Breaking News

ಕರ್ನಾಟಕ ಪತ್ರಕರ್ತರ ಸಂಘ ಪತ್ರಕರ್ತರಿಗಾಗಿ ರಾಜ್ಯದಲ್ಲಿಯೇ ಉತ್ತಮ ಕೆಲಸ ಮಾಡುತ್ತಿದೆ ಶಾಸಕ ಎಚ್ ವೈ ಮೇಟಿ

                                                      ಬಾಗಿಲಕೋಟೆ -ಜು.30- ಕರ್ನಾಟಕ ಪತ್ರಕರ್ತರ ಸಂಘವು ಇಂದು ಬಾಗಲಕೋಟೆಯ ನಗರದ ಅಕ್ಷಯ್ ಇಂಟರ್ನ್ಯಾಷನಲ್ ಹೋಟೆಲ್ ನಲ್ಲಿ ಪತ್ರಿಕಾ ದಿನಾಚರಣೆ ಮತ್ತು ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಆಯೋಜಿಸಲಾಗಿತ್ತು   ಸಭೆಯ ದಿವ್ಯ ಸಾನಿಧ್ಯವನ್ನ ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದ ಪೋಜ್ಯ ಶ್ರೀ ಅಲ್ಲಮಪ್ರಭು ಸ್ವಾಮಿಗಳು ವಹಿಸಿದ್ದರು.  ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕರಾದ ಎಚ್ ವೈ ಮೇಟಿಯವರು ಆಗಮಿಸಿ ಸಮಾರಂಭವನ್ನ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಇಂದು ಪತ್ರಿಕೆ ನಡೆಸುವುದು ತುಂಬಾ ಕಷ್ಟ, ಪತ್ರಕರ್ತರ ಕೆಲಸ ತುಂಬಾ ಕ್ಲಿಷ್ಟ,  ಸಮಾಜದ ಮತ್ತು ದೇಶದ ಬದಲಾವಣೆಯಲ್ಲಿ ಪತ್ರಿಕಾಕ್ಷೇತ್ರ ಪ್ರಮುಖ ಪಾತ್ರ ವಹಿಸಿದೆ,  ಸಂಘದ ಮತ್ತು ಪತ್ರಕರ್ತರ ಎಲ್ಲಾ ಸಹಕಾರ ಸಹಾಯವನ್ನ ಸರ್ಕಾರದ ಮುಖಾಂತರ ಮಾಡುತ್ತೇನೆ ಈ ಕುರಿತು ಮುಖ್ಯ ಮಂತ್ರಿಗಳಲ್ಲಿ ಮಾತಾನಾಡುತ್ತೇನೆ.  ಪತ್ರಕರ್ತರ ಕಲ್ಯಾಣಕ್ಕಾಗಿ ಶ್ರಮಿಸುವ ಸಮಾರಂಭ ಯಶಸ್ವಿಯಾಗಲಿ ಎಂದು ಹೇಳಿದರು.  ಮೌಕಿಕವಾಗಿ ಧಿರ್ಘ ಚರ್ಚಕೂಟದಲ್ಲಿ ನಗರದಲ್ಲಿ ಮಾಧ್ಯಮ ಪಟ್ಟಿಯಿಂದ ಹೋರಗಡೆ ಕೆಲಸ ಮಾಡುವ ನೂರಾರು ಪತ್ರಕರ್ತರು ಇದ್ದದ್ದು ಈಗ ನನಗೆ ಗೊತ್ತಾಗಿದೆ, ಕಾನಿಪ, ಸಂಘಕ್ಕೆ ಸಿಗುವ ಎಲ್ಕಾ ಸೌಲಭ್ಯಗಳನ್ನು ತಾವು ಪಡೆಯಬಹುದು, ನೀವು ನಿಮ್ಮ ಸಂಘದ ಹೆಸರಲ್ಲಿ ಜಾಗ ಇದ್ದರೆ ಹೇಳಿ ನನ್ನ ಶಾಸಕರ ಅನುದಾನದಲ್ಲಿ ಹಣ ಮಂಜೂರು ಮಾಡಿ ಸರಕಾದಿಂದ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತೇನೆ ಎಂದರು.         

