
ಬದಾಮಿ : ಇಂದು ಈ ರಾಷ್ಟ್ರೀಯ ಪತ್ರಿಕಾ ದಿನಾಚರಣೆಯನ್ನು . ಅರ್ಥಪೂರ್ಣವಾಗಿ ಜಯಂತಿಯನ್ನು ಆಚರಿಸಿ ಮಾದರಿಯಾದ ವಿಜಯಶಂಕರ್ ಅವರ ಕಾರ್ಯ ಶ್ಲಾಘನೀಯ, ಪತ್ರಿಕೋದ್ಯಮ ರಂದವು ಸಂವಿಧಾನದ 4 ನೇ ಅಂಗವಾಗಿದೆ ಸಮಾಜವನ್ನು ತಿದ್ದಿ ,ಬಡೆದೆಬ್ಬಿಸುವ ಮಹತ್ತರ ಕಾರ್ಯವನ್ನು ಪತ್ರಿಕಾ ರಂಗ ಮಾಡುತ್ತಿದೆ.

ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕರ್ನಾಟಕ ಪತ್ತಕರ್ತಕರ ಸಂಘ ಸಾಧಕರನ್ನು ಹುಡುಕಿ ಕರೆ ತಂದು ಗೌರವಿಸಿ ಸನ್ಮಾನಿಸುವ ಕಾರ್ಯ ಶ್ಲಾಘನೀಯ, ಇದರಿಂದ ಅವರ ಸಮಾಜ ಸೇವೆಗೆ ಸಂದ ನಿಜವಾದ ಗೌರವ ಇದಾಗಿದೆ. ಈ ಗೌರವ ಸನ್ಮಾನ, ಪ್ರಶಸ್ತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಅವರವರ ಜವಾಬ್ದಾರಿಯನ್ನು ತಾವು ಮತ್ತಷ್ಟು ಗಟ್ಟಿಗೋಳಿಸಿದ್ದಿರಿ ಇಂತಹ ಸಾಮಾಜಿಕ ಕಳಕಳಿಯ ಕಾರ್ಯಗಳು ಸಮಾಜಕ್ಕೆ ಮಾದರಿ ಎಂದರು.

ಬಾಗಲಕೋಟೆ ಜಿಲ್ಲೆಯ ಬದಾಮಿ ನಗರದ ಶ್ರೀ ಸಾಯಿ ಮಂದಿರದಲ್ಲಿ ಕರ್ನಾಟಕ ಪತ್ರಕರ್ತರ ಸಂಘ ಬದಾಮಿ ಹಾಗೂ ಜಿಲ್ಲಾ ಘಟಕದ ಸಹಯೋಗದೊಂದಿಗೆ ರಾಷ್ಟ್ರೀಯ ಪತ್ರಿಕಾ ದಿನಾಚತಣೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮತ್ತು ಧಾರ್ಮಿಕ ಸಮಾಜ ಸೇವಕರಿಗೆ ಬಿಬಿ ನ್ಯೂಸ್ ಡಿಜಿಟಲ್ ಚಾನಲ್ ನಡೆಸಿದ ಪ್ರಶಸ್ತಿ ನಡಿಗೆ ಸಾಧಕರ ಕಡೆಗೆ ಅಭಿಯಾನದಡಿ ರಾಜ್ಯ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ದೇಶಿಸಿ ರಾಜೇಂದ್ರ ದೇಶಪಾಂಡೆ ಅವರು ಉದ್ಘಾಟಕರಾಗಿ ಮಾತನಾಡಿದರು.

ಮುಖ್ಯ ಅಥಿತಿಗಳಾಗಿ ಮಾತನಾಡಿದ ನಾಗರಾಜ ಕಾಚಟ್ಟಿ ನಗರದಲ್ಲಿ ಇತ್ತಿಚ್ಚಿಗೆ ನಿರ್ಮಾಣಗೊಂಡು ಅಭಿವೃದ್ಧಿ ಮಾಡುತ್ತಿರುವ ಶ್ರೀ ಸಾಯಿ ಮಂದಿರದ ನಿರ್ಮಾಣಕ್ಕೆ ಈ ದಿನ ಧಾರ್ಮಿಕ ಸಮಾಜ ಸೇವಾ ರತ್ನಾ ರಾಜ್ಯ ಪ್ರಶಸ್ತಿಯನ್ನು ಪಡೆಯುತ್ತಿರುವ ಶ್ರೀಮತಿ ಕಮಲಮ್ಮ ಜಿಗಬಡ್ಡಿ ಹಾಗೂ ಶ್ರೀಮತಿ ಬಸಮ್ಮ ಗುರಯ್ಯ ಕಾರೂಡಗಿಮಠ ಅಮ್ಮನವರನ್ನು ಗುರುತಿಸಿದ್ದು ನಿಜಕ್ಕೂ ಶ್ಲಾಘನೀಯ. ಅವರ ನಿರಂತರ ಹೋರಾಟ,ಸೇವೆಯ ಫಲವಾಗಿ ಅಸಂಖ್ಯಾತ ಶ್ರೀ ಸಾಯಿ ನಾಥರ ಭಕ್ತರು ಈ ದೇವಸ್ಥಾನ ಹುಡುಕಿಕೊಂಡು ಬಂದು ದರ್ಶನ ಪಡೆಯುತ್ತಾರೆ.

