

ಅಮೀನಗಡ: ಇಂದು ಸೂಳೇಭಾವಿ ಗ್ರಾಮದಲ್ಲಿ ಅಮೀನಗಡ ಪೊಲೀಸ್ ಇಲಾಖೆಯಿಂದ ಸಾರ್ವಜನಿಕವಾಗಿ ಮನೆ ಮನೆ ಪೊಲೀಸ್ ಕಾರ್ಯಕ್ರಮ ಹಮ್ಮಿಕೊಂಡಿತ್ತು, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಪಿಡ್ಡಪ್ಪ ಕುರಿ ಕ್ರೈಂ ಪಿ,ಎಸ್,ಐ ಶ್ರೀ ವಾಯ್,ಎಚ್ ಪಠಾಣ್ ಅವರು ರಿಬ್ಬನ್ ಕಟ್ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಠಾಣೆಯ ಹವಾಲ್ದಾರ್ ಶಿವಾನಂದ ಕಟ್ಟಿಮನಿ ಮಾತನಾಡಿ ಸಾರ್ವಜನಿಕರು ಈ ಮನೆ ಮನೆ ಪೊಲೀಸ್ ಕಾರ್ಯಕ್ರಮದ ಉದ್ದೇಶ ಜನತೆ ಇವತ್ತಿನ ವಾಸ್ತವಿಕ ದಿನಮಾನದಲ್ಲಿ ತುಂಬಾ ಜಾಗ್ರತೆಯಿಂದ ಇರಬೇಕು ಹೆಚ್ಚುತ್ತಿರುವ ಸೈಬರ್ ಕ್ರೈಂ, ಹಾಗೂ ಮನೆ ಕಳ್ಳನತ, ತಡೆಯಲು ತಾವು ಮನೆ ಮುಂದೆ ಬೈಕ್,ಕಾರ್ ನಿಲ್ಲಿಸಿ ಹೋಗುವಾಗ ನಮ್ಮ ಠಾಣೆಗೆ ಮಾಹಿತಿ ನೀಡಿ ಹೋದರೆ ರಾತ್ರಿ ಗಸ್ತಿನ ವೇಳೆ ತಮ್ಮ ಮನೆ ಕಡೆಗೆ ಗಮನ ಹರಿಸುದರಿಂದ ಮನೆ,ಬೈಕ್,ಕಾರ್ ಕಳ್ಳತನ ತಡೆಯಬಹುದು, ಹಾಗೆ ಪೊನ್ ನಲ್ಲಿ ಬ್ಯಾಂಕ್ ವ್ಯವಹಾರದ ಬಗ್ಗೆ OTP ಹಾಗೂ ಯಾವುದೆ ಮಾಹಿತಿ ಜನತೆ ನೀಡಬಾರದು
ತಮಗೆ ಸಂಪೂರ್ಣವಾಗಿ ಖಚಿತ ಪಡಿಸಿಕೊಂಡು ವ್ಯವಹಾರ ಮಾಡಿ, ಎಂದು ಜನತೆ ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಪಂಚಾಯತ್ ಸದಸ್ಯರಾದ ಹುಲಗಪ್ಪ ಕುರಿ,

ಪಂಚಾಯತ ಅಭಿವೃದ್ಮದಿ ಅಧಿಕಾರಿ ಸಂಗಣ್ಣ ಕೂಳ್ಳೊಳ್ಳಿ ರೋಮಣ್ಣ ಭಜಂತ್ರಿ, ಯಮನಪ್ಪ ಭಜಂತ್ರಿ, ಅರವಿಂದಗೌಡ ಪಾಟೀಲ , ಜಗದೇಶ ಎಮ್ಮಿ ಪೊಲೀಸ್ ಸಿಬ್ಬಂದಿಗಳಾದ ಸೋಮರೆಡ್ಡಿ ವಿಟ್ಲಾಪೂರ,,ಆನಂದ ಮಣ್ಣಿಕಟ್ಟಿ,ಪ್ರಶಾಂತ ವಾಲಿಕಾರ, ಬಸವರಾಜ್ ನಾಲತವಾಡ,ಮಹಾಂತೇಶ ಬೋಳರಡ್ಡಿ, ಶಿವನಗೌಡ ಗೌಡರ,ಈರಣ್ಣ ಕಾಖಂಡಿಕಿ ಉಪಸ್ಥಿತಿ ಇದ್ದರು.ಸದರಿ ಈ ಕಾರ್ಯಕ್ರಮ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್

ಹಾಗೂ ಹುನಗುಂದ ಡಿವೈಎಸ್ ಪಿ ವಿಶ್ವನಾಥ ಕುಲಕರ್ಣಿ, ಹಾಗೂ ಹುನಗುಂದ ವೃತ್ತ CPI ಸುನೀಲ ಸವದಿ, ಮತ್ತು ಅಮೀನಗಡ ಪಿಎಸೈ ಶ್ರೀಮತಿ ಜ್ಯೋತಿ ವಾಲಿಕಾರ, ಇವರ ಮಾರ್ಗದರ್ಶನದಲ್ಲಿ ಸಾರ್ವಜನಿಕವಾಗಿ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ ಸೂಳೇಭಾವಿ ಗ್ರಾಮದಲ್ಲಿ ಯಶಸ್ವಿಯಾಗಿ ಪೊಲೀಸ್ ಇಲಾಖೆ ಜಾಗೃತಿ ಮೂಡಿಸಿದರು, ಜನತೆಯ ಈ ಜಾಗ್ರತಿಗೆ ಜನ ಉತ್ತಮ ಸ್ಪಂದನೆ ಮಾಡಿದರು.

ಗ್ರಾಮ ಪಂಚಾಯತಿ ಸದಸ್ಯರಾದ ಹುಲಗಪ್ಪ ಕುರಿ,ಜಹಾಂಗೀರ್ ಜಾಗೀರದಾರ್ ಗ್ಯಾನಪ್ಪ ಗೋನಾಳ ಜಾಗೃತಿ ಮೂಡಿಸಿದರು.
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News