ಅಮೀನಗಡ : ಹುನಗುಂದ ತಾಲೂಕಿನ ಸೊಳೇಭಾವಿ ಗ್ರಾಮದಲ್ಲಿ ಇಂದು ಸಾಯಂಕಾಲ ೬:೩೦ ಕ್ಕೆ ಪ್ರಾರಂಭವಾದ ಈ ವಿಶೇಷ ಕಾರ್ಯಕ್ರಮವೇ ಭಾವನೆಗಳನ್ನು ಹೊತ್ತು ತಂದ ಕಿಂದರಜೋಗಿ, ಎಂಬ ವಿನೂತನ ಕಾರ್ಯಕ್ರಮದ ಮೂಲಕ ಇಂದು 132 ಅಂಚೆ ಇಲಾಖೆಯ ಪೊಸ್ಟ ಮನ್ಗಳಿಗೆ ಗೌರವ ಸತ್ಕಾರ ಮಾಡುವ ಮೂಲಕ ಅವರ ಕರ್ತವ್ಯ ಪಾಲನೆ ಬಗ್ಗೆ ಯುವ ಬ್ರಿಗೇಡ್ ನ ಸಂಸ್ಥಾಪಕರು ಹಾಗೂ ಅಧ್ಯಕ್ಷರಾದ ಚಕ್ರವರ್ತಿ ಸೂಲಿಬೆಲೆ ಅವರ ನೇತೃತ್ವದಲ್ಲಿ ಬಹಳ ಅದ್ದೂರಿಯಾಗಿ ಕಾರ್ಯಕ್ರಮ ಜರುಗಿತು.

ಸಭೆ ಉದ್ದೇಶಿಸಿ ಮಾತನಾಡಿದ ಚಕ್ರವರ್ತಿ ಸೂಲಿಬೆಲೆ ಅವರು ಯುವ ಬ್ರಿಗೇಡ್ನ ಅನೇಕ ಯುವ ಪಡೆ ನಮ್ಮ ಕಾರ್ಯಕರ್ತರು ರಾಜ್ಯದಲ್ಲಿ ಅನೇಕ ಜಿಲ್ಲೆಯಲ್ಲಿ ಗ್ರಾಮದ ಸಮಗ್ರ ಕಲ್ಯಾಣಿಗಳನ,ರಸ್ತೆ, ಹಾಗೂ ಕೆರೆಗಳನ, ಸಾರ್ವಜನಿಕ ಸ್ಥಳ, ಆಸ್ಪತ್ರೆ, ದೇವಸ್ಥಾನ ಹೀಗೆ ಅನೇಕ ರೀತಿಯಲ್ಲಿ ನಮ್ಮ ಯುವ ಪಡೆ ಸ್ವಚ್ಚತಾ ಕಾರ್ಯ ಮಾಡುತ್ತಾ ಬಂದಿದೆ ರಾಜ್ಯದಲ್ಲಿ ಯಾರೂ ಗುರುತಿಸಲಾಗದ,ಸರಕಾರ ಕೂಡ ಇವರನ್ನು ಗುರುತಿಸಲಿಲ್ಲ ಬರೀ ವೈದ್ಯರು,ನರ್ಸ್, ಆಶಾ ಕಾರ್ಯಕರ್ತೆ, ಅಂಗನವಾಡಿ,ಇವರಷ್ಟೇ ಕರೋನ ವಾರಿಯಸ್೯ ಎಂದರು ಆದರೆ ಕರೋನ ಸಮಯದಲ್ಲಿ ಲಾಕ್ ಡೌನ್ ಮಧ್ಯ ಇವರೂ ಕೂಡ ಸೇವೆ ಮಾಡಿದ್ದಾರೆ ಎಂಬ ಮನವರಿಕೆ ಯಾರಿಗೂ ಬರಲಿಲ್ಲ ಹೀಗಾಗಿ ನಮ್ಮ ಯುವ ಬ್ರಿಗೇಡ್ ಇವನ್ನೂ ಕೂಡ ಗುರುತಿಸಿ ಅವರಿಗೆ ಈ ಸನ್ಮಾನ ಮಾಡುವ ಮೂಲಕ ಅವರ ಸೇವೆಗೆ ನಮ್ಮದೊಂದು ಸಲಾಮ್ ಎಂದರು.

