ಬಾಗಲಕೋಟೆ: ಸಮಿಪದ ತುಳಸಿಗೇರಿ ಗ್ರಾಮದ ಕುಮಾರಿ ಶಿಲ್ಪಾ ಹೊಸಕೋಟೆ ಇವಳು ಗುಲ್ಬರ್ಗ ವಿಭಾಗ ಮಟ್ಟದ ದಸರಾ ಕ್ರೀಡಾಕೂಟದ ಕುಸ್ತಿಯಲ್ಲಿ ಪ್ರಥಮ ಸ್ಥಾನ ಪಡೆದು ಸ್ಟೇಟ್ ಲೆವೆಲ್ ದಸರಾ ಕ್ರಿಡಾಕೂಟಕ್ಕೆ ಆಯ್ಕೆಯಾಗಿದ್ದಾರೆ . ಇವಳ ಈ ಸಾಧನೆ ನೋಡಿ ಗ್ರಾಮದ ಹಲವಾರು ಮುಖಂಡರು ನಮ್ಮ ಗ್ರಾಮದ ಕೀರ್ತಿಯನ್ನು ಹೆಚ್ಚಿಸಿದ ಶಿಲ್ಪಾ ಮುಂದೆ ರಾಜ್ಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಒಳ್ಳೆಯ ಸಾಧನೆ ಮಾಡಲಿ ಉತ್ತರ ಕರ್ನಾಟಕದ ಹೆಣ್ಣುಮಕ್ಕಳ ಈ ಸಾಧನೆ ಎಲ್ಲಾ ರಂಗದಲ್ಲಿ ಮುಂದೆ ವರೆದು ಈ ನಾಡಿನ ಕೀರ್ತಿ ಬೆಳಗಲಿ ಎಂದು ಇವಳ ತಂದೆ ವೃತ್ತಿಯಲ್ಲಿ ಕುಸ್ತಿ ಪಟು ರಾಮಪ್ಪ ಹೊಸಕೋಟೆ ಹಲವಾರು ಸಲ ಕುಸ್ತಿಯಲ್ಲಿ ಗೆದ್ದು ಸಾಧನೆ ಮಾಡಿದ್ದಾರೆ, ಅವರಂತೆ ಮಗಳು ಸಹ ಈಗ ಸಾಧನೆ ಮಾಡುತ್ತಿದ್ದಾರೆ. ಇವರ ಕೋಚರ್ ಶ್ರೀ ವಿಠ್ಠಲ ವಾಯ್ ಭಜಂತ್ರಿ, ಅವರು ಇವರ ಉತ್ತಮ ಕೋಚ್ ಆಗಿ ಹಲವಾರು ಮಹಿಳಾ ಕಬಡ್ಡಿ ಹಾಗೂ ಕುಸ್ತಿ ಪಟುಗಳನ್ನು ರಾಜ್ಯ ಮಟ್ಟದಲ್ಲಿ ಪ್ರತಿ ನಿಧಿಸುವಂತೆ ಮಾಡಿದ್ದಾರೆ.

ಕುಮಾರಿ ಶಿಲ್ಪಾ ಹೊಸಕೋಟೆ.