ಬಾಗಲಕೋಟೆ: ನಗರದ ಹೋಟೆಲ್ ಅಕ್ಷಯ್ ನಲ್ಲಿ ಶ್ರೀಮತಿ ಬಿ ಬಿ ಜಾನ್ ಮುಜಾವರ ನೇತೃತ್ವದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬಾಗಲಕೋಟೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಾಗಲಕೋಟೆ ಸಹಬಾಗಿಯಾಗಿ ಸ್ವಯಂ ಸೇವಾ ಸಂಸ್ಥೆ ಬಾಗಲಕೋಟೆ ಸಹಭಾಗಿತ್ವದಲ್ಲಿ ಕಾನೂನು ಸುಗಮಕಾರರ ಮತ್ತು ಕಾರ್ಯಕ್ರಮಗಳ ಭಾಗಾರ್ಥಿಗಳ ಸಮಾವೇಶ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮತಿ ಹೇಮಾ ಪಸ್ತಾಪುರ್ ನೇರವೇರಿಸಿದರು. ಗೌರವಾನ್ವಿತ ಹಿರಿಯ ದಿವಾನಿ ನ್ಯಾಯಾಧೀಶರು ಅತಿಥಿಯಾಗಿ ಶ್ರೀಮತಿ ಅಕ್ಕಮಹಾದೇವಿ ಕೆ ಎಚ್ ಉಪ ನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಾಗಲಕೋಟೆ ಪ್ರಸ್ತಾವನೆ ಶ್ರೀಮತಿ ಮಾರ್ಟಿನ್ ಮಾರ್ಟಿಸ್ ನಿರ್ದೇಶಕರು ದಿಡ್ಸ್ ಮಂಗಳೂರು ಇವರಿಂದ ನಡೆಯಿತು. ಈ ಸರಳ ಸಮಾರಂಭದಲ್ಲಿ ಅನೇಕ ಅಧಿಕಾರಿಗಳು ಉಪಸ್ಥಿತಿ ಇದ್ದರು.
