
ಜಮಖಂಡಿ:
25th ಸೆಪ್ಟೆಂಬರ್ : ಮಾಜಿ ಉಪ ರಾಷ್ಟ್ರಪತಿ ಶ್ರೀ ಬಿ ಡಿ ಜತ್ತಿ ರವರ 111ನೇ ಜನ್ಮ ದಿನಾಚರಣೆಯ ನಿಮಿತ್ಯ ರಬಕವಿ – ಬನಹಟ್ಟಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ವಿಷನ್ ಬಾಗಲಕೋಟೆ 2040 ಅನಾವರಣ ಹಾಗೂ ಕೃಷಿ ಸಂವಾದ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಶ್ರೀ ಜಗದೀಶ್ ಶೆಟ್ಟರ್ ರವರು ಚಾಲನೆ ನೀಡಿದರು.
ಈ ಸಂಧರ್ಭದಲ್ಲಿ ಜತ್ತಿ ಫೌಂಡೇಶನ್ ವತಿಯಿಂದ ವಿಷನ್ ಬಾಗಲಕೋಟೆ 2040 ಲೋಗೋ ಹಾಗೂ ಅದರ ವಿಷನ್ ಡಾಕ್ಯುಮೆಂಟ್ಸ್ ಕೈಪಿಡಿಯನ್ನು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಅಥಿಣಿ ಕ್ಷೇತ್ರದ ಶಾಸಕರಾದ ಶ್ರೀ ಲಕ್ಷ್ಮಣ ಸವದಿ ರವರು ಬಿಡುಗಡೆ ಗೊಳಿಸಿದರು. ಜತ್ತಿ ಫೌಂಡೇಶನ್ ಸಂಸ್ಥಾಪಕರಾದ ಶ್ರೀ ಧ್ರುವ ಜತ್ತಿ ರವರು ತಮ್ಮ ಪ್ರಸ್ತಾವಿಕ ಭಾಷಣವನ್ನು ಮಾಡಿ, ಇಂದಿನ ಬಾಗಲಕೋಟೆ ಜಿಲ್ಲೆಯ ಬಗ್ಗೆ ಜತ್ತಿ ರವರು ಒಂದು ವಿಷನ್ ಮತ್ತು ಈ ಭಾಗದ ಅಭಿವೃದ್ಧಿಗೆ ತಮ್ಮದೇ ಆದಂತಹ ಪರಿಕಲ್ಪನೆಯನ್ನು ಇಟ್ಟುಕೊಂಡಿದ್ದರು ಅದನ್ನು ಪೂರ್ಣ ಗೊಳಿಸುವದೇ ನಮ್ಮ ಫೌಂಡೇಶನ್ ಉದ್ದೇಶ ಎಂದು ತಿಳಿಸಿದರು.

ಸನ್ಮಾನ್ಯ ಶ್ರೀ ಬಿ ಡಿ ಜತ್ತಿ ರವರು ಈ ರಾಜ್ಯದ ಸಚಿವರಾಗಿ ಹಾಗೂ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುವ ಸಮಯದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿ ತಮ್ಮದೇ ಆದಂತಹ ವಿಶೇಷ ಕೊಡುಗೆಯನ್ನು ನೀಡಿದ್ದಾರೆ, ಅದರಲ್ಲೂ ಮುಖ್ಯವಾಗಿ ಶಿಕ್ಷಣ, ನೀರಾವರಿ ಮತ್ತು ಕೃಷಿಗೆ ಅವರು ಬಹಳ ಆದ್ಯತೆಯನ್ನು ನೀಡಿದ್ದರು, ಈ ಭಾಗದಲ್ಲಿ ರೈತರು ಸಮೃದ್ಧಿಯಾಗಿ ಬೆಳೆ ಬೆಳೆಯಲು ಮತ್ತು ಜಮಖಂಡಿ ಒಂದು ಎಜುಕೇಶನ್ ಹಬ್ಬಾಗಿ ಪರಿವರ್ತನೆಯಾಗಲು ಶ್ರೀ ಬಿ ಡಿ ಜತ್ತಿ ರವರ ಕೊಡುಗೆ ಅಪಾರವಾಗಿದೆ. ವಿಶ್ವ ಸಂಸ್ಥೆಯ 17 ಗೋಲ್ ಗಳನ್ನು ಮುಂದಿನ 2040 ವರೆಗೆ ಬಾಗಲಕೋಟೆ ಜಿಲ್ಲೆಯಲ್ಲಿ ಅನುಷ್ಟಾನ ಗೊಳಿಸುವದೇ ಜತ್ತಿ ಫೌಂಡೇಶನ್ ಉದ್ದೇಶ ಎಂದು ತಿಳಿಸಿದರು.