ಇದಕ್ಕೆ ಕಾರಣ ಇವರ ಶ್ರಮ ,ಹಾಗೆ ನಗರದ ಹೋಟೆಲ್ ಉದ್ದೆಮೆಗಳಾದ ರಾಕೇಶ್ ಕಲಾಲ್ ಹಾಗೂ ರಾಮ್ ಬಿಡಿ ಶಟ್ಟಿ ಬಹಳ ತಳ ಮಟ್ಟದಿಂದ ಹೋಟೆಲ್ ಸರ್ವರ್ ಆಗಿ ಈಗ ಇಬ್ಬರು ಮಾಲಿಕರಾಗಿ 20/ 30 ಜನರಿಗೆ ಕೆಲಸ ಕೊಟ್ಟು ಸೋಮಾರಿ ಯುವಕರಿಗೆ ಮಾದರಿಯಾಗಿ ಸುಸಜ್ಜಿತ ಹೋಟೆಲ್ ಉದ್ದೆಮ ಮಾಡುತ್ತಿದ್ದಾರೆ. ಇವರಿಗೆ ರಾಜ್ಯ ಮಟ್ಟದ ಉತ್ಸವವನ್ನು ಬೆಸ್ಟ್ ಮ್ಯಾನೆಜ್‌ಮೆಂಟ್ ಆಫ್ ಅವಾರ್ಡ ಸಿಕ್ಕಿದ್ದು ಬಹಳ ಖುಷಿ ತಂದಿದೆ.

ಇವರಿಬ್ಬರು ನನ್ನ ಕಣ್ಣ ಮುಂದೆ ಬೆಳೆದ ಯುವಕರು, ಅದರಂತೆ ಇಲ್ಲಿ ಈ ದಿನ ಸನ್ಮಾನಕ್ಕೆ ಪಾತ್ರರಾಗಿ ಆಗಮಿಸಿದ ತಮಗೆ ಅಭಿನಂದನೆಗಳು ಕರ್ನಾಕಟ ಪತ್ರಕರ್ತರ ಸಂಘದ ಕಾರ್ಯ ಶ್ಲಾಘನೀಯ ಎಂದರು . ನಗರದ ಅಂಜುಮನ್ ಇಸ್ಮಾಂ ಕಮಿಟಿ ಅಧ್ಯಕ್ಷ ಮೊಹಮ್ಮದ್ ಯುಶೂಫ್ ಫಿರಜಾದೆ ಮಾತನಾಡಿ ಇವತ್ತಿನ ಕೆಲವು ಮಾಧ್ಯಮಗಳು ವಯಕ್ತಿಕ ರಾಜಕೀಯ ಹಾಗೂ ನಾಯಕರನ್ನು ಮೆಚ್ಚಿಸುವ ಕೆಲಸ ಮಾಡುತ್ತಿವೆ.

