ್ಪ : ಹಳ್ಳಿಯಿಂದ ದಿಲ್ಲಿಯ ವರೆಗೆ ಒಂದು ಸಣ್ಣ ಕುಗ್ರಾಮದಿಂದ ರಾಜ್ಯ ರಾಷ್ಟ್ರೀಯ ರಾಜ ಕಾರಣದಲ್ಲಿ ಗುರುತಿಸಿಕೊಂಡ ಅನೇಕ ರಾಜಕೀಯ ನಾಯಕರು ನಮ್ಮ ನಿಮ್ಮ ಜೊತೆ ಹಲವರನ್ನು ನೋಡಿದ್ದೇವೆ, ಖಂಡಿದ್ದೇವೆ, ಆದರೆ ಇಂದು ಅಂತಹ ರಾಜಕೀಯ ನಾಯಕರ ಸಾಲಿನಲ್ಲಿ ಸಣ್ಣ ಕುಗ್ರಾಮವಾದ ಕುಷ್ಟಗಿ ತಾಲೂಕಿನ ಹನಮಸಾಗರ ಹೋಬಳಿ ವ್ಯಾಪ್ತಿಗೆ ಬರುವ ತುಮರಿಕೊಪ್ಪ ಗ್ರಾಮದ ಮರಿಯಪ್ಪ ಗೊತಗಿ ಎಂದರೆ ಸುತ್ತ ಹತ್ತಾರು ಹಳ್ಳಿ ಜನ ಪ್ರತಿನಿಧಿಗಳು ತಕ್ಷಣ ಹೋ ಆ ನಮ್ಮ ಹುಡುಗ ಮರಿಯಪ್ಪ ಎಂದು ಮುಗುಳು ನಗೆ ಬಿರುವ ಅನೇಕ ನಾಯಕರ ನಡುವೆ ಪ್ರತಿಧ್ವನಿಸುತ್ತಿರುವ ವ್ಯಕ್ತಿ ಮರಿಯಪ್ಪ. ಇಂತಹ
ಮರಿಯಪ್ಪನವರ ರಾಜಕೀಯ ಜೀವನ ಬಹಳ ರೋಚಕರ,

ಬಾಲ್ಯದಿಂದ ಸದಾ ಕೆಲಸದಲ್ಲಿ ತಲ್ಲಿನನಾಗಿ ಸಣ್ಣ ಗುತ್ತಿಗೆದಾರನಾಗಿ ಸಾಮಾಜೀಕ ರಂಗದಲ್ಲಿ ಗುರುತಿಸಿಕೊಂಡ, ಮರಿಯಪ್ಪ ಪ್ರತಿ ಗ್ರಾಮದಲ್ಲಿ ತನ್ನ ಶಿಸ್ತು ಹಾಗೂ ನಯ ವಿನಯದ ಮೂಲಕ ಜನಮನ ಗೆದ್ದ ಯುವ ನಾಯಕ, ಕಾಂಗ್ರೆಸ್ ಭದ್ರಕೋಟೆಯನ್ನು ಕಟ್ಟಿ ಅನೇಕ ಮುಖಂಡರನ್ನು ವಿಶ್ವಾಸ ಕ್ಕೆ ತಗೂಂಡು ಮಾನ್ಯ ಶಾಸಕರಾದ ಅಮರೇಗೌಡ ಪಾಟೀಲ (ಬಯ್ಯಾಪೂರ) ಅವರ ಮಾರ್ಗ ದರ್ಶನದಲ್ಲಿ ತನ್ನ ಧರ್ಮಪತ್ನಿಯಾದ ಶ್ರೀ ಮತಿ ಮಂಜುಳಾ ಅವರನ್ನು ತಾಲೂಕ ಪಂಚಾಯತ ಚುನಾಣೆಗೆ ನಿಲ್ಲಿಸಿ ಆರಿಸಿತಂದು ಗ್ರಾಮದ ವ್ಯಾಪ್ತಿಯಲ್ಲಿ ರಸ್ತೆ, ಭವಣ, ವಿವಿಧ ಕಾಮಗಾರಿಗಳನ್ನು ಮಾಡಿಸಿ ಸೈ ಎನಿಸಿಕೊಂಡ ಚಾಣಕ್ಯ ನಾಯಕ, ಇವರ ಎರಡನೇ ಧರ್ಮ ಪತ್ನಿ ಶ್ರೀಮತಿ ಹನಮವ್ವ ಕೂಡಾ ಸದ್ಯಕ್ಕೆ ತುಮರಿಕೊಪ್ಪ ಗ್ರಾಮ ಪಂಚಾಯತ ಪ್ರಥಮ ಮಹಿಳಾ ಅಧ್ಯಕ್ಷ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಶ್ರೀಮತಿ ದುರಗಮ್ಮ ನೂತನ ಸದಸ್ಯ ಅವಿರೋಧ ಆಯ್ಕೆ