ಗ್ರಾಮಗಳು ಉದ್ದಾರ ಬರಿ ಗ್ರಾಮ ಪಂಚಾಯತಿ ಅಧ್ಯರು,ಸದಸ್ಯರ ,ಜವಾಬ್ದಾರಿ ಅಲ್ಲ ಈ ಗ್ರಾಮದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯ , ಎಲ್ಲರೂ ತಮ್ಮ ಮನೆ ,ಬಿದಿಗಳನ ಸ್ವಚ್ಚವಾಗಿ ಇಡುವುದು ಎಲ್ಲರ ಜವಬ್ದಾರಿ ಎಂದರು, ಈ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಪುಲ್ಮಾದಲ್ಲಿ ಮಡಿದ ವೀರ ಯೋಧರ ಹುತಾತ್ಮ ದಿನವನ್ನು ನಾವು ಇಂದು ಪ್ರೇಮಿಗಳ ದಿನದ ಬದಲಾಗಿ ಇದೇ ಪ್ರೇಮವನ್ನು ಈ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿ

ಹಗಲು – ರಾತ್ರಿ ಈ ದೇಶವನ್ನು ಕಾಯುತ್ತಿರುವ ನಮ್ಮ ವೀರ ಯೋಧರ ನೆನಪಿಗಾಗಿ ನಮ್ಮ ಯುವ ಬ್ರಿಗೇಡ್ ಪ್ರೇಮಿಗಳ ದಿನದ ಬದಲು ” ವೀರ ಯೋಧರ ದಿನವನ್ನಾಗಿ ಆಚರಣೆ ಮಾಡಲು ಕರೆ ನೀಡಿದರು. ಈ ದೇಶಕ್ಕಾಗಿ ಅನೇಕ ವೀರ ಸಾವರ್ಕರ್ ಅಂತಹ ದಿಟ್ಟ ಹೋರಾಟ ಗಾರರು ಹಾಗೂ ಮದನಲಾಲ್ ದಿಂಗ್ರಾ ಅವರಂತಹ ರಾಷ್ಟ್ರ ಪ್ರೇಮದ ದಿಟ್ಟ ಹೋರಾಟ ಗಾರರ ಬಗ್ಗೆ ಅವರ ದೇಶ ಪ್ರೇಮದ ಬಗ್ಗೆ ಇಂದು ನಾವು ಜಾಗೃತಿಯನ್ನು ಯುವಕರಲ್ಲಿ ತುಂಬಬೇಕಾಗಿದೆ ಎಂದರು.

ಈ ದೇಶದ ಪ್ರಾದಾನಿ ನರೇಂದ್ರ ಮೋದಿಯವರು ಈ ಇಡಿ ಭಾರತವನ್ನು ವಿಶ್ವದಲ್ಲಿ ಎಲ್ಲಾ ದೇಶಗಳು ಭಾರತದ ಸ್ನೇಹ ಹಾಗೂ ವಿಶ್ವಾಸವನ್ನು ಬೆಳೆಸಲು ಬಯಸುತ್ತಿವೆ , ಕರೋನ ಲಸಿಕೆ ಕಂಡು ಹಿಡಿದ ರಾಷ್ಟ್ರಗಳ ಸಾಲಲ್ಲಿ ಮೂರನೇ ಸ್ಥಾನ ಇದೆ, ಆದರೆ ಅನೇಕ ರಾಷ್ಟ್ರಗಳಿಗೆ ಭಾರದ ದೇಶದ ಲಸಿಕೆ ಮೇಲೆ ಇರುವಷ್ಟು ವಿಶ್ವಾಸ ಬೇರೆ ಯಾವ ದೇಶದ ಮೇಲೆ ಇಲ್ಲ ,ಮೊದ ಮೊದಲು , ಚೀನಾ, ರಷ್ಯಾ, ಅಮೇರಿಕ, ಜಪಾನ್ ದೇಶಗಳು ಲಸಿಕೆಯನ್ನು ಭಾರತಕ್ಕೆ ಕೊಡುತ್ತವೆ,

