ವರ್ಕ್ ಫ್ರಂ ಹೋಂನಿಂದ ಎಷ್ಟು ಅನುಕೂಲವಿದೆಯೋ ಅಷ್ಟೇ ಅನನುಕೂಲವೂ ಇದೆ. ವರ್ಕ್ ಫ್ರಂ ಹೋಂ ಆರಂಭದ ದಿನಗಳಲ್ಲಿ ಮನೆಯಲ್ಲೇ ಆರಾಮವಾಗಿ ಇರಬಹುದು ಎಂಬ ಖುಷಿ, ಮನೆಯವರೊಡನೆ ಸಮಯ ಕಳೆಯಬಹುದು ಎಂಬ ಏನೇನೋ ಕನಸುಗಳು.
ಆದರೆ ಅದೇ ವರ್ಕ್ ಫ್ರಂ ಹೋಂ ನಿಮ್ಮ ಜೀವಕ್ಕೂ ಕುತ್ತು ತರಬಲ್ಲದು, ಹೌದು ವರ್ಕ್ ಫ್ರಂ ಹೋಮ್ ಸುಂದರ ಆದರೆ ಎಚ್ಚರ ತಪ್ಪಿದರೆ ಜೋಕೆ.. ವರ್ಕ್ ಫ್ರಂ ಹೋಂನಿಂದಾಗುವ ಆರೋಗ್ಯ ಸಮಸ್ಯೆಯನ್ನು ವ್ಯಕ್ತಿಯೊಬ್ಬರು ವಿವಿರಿಸಿದ್ದು ಹೀಗೆ.
ವರ್ಕ್ ಫ್ರಂ ಹೋಮ್ ಮಾಡುವ ಪ್ರತಿಯೊಬ್ಬರೂ ಓದಲೇಬೇಕಾಗಿದ್ದು, ಸಾಫ್ಟ್ ವೇರ್ ತಂತ್ರಜ್ಞ ಪ್ರಕಾಶ್ ಎಂಬುವವರು ತಮ್ಮ ಸ್ನೇಹಿತರೊಬ್ಬರಿಗೆ ತಮ್ಮ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ಎಲ್ಲರ ರೀತಿ ಮಾರ್ಚ್ ತಿಂಗಳಲ್ಲಿ ಅವರು ಕೂಡ ವರ್ಕ್ ಫ್ರಂ ಹೋಂ ಆರಂಭಿಸಿದ್ದರು. ಟೀಮ್ ಸದಸ್ಯರ ನೆಟ್‌ವರ್ಕ್ ತೊಂದರೆ ಹಾಗೂ ಲ್ಯಾಪ್‌ಟಾಪ್ ತೊಂದರೆಯಿಂದಾಗಿ , ಹೆಚ್ಚಿನ ಕೆಲಸವನ್ನು ಮಾಡಬೇಕಾಗಿತ್ತು. ದಿನಕ್ಕೆ 12-13 ತಾಸುಗಳ ಕಾಲ ಕೆಲಸ ಮಾಡುತ್ತಿದ್ದರು.
ಸಾಕಷ್ಟು ಕರೆಗಳನ್ನು ಅಟೆಂಡ್ ಮಾಡಬೇಕಿತ್ತು, ಜೊತೆಗೆ ಮೀಟಿಂಗ್‌ಗಳು ಕೂಡ ಇರುತ್ತಿದ್ದವು. ಕೆಲಸದ ಸಮಯದಲ್ಲೇ ಊಟ, ತಿಂಡಿಯನ್ನು ಕೂಡ ಮಾಡುತ್ತಿದ್ದರು. ಒಂದು ತಿಂಗಳ ಬಳಿಕ ಕಾಲಿನಲ್ಲಿ ಊತ ಕಾಣಿಸಿಕೊಂಡಿತ್ತು, ವೈದ್ಯರ ಬಳಿ ಹೋಗಿ ಚಿಕಿತ್ಸೆಎ ಪಡೆದುಕೊಂಡಿದ್ದರು. ಸ್ವಲ್ಪ ದಿನಗಳ ನಂತರ ಉಸಿರಾಟದಲ್ಲಿ ಏರು ಪೇರು ಉಂಟಾಗಿತ್ತು, ನಾಳೆ ಸರಿ ಹೋಗಬಹುದು ಎಂದು ಅದರ ಬಗ್ಗೆ ಯೋಚನೆ ಮಾಡುವುದು ಮರೆತರು, ಕೆಲಸವನ್ನು ಮುಂದುವರೆಸಿದರು.
ಒಂದು ದಿನ ಏಕಾಏಕಿ ಕುಸಿದುಬಿದ್ದರು, ಐದು ನಿಮಿಷಗಳ ಕಾಲ ಪ್ರಜ್ಞೆ ಇರಲಿಲ್ಲ, ಅವರ ಮನೆಯ ಸುತ್ತಮುತ್ತಲಿನ ಮನೆಯವರು ಬಂದು ಪ್ರಥಮ ಚಿಕಿತ್ಸೆ ನೀಡಿದ್ದರು. ರಕ್ತ ಪರೀಕ್ಷೆ ಮಾಡಿದ್ದರು. ಕಾಲಿನಲ್ಲಿ ರಕ್ತ ಹೆಪ್ಪುಗಟ್ಟಿದೆ ಎಂದು ತಿಳಿಸಿದ್ದರು. ಒಮ್ಮೆ ಕಾಲಿನಲ್ಲಿ ರಕ್ತ ಹೆಪ್ಪುಗಟ್ಟಿದರೆ ಅದು ಶ್ವಾಸಕೋಶಕ್ಕೆ ಹೋಗುವ ಸಾಧ್ಯತ ಇರುತ್ತದೆ. ಹಾಗಾಗಿಯೇ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು.null
ಒಂದು ತಿಂಗಳ ಕಾಲ ರಜೆ ತೆಗೆದುಕೊಂಡರು, ಈ ವಿಚಾರವನ್ನು ತಮ್ಮ ಬಳಿ ಹಂಚಿಕೊಂಡರು, ಈ ವಿಷಯವರು ಅವರು ತಮ್ಮ ಜೀವನದ ದಿಕ್ಕನ್ನೇ ಬದಲಾಯಿಸಿತು. ಕೆಲಸದ ಜೊತೆಗೆ ಆರೋಗ್ಯವೂ ಕೂಡ ಎಷ್ಟು ಮುಖ್ಯ ಎಂಬುದನ್ನು ಮನಗಂಡಿದ್ದಾರೆ. ನಿಮ್ಮ ಆರೋಗ್ಯವೇ ಸರಿ ಇಲ್ಲದಿದ್ದರೆ ನಿಮ್ಮ ಇಡೀ ಜೀವನವೇ ದುಃಖಭರಿತವಾಗುತ್ತದೆ.
ಪ್ರತಿ ಎರಡು ತಾಸಿಗೊಮ್ಮೆ 5-10 ನಿಮಿಷಗಳ ಬ್ರೇಕ್ ತೆಗೆದುಕೊಳ್ಳಬೇಕು, ಹಾಸಿಗೆಯಲ್ಲಿ ಕುಳಿತು ಕೆಲಸ ಮಾಡುವುದನ್ನು ಬಿಡಿ, ಪ್ರತಿ ದಿನ ಕನಿಷ್ಠ 30 ನಿಮಿಷಗಳ ಕಾಲ ವ್ಯಾಯಾಮ ಮಾಡಿ, ಯಾವುದೇ ಕಾರಣಕ್ಕೂ ಬ್ರೇಕ್ ತಗಳದೆ ಕೆಲಸ ಮಾಡಬೇಡಿ.