ಮರಿಯಪ್ಪನವರ ಸಾಮಾಜಿಕ ರಂಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸದಾ ಜನ ಸೇವಕರಾಗಿ ಕಾರ್ಯನಿರ್ವಾಹಿಸಿದ ಫಲವಾಗಿ ಇಂದು ಮುಂದಿನ ತಿಂಗಳ ನಡೆಯುವ ಗ್ರಾಮ ಪಂಚಾಯತ ಚುನಾವಣೆಗೆ ಗ್ರಾಮಸ್ಥರು ಸ್ವತಃ ಇವರ ತಾಯಿಯವರಾದ ಶ್ರೀಮತಿ ದುರಗಮ್ಮ ಗಂ, ಮಹಾಲಿಂಗಪ್ಪ ಗೊತಗಿ ಇವರನ್ನು ಅವಿರೋಧವಾಗಿ ಆಯ್ಕೆಮಾಡಿ ಘೋಷಿಸಿದ್ದಾರೆ, ಇಂದು ಮರಿಯಪ್ಪನವರ ಜನ ಬೆಂಬಲ, ಹಾಗೂ ಅವರ ಪ್ರಾಮಾಣಿಕ ಪ್ರಯತ್ನ ಕ್ಕೆ ಸಿಕ್ಕ ಜಯವಾಗಿದೆ.
ಅಲ್ಲದೇ ಕ್ಷೇತ್ರದ ಹಲವರು ಮರಿಯಪ್ಪನವರ ಅಭಿಮಾನಿಗಳು ಮುಂಬರುವ ಜಿಲ್ಲಾ ಪಂಚಾಯತ ಚುನಾವಣಾ ಅಖಾಡಕ್ಕೆ ನಿಲ್ಲಲು ಒತ್ತಡ ಹಾಕುತ್ತಿರುವುದಾಗಿ ಕೇಳಿ ಬಂದಿದೆ. ಆದರೆ ಇದಕ್ಕೆ ಪ್ರತಿಕ್ರಿಯೆಯಾಗಿ ಗುರುಗಳಾದ ಸನ್ಮಾನ್ಯ ಶಾಸಕರ ಮಾರ್ಗದರ್ಶನದಲ್ಲಿ ನಾನು ಕೆಲಸ ಮಾಡುತ್ತೇನೆ, ಸದ್ಯ ಪಕ್ಷ ವನ್ನು ಕ್ಷೇತ್ರದ ಮೂಲೆ ಮೂಲೆಯಲ್ಲಿ ಬೂತ ಮಟ್ಟದಿಂದ ಪಕ್ಷದ ಬಲವರ್ಧನೆ ಮಾಡುವುದು ನನ್ನ ಕರ್ತವ್ಯ ರಾಜ್ಯ ಕಿಪಿಸಿಸಿ ಪರಿಶಿಷ್ಟ ಪಂಗಡದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನಾನು ಗುರುತಿಸಿಕೊಂಡಿದ್ದೆನೆ ಈ ಕೀರ್ತಿ ಮಾನ್ಯ ಶಾಸಕರಿಗೆ ಸಲ್ಲಬೇಕು.

