Breaking News

ಎ.ವ್ಹಿ ಸ್ಟುಡಿಯೋಸ್ ಅಡಿಯಲ್ಲಿ ನಿರ್ದೇಶಕ ವಿಜಯಕುಮಾರ್ ನಿರ್ಮಿಸುತ್ತಿರುವ ಮೈ ಹೀರೋ’ ಮೂರನೇ ಹಂತದ ಚಿತ್ರೀಕರಣ ಮುಕ್ತಾಯ !


  • ಬೆಂಗಳೂರ : ಎ.ವ್ಹಿ ಸ್ಟುಡಿಯೋಸ್ ಅಡಿಯಲ್ಲಿ ನಿರ್ದೇಶಕ ಹಾಗೂ ನಿರ್ಮಾಪಕ ಅವಿನಾಶ್ ವಿಜಯಕುಮಾರ್ ನಿರ್ಮಿಸುತ್ತಿರುವ ಬಹುಭಾಷೆಗಳ ‘ಮೈ ಹೀರೋ ಚಲನಚಿತ್ರದ ಮೂರನೇ ಹಂತದ ಚಿತ್ರೀಕರಣ ಅಮೇರಿಕಾದಲ್ಲಿ ಮುಕ್ತಾಯಗೊಂಡಿತು. ಸ್ಯಾನ್ ಪ್ರಾನ್ಸಿಸ್ಕೋ, ಲಾಸ್ ಏಂಜಲಿಸ್, ಸ್ಯಾನ್ ಹೋಸೆ ,ಬಿಗ್‌ಸರ್ ಇನ್ನೂ ಮುಂತಾದ ಸ್ಥಳಗಳಲ್ಲಿ ಸುಮಾರು ಹದಿನೈದು ದಿನಗಳ ಕಾಲ “ಮೈ ಹೀರೋ” ಸಿನಿಮಾದ ಚಿತ್ರೀಕರಣ ಚಿತ್ರತಂಡ ಯಶಸ್ವಿಗೊಳಿಸಿದ್ದಾರೆ.
    ಮೊದಲ ಹಂತದಲ್ಲಿ ಮೂಡಗೆರೆ, ಚಿಕ್ಕಮಗಳೂರು, ದೇವರಮನೆ ಬೆಟ್ಟಗುಡ್ಡ ಸೌಂದರ್ಯದ ನಡುವೆ ಚಿತ್ರೀಕರಣ ಯಶಸ್ವಿಯಾಗಿ ಮುಗಿಸಿದ್ದ ತಂಡ ಚಿತ್ರಕತೆಯ ಸನ್ನಿವೇಶಕ್ಕೆ ಸಂಬಂಧಪಟ್ಟ ದೃಶ್ಯಗಳಿಗಾಗಿ ಮಧ್ಯಪ್ರದೇಶದಲ್ಲಿರುವ ಮಹೇಶ್ವರ್, ಇಂದೋರ್, ಮಾಂಡೋ, ಉಜೈನ್, ಪಾತಾಲ್ ಪಾನಿ, ಹಾಗೂ ಹಲವಾರು ಐತಿಹಾಸಿಕ ಸ್ಥಳಗಳಲ್ಲಿ ಸುಮಾರು ಹದಿನೈದು ದಿನಗಳ ಕಾಲ ಚಿತ್ರೀಕರಣ ನಡೆಸಿತ್ತು.
  • ನಾಲ್ಕು ರಾಷ್ಟ್ರೀಯ ಪ್ರಶಸ್ತಿ ವಿಜೇತರಾದ ಹಿರಿಯ ನಟ ದತ್ತಣ್ಣ, ಕಿರುತೆರೆಯಲ್ಲಿ ಜನರ ಮನಸ್ಸನ್ನು ಗೆದ್ದಿರುವ ಅಂಕಿತ ಅಮರ್ ಮತ್ತು ಬಾಲಿವುಡ್‌ನ ಖ್ಯಾತ ಹಾಸ್ಯ ನಟ ಕ್ಷಿತೀಜ್ ಪವಾರ್ , ಖ್ಯಾತ ಬಹುಭಾಷಾ ನಟರಾದ ಪ್ರಕಾಶ್ ಬೆಳವಾಡಿ , ನಿರಂಜನ ದೇಶಪಾಂಡೆ, ಕಾಂತಾರ ಖ್ಯಾತಿಯ ನವೀನ್ ಬೋಂಡಲ್, ವೇದ ಖ್ಯಾತಿಯ ತನುಜ, ಡ್ರಾಮಾ ಜ್ಯೂನಿರ‍್ಸ್ ನ ವೇದಿಕ ಕುಶಾಲ, ಡಿಜಿಲಾಲಿ ರೆಜ್-ಕಲ್ಹ, ಸಿನೇಮಾ ನಿರ್ದೇಶಕರಾದ ಹರಿಹರನ್ ಬಿಪಿ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಮನ ಗೆದ್ದಿರುವ ಸಿದ್ದು ಮಂಡ್ಯ ‘ಮೈ ಹೀರೋ ’ ಚಿತ್ರಕ್ಕೆ ಕೈ ಜೋಡಿಸಿ ಹೊಸಹುರುಪು ತಂದಿದ್ದಾರೆ. ಈ ಚಿತ್ರದಲ್ಲಿ ಎರಡು