ಸಮಾಜದ ನಿಜವಾದ ಅಭಿವೃದ್ಧಿ, ಭ್ರಷ್ಟಾಚಾರಗಳಿಗೆ ಕುಮ್ಮಕ್ಕೂ ಕೊಡುತ್ತಿವೆ. ಇನ್ ನಿಜವಾದ ಪತ್ರಕರ್ತರು ಸತ್ಯ,ಧರ್ಮ ಹಾಗೂ ಸಾಮಾಜಿಕ ಜವಬ್ದಾರಿ ಅರಿತು ಪ್ರಾಮಾಣಿಕ ಸೇವೆ ಮಾಡುತ್ತಿವೆ. ಆದರೆ ಬಾಗಲಕೋಟೆ ಇಂದ ಪ್ರಥಮವಾಗಿ ನಮ್ಮ ಬದಾಮಿ ನಗರದಲ್ಲಿ ಈ ದಿನಾಚರಣೆ ಅಂಗವಾಗಿ ಸಾಧಕರನ್ನು ಗುರುತಿಸಿ ಸನ್ಮಾನಿಸಿದ್ದು ಖುಷಿ ತಂದಿದೆ ಈ ಸಂಘದ ಸರ್ವ ಸದಸ್ಯರಿಗೆ ಧನ್ಯವಾದ ಎಂದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಪೂಜ್ಯ ಶ್ರೀ ಶ,ಪ್ರ ಶಿವಪೂಜಾ ಶಿವು ವಾರ್ ಮಹಾಸ್ವಾಮಿಗಳು ಬದಾಮಿ ಇವರು ಮಾತನಾಡಿ ಬಾಗಲಕೋಟೆ ಕರ್ನಾಟಕ ಪತ್ರಕರ್ತರ ಸಂಘ ಬಹಳ ದೊಡ್ಡ ಕಾರ್ಯವನ್ನು ಮಾಡಿದೆ ,ರಾಜ್ಯ ಮಟ್ಟದ ಗೌರವ ಪುರಸ್ಕಾರವನ್ನು ಸಾಧಕರಿಗೆ ಮಾಡಿದ್ದು ಬಹಳ ಖುಷಿಯಾಗಿದೆ.

ಒಬ್ಬ ನಿವೃತ್ತ ನಿಕ್ಷಕ 65 ಲಕ್ಷ ರೂಪಾಯಿ ವೆಚ್ಚದಲ್ಲಿ ಯಾವುದೇ ದಾಳಿಗಳಿಂದ ಹಣ ಪಡೆಯದೆ ಸಾರ್ವಜನಿಕವಾಗಿ ಶ್ರೀ ವೆಂಕಟೇಶ್ವರ ದೇವಸ್ಥಾನ ಕಟ್ಟಿ ಮಾದರಿಯಾಗಿದ್ದಾನೆ. ಇಂತಹ ದಾನಿಗೆ ಧಾರ್ಮಿಕ ಸಮಾಜ ಸೇವಾ ರತ್ನ ರಾಜ್ಯ ಪ್ರಶಸ್ತಿ ಹುಡುಕಿ ಕೊಟ್ಟಿದ್ದು ಬಹಳ ದೊಡ್ಡ ಕೆಲಸ ಎಂದರು.

ಅವರಂತೆ ವಿವಿಧ ಸಾಧಕರನ್ನು ನೋಡಿ ಬಹಳ ಖುಷಿ ಆಯುತು ಆ ಸಾಯಿನಾಥನ ಅನುಗ್ರಹ ನಿಮ್ಮೆಲ್ಲರ ಮೇಲೆ ಹಾಗೂ ಈ ಕಾರ್ಯಕ್ರಮ ಆಯೋಜನೆ ಮಾಡಿದ ಎಲ್ಲ ಪತ್ರಿಕಾ ಮಾಧ್ಯಮದವರಿಗೆ ಶ್ರೀ ಸಾಯಿನಾಥನ ಅನುಗ್ರಹ ಇರಲಿ ಎಂದರು. ಕಾರ್ಯಕ್ರಮದಲ್ಲಿ 20 ಜನ ಸಾಧಕರಿಗೆ ವಿವಿಧ ರಂಗದಲ್ಲಿ ಸಾಧನೆ ಗೈದ ಸಾಧಕರಿಗೆ ರಾಜ್ಯ ಪ್ರಶಸ್ತಿ ಪ್ರಾಧನ ಮಾಡಲಾಯಿತು.