ಸಾಮಾನ್ಯ ರೈತ ಕುಟುಂಬದಿಂದ ಹುಟ್ಟಿ ಗ್ರಾಮಪಂಚಾಯತಿಯಿಂದ ಈ ದೇಶದ ಹಂಗಾಮಿ ರಾಷ್ಟ್ರಪತಿಯಾಗಿ ಸೇವೆಯನ್ನು ಸಲ್ಲಿಸಿದ ಈ ಬಾಗಲಕೋಟೆ ಸುಪುತ್ರನ ಒಂದು ಪ್ರತಿಮೆ ಇರದಿರುವದು ಖೇಧದ ಸಂಗತಿ ಇಂತಹ ಮಹಾನ್ ನಾಯಕನ ಕಂಚಿನ ಪ್ರತಿಮೆಯನ್ನು ಜಮಖಂಡಿಯ ಮಿನಿ ವಿಧಾನಸೌಧ ಎದುರುಗಡೆ ಸ್ಥಾಪಿಸಿ ಬೇಕು ಹಾಗೂ ಅವರ ಜೀವನದ ಆದರ್ಶದ ಬಗ್ಗೆ ಪಠ್ಯ ಪುಸ್ತಕದಲ್ಲಿ ಅಳವಡಿಸಲು ಸರ್ಕಾರದ ಗಮನ ಸೆಳೆಯ ಬೇಕೆಂದು ಶ್ರೀ ಜಗದೀಶ್ ಶೆಟ್ಟರ್ ಹಾಗೂ ಶ್ರೀ ಲಕ್ಷ್ಮಣ ಸವದಿ ರವರಿಗೆ ಮನವಿಪತ್ರವನ್ನು ನೀಡಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾತನಾಡಿದ ಶ್ರೀ ಜಗದೀಶ್ಶೆಟ್ಟರ್ ರವರು ಶ್ರೀ ಬಿ ಡಿ ಜತ್ತಿ ರವರು ಈ ಕರುನಾಡ ಕಂಡ ದಕ್ಷ ಆಡಳಿತಗಾರ, ಬಸವಣ್ಣನವರ ತತ್ವಾದರ್ಶಗಳನ್ನು ಅಳವಡಿಸಿಕೊಂಡ ಕಲಿಯುಗದ ಅಭಿನವ ಬಸವಣ್ಣ ಶ್ರೀ ಜತ್ತಿ ರವರು, ಜತ್ತಿ ಫೌಂಡೇಶನ್ ರವರ ಮನವಿಯಂತೆ ನಾನು ಮತ್ತು ಸವದಿರವರು ಇವರ ಕಂಚಿನ ಪ್ರತಿಮೆ ನಿರ್ಮಾಣ ಮಾಡಲು ಮಾನ್ಯ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ರವರಿಗೆ ಮನವರಿಕೆ ಮಾಡಿ ಕೊಡುತ್ತೇವೆ ಎಂದು ಭರವಸೆಯನ್ನು ನೀಡಿದರು. ಕೃಷಿ ಸಂವಾದ ಎನ್ನುವ ವಿನುತನ ಕಾರ್ಯಕ್ರಮದೊಂದಿಗೆ ಜತ್ತಿ ರವರ ಜನ್ಮ ದಿನಾಚರಣೆಯನ್ನು ಮಾಡುತ್ತಿರುವ “ಜತ್ತಿ ಫೌಂಡೇಶನ್ ” ಎಲ್ಲರಿಗೂ ಶುಭಾಶಯಗಳನ್ನು ಕೋರಿದರು.
