
ಗುಡೂರು sc :
ಇಂದು ಇಲಕಲ್ಲ ತಾಲ್ಲೂಕಿನ ಗುಡೂರುsc ಗ್ರಾಮದಲ್ಲಿ ಶ್ರೀ ದುರ್ಗಾದೇವಿ ಕೊರಮ ಸಮಾಜ ಹಾಗೂ ನೂಲಿ ಚಂದಯ್ಯ ಯುತ್ ಸೇವಾ ಸಮಿತಿ ಸಹಯೋಗದೊಂದಿಗೆ ೮ ನೇ ವರ್ಷದ ಶ್ರೀ ದುರ್ಗಾದೇವಿ ಪಲ್ಲಕ್ಕಿ ಉತ್ಸವ ಹಾಗೂ ೮ ನೇ ವರ್ಷದ ವಾರ್ಷಿಕೋತ್ಸವದ ಅದ್ದೂರಿಯಾಗಿ ನಡೆಯಿತು. ಬೆಳಗಿನ ಜಾವ ೫ ಗಂಟೆಗೆ ತಾಯಿ ದುರ್ಗಾಪರಮೇಶ್ವರಿಗೆ ಮಹಾ ಗಂಗಾಜಲ,ಕ್ಷೀರಾಭಿಶೇಖ, ಪಂಚಾಮೃತ ಅಭಿಶೇಖ, ಗಂಧಾಭಿಶೇಖ, ಮುತ್ತೈದೆಯರಿಂದ ಅಷ್ಟ ಮಂಗಾಳರತಿ ಹೀಗೆ ಅನೇಕ ಧಾರ್ಮಿಕ ಪೂಜಾ ಕಾರ್ಯಕ್ರಮದೊಂದಿಗೆ ದೇವಿ ಪಲ್ಲಕ್ಕಿ ಉತ್ಸವ ಪ್ರಾರಂಬಿಸಿದರು.

ಗುಡೂರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕೆ ಮೆರವಣಿಗೆ ಹಾಗೂ ಪೊಟ ಮೆರವಣಿಗೆ ಅದ್ದೂರಿಯಾಗಿ ಜರಗಿತು, ನೂರಾರು ಸಂಖ್ಯೆಯಲ್ಲಿ ಮುತ್ತೈದೆಯರು ಆರತಿ ಹಿಡಿದು ಜಾತಿ ಬೇದ ಮರೆತು ಈ ಮಕ್ಕಳಿಂದ ಹಿಡಿದು ಸನಾಜದ ಎಲ್ಲಾ ಬಾಂಧವರು ಈ ಉತ್ಸವದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಬೆಳಗಿನ ಜಾವ ೧೧:೩೦ ಕ್ಕೆ ಪ್ರಾರಂಭವಾದ ಪಲ್ಲಕ್ಕಿ ಮೆರವಣಿಗೆ ಸರಿಯಾಗಿ ೨ ಗಂಟೆಗೆ ತಾಯಿ ಸನ್ನಿದಿಗೆ ಬಂದ ನಂತರ ನೇರದಿದ್ದ ನೂರಾರು ಜನ ಸಾರ್ವಜನಿಕರು ಸೇರಿದಂತೆ ಎಲ್ಲರಿಗೂ ಮಹಾ ಪ್ರಸಾದ ಏರ್ಪಾಡು ಮಾಡಲಾತ್ತು. ಈ ಬೇಡಿದ ವರಗಳನ್ನು ಶೀಘ್ರವಾಗಿ ಕರುಣಿಸುವ ತಾಯಿ ದುರ್ಗಾಪರಮೇಶ್ವರಿ ಯ ಈ ಉತ್ಸವದಲ್ಲಿ ಸಮಾಜದ ಅಧ್ಯಕ್ಷರಾದ ಶ್ರೀ
ಶ್ರೀಶೈಲ ಭಜಂತ್ರಿ.

ಉಪಾಧ್ಯಕ್ಷರಾದ ಶ್ರೀ ಶಶಿಕಾಂತ ಭಜಂತ್ರಿ. ಹಾಗೂ
ಕಾರ್ಯದರ್ಶಿಗಳಾದ ಶ್ರೀ ಜಿ.ಕೆ. ಮಾರುತಿ.
ಸಮಾಜದ ಮುಖಂಡರಾದ ಶ್ರೀ ಹನಮಂತ ಭಜಂತ್ರಿ ಶ್ರೀ ರಾಮಪ್ಪ ಭಜಂತ್ರಿ
ಶ್ರೀ ಶಿವಪ್ಪ ಶಿಕ್ಕೆರಿ ಶ್ರೀ ಯಮನಪ್ಪ ಮಾರನಬಸರಿ ಹಾಗೂ ಜಿಲ್ಲಾ ಶ್ರೀ ನೂಲಿ ಚಂದಯ್ಯ ಯುತ್ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ
ಶ್ರೀ ದುರಗಪ್ಪ ರಾಮಣ್ಣ ಭಜಂತ್ರಿ,
ಮುತ್ತಪ್ಪ ಭಜಂತ್ರಿ, ಚಿದಾನಂದ ಭಜಂತ್ರಿ , ಬಸಪ್ಪ ಭಜಂತ್ರಿ, ತೀರ್ಥಪ್ಪ, ಭಜಂತ್ರಿ, ಹಾಗೂ ಯಮನಪ್ಪ ಭಜಂತ್ರಿ, ಗದ್ದೆಪ್ಪ ಭಜಂತ್ರಿ ಉಪಸ್ಥಿತಿ ವಹಿಸಿದ್ದರು ,

ಸಮಾಜದ ಎಲ್ಲ ಗುರು ಹಿರಿಯರು / ಯುವಕ ಮಿತ್ರರು ಅದ್ದೂರಿಯಾಗಿ ದುರ್ಗಾದೇವಿ ಜಾತ್ರಾ ಮಹೋತ್ಸವವನ್ನು ನೆರವೇರಿಸಿದರು ,ಎಂದು ಶ್ರೀ ನೂಲಿ ಚಂದಯ್ಯ ಯುತ್ ಸೇವಾ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿಬಿ ,ನ್ಯೂಸ್ ನೊಂದಿವೆ ಮಾಹಿತಿ ಹಂಚಿಕೊಂಡರು.
ವರದಿ:: ಶ್ರೀ ದುರ್ಗಾಪ್ರಸಾದ್ ಆರ್ ಭಜಂತ್ರಿ