ಶ್ರೀಮತಿ ಕಮಲಮ್ಮ ವಿ ಜಿಗಬಡ್ಡಿ – ದಾರ್ಮಿಕ ಸಮಾಜ ಸೇವಾ ರತ್ನ ರಾಜ್ಯ ಪ್ರಶಸ್ತಿ
ಶ್ರೀಮತಿ ಬಸಮ್ಮ ಗುರಯ್ಯ ಕಾರೂಡಗಿಮಠ – ಧಾರ್ಮಿಕ ಸಮಾಜ ಸೇವಾ ರತ್ನ ರಾಜ್ಯ ಪ್ರಶಸ್ತಿ ಶ್ರೀ ಮಲ್ಲಪ್ಪ ಸಂಗಪ್ಪ ಮೂಲಿಮನಿ – ಶಿಕ್ಷಣ ಸೇವಾ ರತ್ನ ರಾಜ್ಯ ಪ್ರಶಸ್ತಿ ಶ್ರೀಮತಿ ಮಲ್ಲಮ್ಮ ಸಂಗಣ್ಣ ಬಿರಾದಾರ್- ಶಿಕ್ಷಣ ಸೇವಾ ರತ್ನ ರಾಜ್ಯ ಪ್ರಶಸ್ತಿ ಶ್ರೀಮತಿ ರತ್ನಾ ಬಾ ದೇವರೆಡ್ಡಿ – ಧಾರ್ಮಿಕ ಸಮಾಜ ಸೇವಾ ರತ್ನ ರಾಜ್ಯ ಪ್ರಶಸ್ತಿ ಶ್ರೀ ಭೀಮಪ್ಪ ಸತ್ಯಪ್ಪ ಬೂದನಗಡ – ಧಾರ್ಮಿಕ ಸಮಾಜ ಸೇವಾ ರತ್ನ ರಾಜ್ಯ ಪ್ರಶಸ್ತಿ ಶ್ರೀ ಶಂಕರಲಿಂಗಪ್ಪ ಎಸ್ ಮಂಕಣಿ ,ಸಹಕಾರಿ ರಂಗದ ಭೀಷ್ಮ, ರಾಜ್ಯ ಪ್ರಶಸ್ತಿ ಶ್ರೀ ಶೇಖರಯ್ಯ ಪರಯ್ಯ ಬಿಕ್ಷಾವತಿಮಠ – ಅತ್ಯುತ್ತಮ ಕರ್ತವ್ಯ ಪಾಲನೆ ರಾಜ್ಯ ಪ್ರಶಸ್ತಿ , ಶ್ರೀ ಬಸವರಾಜ್ ಕುಂಬಾರ – ಸಮಾಜ ಸೇವಾ ರತ್ನ ರಾಜ್ಯ ಪ್ರಶಸ್ತಿ ಶ್ರೀ ರಾಮ್ ಬಿ ಶಟ್ಟಿ ಬೆಸ್ಟ್ ಹೋಟೆಲ್ ಮ್ಯಾನೆಜ್‌ಮೆಂಟ್ ಅವಾರ್ಡ ಶ್ರೀ ರಾಕೇಶ್ ನಾಗೇಶ ಕಲಾಲ್ ಬೆಸ್ಟ್ ಹೋಟೆಲ್ ಮ್ಯಾನೆಜ್‌ಮೆಂಟ್ ,

ಶ್ರೀ ಬಸವರಾಜ್ ಪು ಕುಂಬಳಾವತಿ – ಸಮಾಜ ಸೇವಾ ರತ್ನ ರಾಜ್ಯ ಪ್ರಶಸ್ತಿ. ಶ್ರೀ ದೇವೇಂದ್ರಗೌಡ ಹೊನ್ನಪ್ಪಗೌಡ ಪಾಟೀಲ – ಶ್ರೀ ಪೂರ್ಣಿಮಾ ಗ್ರಾಮೀಣ ಅಭಿವೃದ್ಧಿ ಸಂಘಕ್ಕೆ – ಅತ್ಯುತ್ತಮ ಗ್ರಾಮೀಣ ಅಭಿವೃದ್ಧಿ ರತ್ನ ರಾಜ್ಯ ಪ್ರಶಸ್ತಿ ಶ್ರೀ ಬೆನಕಪ್ಪ ಎಮ್ ಸಂಕನೂರು- ಸಮಾಜ ಸೇವಾ ರತ್ನ ರಾಜ್ಯ ಪ್ರಶಸ್ತಿ , ಶ್ರೀ ಶ್ರೀಧರ ಚಂದ್ರಪ್ಪ ಚಿತ್ರಗಾರ, – ಜ್ಯೋತಿಷ್ಯ ಬ್ರಹ್ಮ ರಾಜ್ಯ ಪ್ರಶಸ್ತಿ ಶ್ರೀ ಸಂಗಣ್ಣ ಬಿ ಬಿರಾದಾರ್ ಶಿಕ್ಷಣ ರತ್ನ ರಾಜ್ಯ ಪ್ರಶಸ್ತಿ ,ಶ್ರೀ ಎಮ್ ಎಸ್ ವಾರದ ಅತ್ಯುತ್ತಮ ಕರ್ತವ್ಯ ಪಾಲನೆ ರಾಜ್ಯ ಪ್ರಶಸ್ತಿ ನೀಡಿ ಗೌರವಿ ಸನ್ಮಾನಿಸಲಾಯಿತು ,