ಗ್ರಾ,ಪಂ, ಅಧ್ಯಕ್ಷರು ಶ್ರೀಮತಿ ಹನಮವ್ವ ,ಮ,ಗೊತಗಿ

ಮರಿಯಪ್ಪನವರು ಈ ರಾಜಕೀಯ ಪಯಣ ರೋಚಕವಾದ್ರು ಇಂದು ರಾಜ್ಯ ರಾಜ್ಯಕಾರಣದಲ್ಲಿ ಗುರುತಿಸಿಕೊಂಡ ಇವರ ಚಾಣಕ್ಯತೆಗೆ ಮುಂದಿನ ದಿನಮಾನದಲ್ಲಿ ಗ್ರಾಮಗಳು ಅಭಿವೃದ್ಧಿಯತ್ತ ಸಾಗಲಿ ಸದಾ ಸಮಾಜದ ಚಿಂತನೆ ಉಳ್ಳ ಇಂತಹ ನಾಯಕರು ಇಂದಿನ ರಾಜಕೀಯ ರಂಗದಲ್ಲಿ ತೊಡಗಿಸಿ ಕೊಂಡಾಗ ಸಮಾಜ ಸುಭದ್ರವಾಗುವುದರ ಜೊತೆ ಅಭಿವೃದ್ಧಿಯತ್ತ ಸಾಗುವುದರಲ್ಲಿ ಸಂದೇಹ ವಿಲ್ಲ ಜನತೆ ಚುನಾವಣೆ ಬಂದಾಗ ಎಣ್ಣೆ, ಹಣ, ಮತ್ತಿತರ ಆಸೆಗೆ ಒಳಪಡದೆ ಮರಿಯಪ್ಪ ನವರಂತಹ ಮುಸ್ಸದ್ದಿ ಯುವ ನಾಯಕರನ್ನು ಆಯ್ಕೆ ಮಾಡಿ ದಾಗ, ಗ್ರಾಮಗಳು ಅಭಿವೃದ್ಧಿ ಯಾಗುವುದರಲ್ಲಿ ಸಂದೇಹವಿಲ್ಲ,

ಶ್ರೀಮತಿ ಮಂಜುಳಾ ,ಮ,ಗೊತಗಿ ತಾ,ಪಂ, ಸದಸ್ಯರು,

ಈಗಾಗಲೆ ಮರಿಯಪ್ಪ ನವರ ಎರಡೂ ಧರ್ಮ ಪತ್ನಿಯರು ತಮ್ಮ ತಮ್ಮ ಅಧಿಕಾರ ಅವಧಿಯಲ್ಲಿ ಉತ್ತಮ ಜನ ಸಂಪರ್ಕವನ್ನು ಹೊಂದಿ ಅನೇಕ ಉತ್ತಮ ಕೆಲಸಗಳ ಮೂಲಕ ಗುರುಸಿಕೊಂಡು ಗೊತಗಿ ಮನೆತನದ ಕಿರ್ತಿಯನ್ನು ಜಿಲ್ಲೆಯಲ್ಲಿ ಮೊಳಗಿಸಿದ್ದಾರೆ ಇವರ ಈ ಅನನ್ಯತೆಯನ್ನು ಕಂಡು ಜನ ಮೆಚ್ಚಿ ಕರೆದು ಅಧಿಕಾರ ನೀಡುತ್ತಿರುವುದು ಶ್ಲಾಘನೀಯ, ಮಾನ್ಯ ಶಾಸಕರು ಇಂತಹ ಮತ್ಸದ್ದಿ ಯುವ ನಾಯಕನನ್ನು ಬೆಣ್ಣು ತಟ್ಟಿ ಉರುದುಂಬಿಸಿ ಬೆಳೆಸಲು ತುಮರಿಕೊಪ್ಪ ಜನತೆಯ ಆಶಯವಾಗಿದೆ .

About vijay_shankar

Check Also

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಆನಂದ ಪರಾಳದ

ಶ್ರೀ ಆನಂದ ಪರಾಳದ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮ ಪಂಚಾಯತಿ ಸದಸ್ಯರು ಇವರಿಂದ ನಾಡಿನ ಸಮಸ್ತ ಜನತೆಗೆ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.