ಎಂದಾಗಲೂ ಅದನ ಒಪ್ಪಲಿಲ್ಲ ಕಾರಣ ನಮ್ಮ ದೇಶದ ವಿಜ್ಞಾನಿಗಳನ ಈ ಸಂಧರ್ಭದಲ್ಲಿ ನಾನು ಅವರಿಗೆ ಒಂದು ಸಲಾಮ್ ಹೇಳತಿನಿ ಇಡೀ ವಿಶ್ವದಲ್ಲೇ ನಂಬರ್ ೦೧, ಕೊವ್ಯಾಕ್ಸೀನ್ ಎಂಬ ಕರೋನ ಲಸಿಕೆ ಕಂಡು ಹಿಡಿದು ಭಾರತ ನೆರೆಯ ನಮ್ಮ ಚಿಕ್ಕ ಚಿಕ್ಕ ಬಡ ರಾಷ್ಟ್ರಗಳಿಗೂ ಕರೋನ ವಾರಿಯಸ್೯ ಗಳಿಗೆ ಮೊದಲು ಉಚಿತ ಲಸಿಗೆ ನೀಡಿದ ಹೆಮ್ಮೆಯ ದೇಶ ಎಂದರು. ಅಷ್ಟೇ ಅಲ್ಲ ನಮ್ಮ ಶತ್ರು ರಾಷ್ಟ್ರ ಗಳಿಗೂ ಲಸಿಕೆ ನೀಡಿದ ವಿಶಾಲ ದೇಶ ನಮ್ಮದು ಎಂದು ಹೇಳಲು ಹೆಮ್ಮೆ ಅನಿಸುತ್ತದೆ. ಆದರೆ ನಮ್ಮ ದೇಶದ ಕೆಲವು ರಾಜಕೀಯ ನಾಯಕರು ಪಾಕಿಸ್ತಾನದ ಮೇಲೆ ನಡೆದ ಏರ್ ಸರ್ಜಿಕಲ್ ಟ್ರೈಕ್ ಸುಳ್ಳು ಎಂದರು.ಅನುಮಾನ ವ್ಯಕ್ತಪಡೆಸೊದು ನಮ್ಮ ನಿಮ್ಮಂತವರ ಮೇಲೆ ಮಾಡಲಿ ಆದರೆ ಈ ದೇಶವನ್ನು ಕಾಯೊ ಯೋಧರ ಮಾತಿನ ಮೇಲೆ ನಂಬಿಕೆ ಇಲ್ಲ ಅಂದ್ರೆ ಅವ ಯಾವ ಮಗ ರೀ ಎಂದು ರಾವುಲ್ ಗಾಂದಿ ಅವರನ್ನು ಕಾಲು ಎಳೆದರು. ಕಾರ್ಯಕ್ರಮ ಉದ್ದಕ್ಕೂ ದೇಶ ಪ್ರೇಮ ಹಾಗೂ ವೀರ ಯೋಧರ ಬಗ್ಗೆ ಮಾತ್ರ ಭಾಷಣ ಮೀಸಲಾಗಿತ್ತು. ಇವರ ಭಾಷಣ ಕೇಳಲು ಬಂದ ಅಭಿಮಾನಿಗಳಿಗೆ ಖುಷಿ ಕೊಡಲಿಲ್ಲ , ಯುವ ಬ್ರಿಗೇಡ್ ಗೆ ನಿಮ್ಮೆಲ್ಲರ ಸಹಕಾರ ಇರಲಿ ಎಂದು ಭಾಷಣ ಮುಕ್ತಾಯ ಮಾಡಿದರು.

ಈ ಸಂಧರ್ಭದಲ್ಲಿ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪ,ಪೂ, ಶ್ರೀ ಒಪ್ಪತ್ತೇಶ್ವರ ಮಹಾ ಸ್ವಾಮಿಗಳು ಗುಳೇದಗುಡ್ಡ, ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲಿ,ಕೃಷ್ಣ ರಾಮದುರ್ಗ,ವರ್ಧಮಾನ,ತ್ಯಾಗಿ,ಇದ್ದರು.

ಶ್ರೀಧರ ನೀರಂಜನ,ನೀಲಪ್ಪ ಪೂಜಾರಿ, ನಾಗೇಶ ಗಂಜಿಹಾಳ ರಮೇಶ ಮಡಿವಾಳರ, ಬಾಹುಬಲಿ ಮಣಿ, ರಾಮಚಂದ್ರ ನೆಮದಿ,ಯಮನೂರ ಹುಲ್ಯಾಳ, ಪರಶುರಾಮ ಹುಲ್ಯಾಳ, ಗಣಪತಿ ಬಸವಾ,ಅಜಯ ಭಜಂತ್ರಿ, ಮುಂತಾದ ಯುವಕರು ಈ ಭಾವಣೆಗಳ ಕಿಂದರಜೋಗಿ ಕಾರ್ಯಕ್ರಮ ಆಯೋಜಿಸಿದ್ದರು.

ಇಡಿ ಸೊಳೇಭಾವಿ ಗ್ರಾಮದ ಜನತೆ ಯುವ ಬ್ರಿಗೇಡ್ ಕಾರ್ಯಕರ್ತರ ಈ ವಿನೂತನ ಕಾರ್ಯಕ್ರಮ ಹಾಗೂ ಸೊಳೇಭಾವಿ ಗ್ರಾಮದಲ್ಲಿ ಪ್ರತಿ ರವಿವಾರ ಸರಕಾರಿ ಆಸ್ಪತ್ರೆ ಹಾಗೂ ಗ್ರಾಮದ ಪ್ರಮುಖ ರಸ್ತೆಗಳನ ಸ್ವಚ್ಚ ಮಾಡಿದ್ದು ಶ್ಲಾಘನೀಯ ಎಂದರು.
ಇಂತಹ ಸಂಘಟನೆಯ ಮೂಲಕ ನಮ್ಮ ಊರು ಯುವಕರು ದೇಶ ಪ್ರೇಮ,ಕಲಿಬೇಕಾದ್ದದ್ದು ಬಹಳ ಇದೆ ಎಂದರು. ಕಾರ್ಯಕ್ರಮದ ನಿರೂಪಣೆ ರಾಘವೇಂದ್ರ ನಿರಂಜನ ಅವರು ನಡೆಸಿ ಕೊಟ್ಟರು.
ವರದಿ: ಮುಸ್ತಫಾ ಮಾಸಾಪತಿ,
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News