ಈ ಸಂದರ್ಭದಲ್ಲಿ ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಶ್ರೀ ಡಿ ಬಿ ವಿಜಯಶಂಕರ್ ಅವರು ಇಷ್ಟು ಜನ ಸಾಧಕರಿಗೆ ಗುರುತಿಸಿ ಗೌರವಿಸಿ ಸನ್ಮಾನ ಮಾಡಿದ್ದು ಶ್ಲಾಘನೀಯ ಮಾಧ್ಯಮ ಇಂತಹ ಸಾಮಾಜಿಕ ಕಾರ್ಯ ಮಾಡಿದ್ದನ್ನು ನೋಡಿದ್ದು ಇದೆ ಮೊದಲು ಎಂದು ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಗ್ರಾಮ ಪಂಚಾಯತಿ ಸದಸ್ಯೆ ಬಸವರಾಜ್ ಕುಂಬಾರ್ ಧನ್ಯವಾದ ಹೇಳಿದರು.

ಈ ಸಮಾರಂಭದಲ್ಲಿ ಕಾರ್ಯಕ್ರಮದ ಸಾನಿಧ್ಯವನ್ನು ಪೂಜ್ಯ ಶ್ರೀ ಶಿವಪೂಜಾ ಶಿವಚಾರ್ಯ ಮಹಾಸ್ವಾಮಿಗಳು ಬದಾಮಿ, ಹಾಗೂ ಶ್ರೀ ರಾಜೇಂದ್ರ ದೇಶಪಾಂಡೆ, ರಾಜ್ಯ ಸಮಿತಿ ಸದಸ್ಯರು ಶ್ರೀ ಎಸ್ ಎಸ್ ಮಿಟ್ಟಲಕೊಡ, ಮಾಜಿ ಅಧ್ಯಕ್ಷರು ವಕೀಲರ ಪರಿಷತ್ತು ಬೆಂಗಳೂರು, ಶ್ರೀ ನಾಗರಾಜ್ ಕಾಚಟ್ಟಿ, ತಾಲೂಕು ಅಧ್ಯಕ್ಷರು ಭಾ,ಜ,ಪ, ಬದಾಮಿ ಶ್ರೀ ಎಮ್ ಎಸ್ ಹಿರೇಮಠ ನ್ಯಾಯವಾದಿಗಳು ಬದಾಮಿ, ಶ್ರೀ ಮೊಹಮ್ಮದ್ ಯುಶೂಫ್ ಫಿರಜಾದೆ, ಅಧ್ಯಕ್ಷರು ಅಂಜುಮನ್ ಇಸ್ಲಾಂ ಕಮಿಟಿ ಬದಾಮಿ ಶ್ರೀ.ಮತಿ ಕಮಲಮ್ಮ ಜಿಗಬಡ್ಡಿ, ಶ್ರೀ ಸಾಯಿ ಮಂದಿರ ಗೌರವಾಧ್ಯಕ್ಷರು ಶ್ರೀಮತಿ ಬಸಮ್ಮ ಗು ಕಾರೂಡಗಿಮಠ ಶ್ರೀಮತಿ ರತ್ನಾ ಬಾ ದೇವರಡ್ಡಿ, ಶ್ರೀ ವಾಯ್ ಬಿ ಕಾರೂಡಗಿಮಠ ಸೇರಿದಂತೆ ಜಿಲ್ಲಾ ಅಧ್ಯಕ್ಷ ಶ್ರೀ ಡಿ ಬಿ ವಿಜಯಶಂಕರ್ ,ತಾಲೂಕು ಅಧ್ಯಕ್ಷ ಬಸವರಾಜ್ ಚಂಚಿ, ಜಿಲ್ಲಾ ಕಾರ್ಯದರ್ಶಿ ಕಿರಣರಾಜ್ ಕಾಳಗಿ, ಆಪ್ತ ಸಲಹೆಗಾರರು ಭೀಮಸೆಂಗ್ ರಾಠೋಡ ಉಪಸ್ಥಿತಿ ಇದ್ದರು.ಕಾರ್ಯಕ್ರಮ ನಿರೂಪಣೆಯನ್ನು ಶ್ರೀ ಮುರಳೀಧರ ಹಾನಾಪೂರ ಮಾಡಿದರು,ವಂದನಾರ್ಪಣೆಯನ್ನು ಶ್ರೀ ಕಿರಣರಾ್ ಕಾಳಗಿ ನಡೆಸಿಕೊಟ್ಟರು.

ವರದಿ : ಕಿರಣರಾಜ್ ಎಮ್ ಕಾಳಗಿ
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News