ವಿಶೇಷ ಅಹ್ವಾನಿತರಾಗಿ ಆಗಮಿಸಿರುವ ಶ್ರೀ ಲಕ್ಷ್ಮಣ ಸವದಿ ರವರು ಮಾತನಾಡಿ ಆಥಣಿ ಶಿವಯೋಗಿಗಳು ಜತ್ತಿ ಅವರ ಚಿಕ್ಕ ವಯಸ್ಸಿನಲ್ಲೇ ಅವರ ಬಗ್ಗೆ ಭವಿಷ್ಯ ನುಡಿದು, ಮುಂದೆ ಒಂದು ದಿನ ಈ ದೇಶದ ಅತ್ಯುನ್ನತ ಹುದ್ದೆಗೆ ತಾವು ಹೋಗುತ್ತೀರಿ ಎಂದು ಆಶೀರ್ವಾದ ಮಾಡಿದ್ದರು. ಶೆಟ್ಟರ್ ರವರು ಹೇಳಿದಂತೆ ಜತ್ತಿ ರವರ ಪ್ರತಿಮೆ ನಿರ್ಮಾಣಕ್ಕೆ ನಮ್ಮ ಸಂಪೂರ್ಣ ಸಹಕಾರ ನೀಡುವದಾಗಿ ತಿಳಿಸಿ, ಕಳೆದ ಹಲವು ವರ್ಷಗಳಿಂದ ಜತ್ತಿ ಫೌಂಡೇಶನ್ ಬಾಗಲಕೋಟೆ ಜಿಲ್ಲೆಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜತ್ತಿ ರವರ ಕನಸನ್ನು ನನಸು ಮಾಡಲು ಹೊರಟಿದ್ದು ಅವರಿಗೆ ನನ್ನ ಶುಭಾಶಯಗಳನ್ನು ನೀಡುತ್ತೇನೆ ಎಂದು ತಿಳಿಸಿದರು.

ದಿವ್ಯ ನೇತೃತ್ವ ವಹಿಸಿದ್ದ ಪೂಜ್ಯ ಗುರು ಮಹಾಂತ ಸ್ವಾಮಿಗಳು ಆಶೀರ್ವಚನವನ್ನು ನೀಡಿ, ಮುಗಿದ ಕೈ ಬಾಗಿದ ತಲೆ ಹಾಗೂ ಸದಾ ತಮ್ಮ ಹಣೆಯ ಮೇಲೆ ವಿಭೂತಿಯನ್ನು ಹಚ್ಚಿಕೊಳ್ಳುತ್ತಿದ್ದ ಶ್ರೀಯುತ ಬಿ ಡಿ ಜತ್ತಿ ರವರದು ಒಂದು ಆದರ್ಶ ಜೀವನ ಇಂತಹ ಮಹಾನ ನಾಯಕ ನಮ್ಮ ಬಾಗಲಕೋಟೆ ಜಿಲ್ಲೆಯಲ್ಲಿ ಹುಟ್ಟಿರುವದು ನಮ್ಮ ಸುದೈವ ಮತ್ತು ಅವರ ಕನಸನ್ನು ನನಸು ಮಾಡಲು ಹೊರಟಿರುವ ಅವರ ಮರಿ ಮೊಮ್ಮಗ ಶ್ರೀ ಧ್ರುವ ಜತ್ತಿ ರವರಿಗೆ ಗುರು ಬಸವಣ್ಣ ಆಶೀರ್ವಾದ ಸದಾ ಇರಲಿ ಎಂದು ಹಾರೈಸಿ, ಇಂತಹ ಮಹಾನ ನಾಯಕನ ಪ್ರತಿಮೆ ಜಮಖಂಡಿಯಲ್ಲಿ ನಿರ್ಮಾಣ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.

ಈ ಸಂಧರ್ಭದಲ್ಲಿ ಸಂಕೇಶ್ವರ್ ಕೃಷಿ ಸಂಶೋಧನಾ ಸಂಸ್ಥೆಯಿಂದ ಬಂದಿರುವ ಡಾll ಸುನಿಲ್ ಕುಮಾರ್ ನೂಲಿ ರವರು ಕಬ್ಬು ಬೆಳೆ ಬಗ್ಗೆ ವಿಶೇಷ ಉಪನ್ಯಾಸವನ್ನು ನೀಡಿದರು, ದಿವ್ಯ ಸಮ್ಮುಖ ವಹಿಸಿದ್ದ ಶ್ರೀ ಪ್ರಭು ಜೀ ಮಹಾರಾಜರು, ಮುಖ್ಯ ಅಥಿತಿಗಳಾಗಿ ಆಗಮಿಸಿದ ಶ್ರೀ ಮುತ್ತಣ್ಣಾ ಹಿಪ್ಪರಗಿ, ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ಶ್ರೀ ಲೋಕಣ್ಣಾ ಉಳಾಗಡ್ಡಿ, ಹಿಪ್ಪರಗಿ ಗ್ರಾಮ ಪಂ ಅಧ್ಯಕ್ಷರಾದ ಶ್ರೀಮತಿ ಅಕ್ಕವ್ವಾ ದಂಡಿ, ಉಪಾಧ್ಯಕ್ಷರಾದ ಶ್ರೀಮತಿ ಲಕ್ಕವ್ವಾ ಸೊನ್ನದ್ದ, ಜತ್ತಿ ಪಾರಿವಾರದವರು ಉಪಸ್ಥಿತರಿದ್ದರು.