
ನಿರ್ಬಂಧಿತ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ, ಇರಾನ್, ಚೀನಾ, ಬ್ರೆಜಿಲ್, ಲೆಬನಾನ್, ಸ್ಪೇನ್, ಸಿಂಗಪುರ, ಈಜಿಪ್ಟ್ ಹಾಗೂ ಶ್ರೀಲಂಕಾ ಪ್ರಮುಖವಾಗಿವೆ. ಒಟ್ಟು 31 ದೇಶಗಳಿಂದ ಪ್ರಯಾಣಿಕರು, ಪ್ರವಾಸಿಗರು ಸದ್ಯ ಕುವೈತ್ ದೇಶಕ್ಕೆ ಬರುವಂತಿಲ್ಲ ಎಂದು ಕುವೈತ್ ನಾಗರಿಕ ವಿಮಾನಯಾನ ನಿರ್ದೇಶನಾಲಯವು ಪ್ರಕಟಣೆ ಹೊರಡಿಸಿದೆ.
ಕುವೈತ್ ನಲ್ಲಿ ಕೊವಿಡ್ 19 ಪ್ರಕರಣಗಳು ಸಾವಿರಾರು ಸಂಖ್ಯೆಯಲ್ಲಿದ್ದರು ನಿಯಂತ್ರಣದಲ್ಲಿದೆ.
ಹೀಗಾಗಿ ಆರ್ಥಿಕ ಹಿತದೃಷ್ಟಿಯಿಂದ ಶನಿವಾರದಿಂದ ವಿಮಾನಯಾನವನ್ನು ಪುನಃ ಆರಂಭಿಸಲಾಯಿತು. ಕಳೆದ ಐದು ತಿಂಗಳಿನಿಂದ ವಾಣಿಜ್ಯ ಉದ್ದೇಶಿತ ವಿಮಾನಯಾನ ಸ್ಥಗಿತಗೊಳಿಸಲಾಗಿತ್ತು.
ಕುವೈತ್ ನಲ್ಲಿ 67,911 ಕೊರೊನಾವೈರಸ್ ಸೋಂಕಿತ ಪ್ರಕರಣಗಳಿದ್ದು, 457 ಮಂದಿ ಮೃತಪಟ್ಟಿದ್ದಾರೆ. 59,213 ಮಂದಿ ಚೇತರಿಸಿಕೊಂಡಿದ್ದಾರೆ. 8,241 ಸಕ್ರಿಯ ಪ್ರಕರಣಗಳಿವೆ. 129 ಮಂದಿ ಮಾತ್ರ ವಿಷಮ ಪರಿಸ್ಥಿತಿಯಲ್ಲಿದ್ದಾರೆ.