ಸಮಾರಂಭದ ಅಧ್ಯಕ್ಷತೆಯನ್ನ ಮುರುಗೇಶ ಶಿವಪುಜೆ ವಹಿಸಿದ್ದರು ಈ ಸಂದರ್ಭದಲ್ಲಿ ಮಾತನಾಡಿ ಅವರು ಸಂಘವು ಪ್ರಾರಂಭದಿಂದಲೂ ಸರ್ಕಾರ ಮತ್ತು ಯಾರಿಂದಲೂ ಸಹಾಯ ನಿರೀಕ್ಷೆ ಮಾಡದೆ ಸದಸ್ಯರಿಗೆ ಮಾಡುತ್ತಿರುವ ಸಹಾಯಗಳನ್ನ ತಿಳಿಸಿದರು, ಸಂಪಾದಕರು ಮತ್ತು ವಾರದಿಗಾರರಾಲ್ಲದೆ ಈ ಕ್ಷೇತ್ರದಲ್ಲಿ ದುಡಿಯುತ್ತಿರುವ ಎಲ್ಲಾ ಸದಸ್ಯರಿಗೋ 4 ಲಕ್ಷ ರೊ ವಿಮೆ ಮತ್ತು ಹಣಕಾಸಿನ ಸಹಾಯ ಮಾಡುತ್ತಿದೆ ಎಂದು ಹೇಳಿ ಮುಂದಿನ ಯೋಜನೆಗಳ ಬಗ್ಗೆ ತಿಳಿಸಿದರು. ಸಾನಿಧ್ಯ ವಹಿಸಿದ್ದ ಶ್ರೀಗಳು ಮಾತನಾಡಿ ವ್ಯಕ್ತಿಯ ವಿಶೇಷ ಬೆಳವಣಿಗೆಯನ್ನ ಪತ್ರಿಕೆ ಮಾಡುತ್ತಿದೆ, ಗ್ರಾಮೀಣ ಭಾಗದ ಪತ್ರಕರ್ತರನ್ನ ಗುರುತಿಸಿ ಅವರಿಗೆ ವಿಶೇಷ ಸಹಾಯ ಮಾಡುತ್ತಿರುವ ಪ್ರಥಮ ಏಕೈಕ ಸಂಘ ಕರ್ನಾಟಕ ಪತ್ರಕರ್ತರ ಸಂಘ, ಈ ಕೆಲಸ ಉಳಿದ ಸಂಘಗಳಿಗೆ ಮಾದರಿಯಾಗಬೇಕು, ಪತ್ರಕರ್ತರು ಒಳ್ಳಿಯ ಮನಸ್ಥಿತಿ ಇಟ್ಟುಕೊಂಡು ಕೆಲಸ ಮಾಡಬೇಕು, ಇವರ ಜವಾಬ್ದಾರಿ ಮಹತ್ವದ್ದಾಗಿದೆ, ಸಮಾಜದಲ್ಲಿ ಶಾಂತಿ ಮೋಡಿಸುವ ಕೆಲಸವನ್ನು ಮಾಡಬೇಕು, ಸಮಾಜಕ್ಕೆ ಒಳ್ಕೆಯದಾಗಿಸುವ ಮತ್ತು ಒಳ್ಳೆಯದನ್ನು ಮಾಡುತ್ತಿರುವ ವ್ಯಕ್ತಿಗಳನ್ನ ಬೆಳಿಸಿ ಗುರುತಿಸಿ ಸನ್ಮಾನ ಮಾಡಬೇಕು. ಪತ್ರಕರ್ತರಿಗೆ ಇರುವ ಕಷ್ಟಗಳನ್ನು ಪ್ರತಿಬಿಂಬಿಸಿ ಅವುಗಳನ್ನು ನಿವಾರಿಸುವ ಕಾರ್ಯವನ್ನು ಕರ್ನಾಟಕ ಪತ್ರಕರ್ತರ ಸಂಘ ಮಾಡಲಿ ಎಂದು ಆರ್ಶಿವಚನ ನೀಡಿದರು. ವೇದಿಕೆಯಲ್ಲಿ ಸಂಘದ ರಾಜ್ಯ ಪದಾಧಿಕಾರಿಗಳು, ಎಲ್ಲಾ ಜಿಲ್ಲೆಯ ಅಧ್ಯಕ್ಷರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಬಾಗಲಕೋಟೆಯ ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷರಾದ ಡಿ ಬಿ ವಿಜಯಶೆಂಕರ್ ಸ್ವಾಗತಿಸಿದರು, ಸುದೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಾನಯ್ಯಸ್ವಾಮಿ ಹಿರೇಮಠ ಒಂದಿಸಿದರು.

About vijay_shankar

Check Also

MS ಡೌಲಪರ್ಸ್ ಕಂಪನಿ ಹೆಸರಲ್ಲಿ ಸಾರ್ವಜನಿಕರಿಂದ ಲಕ್ಷ ಲಕ್ಷ ಹಣ FD ಡಿಪಾಜಿಟ್ ರೂಪದಲ್ಲಿ  ಕಮತಗಿಯ ಕಾಸಗಿ ಶಿಕ್ಷಕ  ಹುಚ್ಚಪ್ಪ ವಡವಡೊಗಿ ಇವರಿಂದ ಹಗಲು ದರೋಡೆ

MS ಡೌಲಪರ್ಸ್ ಕಂಪನಿ ಹೆಸರಲ್ಲಿ ಸಾರ್ವಜನಿಕರಿಂದ ಲಕ್ಷ ಲಕ್ಷ ಹಣ FD ಡಿಪಾಜಿಟ್ ರೂಪದಲ್ಲಿ ಕಮತಗಿಯ ಕಾಸಗಿ ಶಿಕ್ಷಕ ಹುಚ್ಚಪ್ಪ ವಡವಡೊಗಿ ಇವರಿಂದ ಹಗಲು ದರೋಡೆ

ಕಮತಗಿ: ರಾಜ್ಯದಲ್ಲಿ ಹಣ ಡಬ್ಲಿಂಗ್ ಹಾಗೂ ಶೇರು ಮಾರುಕಟ್ಟೆ ,ಅತೀ ಕಡಿಮೆ ಸಮಯದಲ್ಲಿ ಹಣ ಡಬ್ಲಿಂಗ್ ಜನರ ಆಕರ್ಷಿಸಲು ವಿವಿಧ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.