

ಗುಡೂರ sc : ನಾಡು ಕಂಡ ಅಪ್ರತಿಮ ಕೊರಮ ಜನಾಂಗದ ಕುಲ ಗುರು , ಕಾಯಕ ಯೋಗಿ ಹಾಗೂ ಶಿವಶರಣ ಶ್ರೀ ನೂಲಿ ಚಂದಯ್ಯನವರ ೯೧೬ ನೇ ಜಯಂತಿಯನ್ನು ಇಂದು ಹುನಗುಂದ ತಾಲೂಕಿನ ಗುಡೂರು sc ಗ್ರಾಮದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು. ಶಿವಶರಣ ನೂಲಿ ಚಂದಯ್ಯನವರು ಕಾಯಕ ಹಾಗೂ ತಮ್ಮ ವಚನಗಳ ಮೂಲಕ ಬಸವಣ್ಣನವರ ವಚನಾಂಕಿತವಾದ “ಕಾಯಕವೇ ಕೈಲಾಸ, ಕಾಯಕವೇ ಕಡ್ಡಾಯ ಎಂಬ ಸಂದೇಶವನ್ನು ನಾಡಿಗೆ ಸಾರಿ ಕಾಯಕ ನಿಷ್ಠೆ ಮೆರೆದವರು. ಗುರು, ಲಿಂಗ, ಜಂಗಮ ತತ್ವವನ್ನು ಜಗತ್ತಿಗೆ ಸಾರಿ, ನುಡಿದಂತೆ ನಡೆದ ಶ್ರೇಷ್ಠ ಶಿವಶರಣರಲ್ಲಿ ನಮ್ಮ ನೂಲಿಯ ಚಂದಯ್ಯನವರು ಒಬ್ಬರು ಎಂದು ಗುಡುರೂ ಗ್ರಾಮ ಘಟಕದ ಕೊರಮ ಸಮಾಜದ ಉಪಾಧ್ಯಕ್ಷ ಗದ್ದೆಪ್ಪ ಭಜಂತ್ರಿ ಅವರು ಈ ಸರಳ ಸಮಾರಂಭ ಉದ್ದೇಶಿಸಿ ಮಾತನಾಡಿದರು.


೯೧೬ನೇ ಶಿವರಣ ನೂಲಿ ಚಂದಯ್ಯವರ ಜಯಂತಿ ಅಂಗವಾಗಿ ಭಾವಚಿತ್ರ ಮೆರವಣಿಗೆ ಯನ್ನು ಮುತೈದೆಯರು ಆರತಿ ಹಿಡಿದು ವಾಧ್ಯ ಮೆಳದೊಂದಿಗೆ ಗ್ರಾಮದ ಪ್ರಮುಖ ಬಿದಿಗಳಲ್ಲಿ ಅದ್ದೂರಿ ಮೆರವಣಿಗೆ ಜರುಗಿತು. ಮೆರವಣಿಗೆ ನಂತರ ಸಮಾಜ ಬಂದವರು ಅನ್ನ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.ಈ ಉತ್ಜವ ಜಯಂತಿಯ ಅಧ್ಯಕ್ಷತೆಯನ್ನು ಶ್ರೀ ಗದ್ದೆಪ್ಪ ಭಜಂತ್ರಿ ವಹಿಸಿಕೊಂಡಿದ್ದರು. ಈ ಜಯಂತಿಯಲ್ಲಿ ಶ್ರೀಮತಿ ಅನ್ನಪೂರ್ಣ ಭಜಂತ್ರಿ. ಗ್ರಾಂ ಪಂ. ಸದಸ್ಯರು.ಶ್ರೀ ಹನಮಂತ ಭಜಂತ್ರಿ ಶ್ರೀ ಶಿವಾನಂದ ಭಜಂತ್ರಿ ಪ್ರಥಮ ದರ್ಜೆ ಗುತ್ತಿಗೆದಾರರು. ಶ್ರೀ ಶಶಿಕಾಂತ್ ಭಜಂತ್ರಿ ಎಸ್.ಡಿ.ಎಂ.ಸಿ. ಅಧ್ಯಕ್ಷರು ಗುಡೂರ್.ಶ್ರೀ ಮಾರುತಿ ಭಜಂತ್ರಿ ಪತ್ರಕರ್ತರು ಶ್ರೀ ಯಮನೂರ ಭಜಂತ್ರಿ ಸಮಾಜದ ಮುಖಂಡರು ಶ್ರೀ ಶೈಲ್ ಭಜಂತ್ರಿ ಸಮಾಜದ ಹಿರಿಯರು ಶ್ರೀ ಶಿವಪ್ಪ ಭಜಂತ್ರಿ ಸಮಾಜದ ಹಿರಿಯರು ಸಮಾಜದ ಹಿರಿಯರು ಶ್ರೀ ಮಲಿಯಪ್ಪ ಭಜಂತ್ರಿ ಶ್ರೀ ಹುಲ್ಲಪ್ಪ ಭಜಂತ್ರಿ.ಶ್ರೀ ರಾಮಪ್ಪ ಭಜಂತ್ರಿ ಸಮಾಜದ ಹಿರಿಯರುಶ್ರೀ ಶ್ರೀ ಅಶೋಕ ಭಜಂತ್ರಿ ಶ್ರೀ ಮಹಾಂತೇಶ ಭಜಂತ್ರಿ ಶ್ರೀಮತಿ ಗಂಗವ್ವ ಭಜಂತ್ರಿ.ಶ್ರೀಮತಿ ಕಸ್ತೂರವ್ವ ಭಜಂತ್ರಿ ಶ್ರೀ ಬೊಮ್ಮಣ್ಣ ಭಜಂತ್ರಿ ಸಮಾಜದ ಅನೇಕ ಯುವಕರು ಪಾಲ್ಗೊಂಡಿದ್ದರು.


ವರದಿ : ದುರ್ಗಾಪ್ರಸಾದ ರಾಮಣ್ಣ ಭಜಂತ್ರಿ
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News