ಕನ್ನಡ, ಒಂದು ಹಿಂದಿ ಹಾಗೂ ಒಂದು ಇಂಗ್ಲೀಷ್ ಹಾಡುಗಳು ಇವೆ. ಇಂಗ್ಲೀಷ್ ಹಾಡುಗಳನ್ನು ಯುಎಸ್‌ನ ಖ್ಯಾತ ಸಂಗೀತ ನಿರ್ದೇಶಕರೆ ಸಂಯೋಜಿಸಿದ್ದಾರೆ. ಹಾಲಿವುಡ್‌ನ ಖ್ಯಾತ ತಂತ್ರಜ್ಞರು ಕೂಡ ಕೆಲಸ ಮಾಡಿರುವುದು , ಹಾಲಿವುಡ್‌ನ “ರನ್‌ಅವೇಟ್ರೈನ್” ಚಿತ್ರದಲ್ಲಿನ ಪಾತ್ರಕ್ಕಾಗಿ ಎರಿಕ್ ರಾಬರ್ಟ್ಸ್ರವರು ಅಕಾಡೆಮಿ ಪ್ರಶಸ್ತಿ ಮತ್ತು“ಸ್ಟಾರ್ ೮೦” ಮತ್ತು“ಕಿಂಗ್‌ಆಫ್ ದಿ ಜಿಪ್ಸಿ” ಚಿತ್ರದಲ್ಲಿನ ಪಾತ್ರಕ್ಕಾಗಿ ಮೂರು ಬಾರಿಗೋಲ್ಡನ್‌ಗ್ಲೋಬ್ ನಾಮಿನಿಯಾಗಿ ಆಯ್ಕೆಯಾಗಿದ್ದ ಖ್ಯಾತ ನಟ “ಎರಿಕ್ ರಾಬರ್ಟ್ಸ್” ಹಾಗೂ ಹಾಲಿವುಡ್‌ನ ಮತ್ತಷ್ಟು ಕಲಾವಿದರು ಅಭಿನಯಿಸಿರುವುದು “ಮೈ ಹೀರೋ” ಚಿತ್ರದ ವಿಶೇಷತೆ. ಈ ಚಿತ್ರದ ತಾಂತ್ರಿಕ ವರ್ಗದಲ್ಲಿ ಗಗನ್ ಬಧಾರಿಯಾ ಸಂಗೀತ , ವೀನಸ್ ನಾಗರಾಜ ಮೂರ್ತಿ ಛಾಯಾಗ್ರಹಣ, ಕಥೆ, ಚಿತ್ರಕಥೆಯನ್ನು ನಿರ್ದೇಶಕ ಹಾಗೂ ನಿರ್ಮಾಪಕ ಅವಿನಾಶ್ ವಿಜಯಕುಮಾರ್ ಹಾಗೂ ಮುತ್ತುರಾಜ್ ಟಿ, ಸಂಭಾಷಣೆ ಬರೆದಿದ್ದಾರೆ , ಪಿ ಆರ್ ಓ ಸುಧೀಂದ್ರ ವೆಂಕಟೇಶ್, ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಗಿ, ಸಂಕಲನ ಮುತ್ತುರಾಜ್ ಟಿ, ನಿರ್ಮಾಣ ನಿರ್ವಹಣೆ ಹರಿಹರನ್ ಬಿ.ಪಿ. ಮೊದಲಾದವರು ತಂತ್ರಜ್ಞರಲ್ಲದೆ ಹಾಲಿವುಡ್‌ನ ತಂತ್ರಜ್ಞರು ಸಹ ಚಿತ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ವರದಿ:
ಡಾ.ಪ್ರಭು ಗಂಜಿಹಾಳ
ಮೊ: ೯೪೪೮೭೭೫೩೪೬

About vijay_shankar

Check Also

ಎ, ನಾಗರಾಜ ರೆಡ್ಡಿ ನಿರ್ಮಿಸುತ್ತಿರುವ ‘ಮುಗಿಲ ಮಲ್ಲಿಗೆ’ ಕನ್ನಡ ಚಲನಚಿತ್ರ ಚಿತ್ರೀಕರಣ ಮುಕ್ತಾಯ

Veryಬೆಂಗಳೂರ : ಸ್ನೇಹಾಲಯಂ ಕ್ರಿಯೇಷನ್ಸ್ ಸಮರ್ಪಿಸಿ ಎ.ಎ.ನ್.ಆರ್ ಪಿಕ್ಚರ್ಸ್ ಬ್ಯಾನರ್ಅಡಿಯಲ್ಲಿ ಎ. ನಾಗರಾಜ ರೆಡ್ಡಿ ನಿರ್ಮಿಸುತ್ತಿರುವ ‘ಮುಗಿಲ ಮಲ್ಲಿಗೆ’ ಕನ್ನಡಚಲನಚಿತ್ರದ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.