Breaking News

ಪೆಟ್ರೋಲ್ ಡೀಸೆಲ್ ಮೇಲೆ 5₹ ಸುಂಕ ಎರಿಕೆಗೆ ಸಿದ್ದತೆ

ನವದೆಹಲಿ: ಪೆಟ್ರೋಲ್‌ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ ₹5ರವರೆಗೆ ಏರಿಕೆ ಮಾಡಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಕೋವಿಡ್ ವಿರುದ್ಧದ ಹೋರಾಟಕ್ಕೆ ಹಣ ಸಂಗ್ರಹಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ. ಆದರೆ ತೆರಿಗೆ ಏರಿಕೆಯು ತಕ್ಷಣದಿಂದಲೇ ಗ್ರಾಹಕರಿಗೆ ವರ್ಗವಾಗುವುದಿಲ್ಲ ಎಂದು ಮೂಲಗಳು ಹೇಳಿವೆ.

ಈಗ ₹5ರಷ್ಟು ಏರಿಕೆಯಾದರೆ ಪ್ರತಿ ಲೀಟರ್ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವು ₹37.98 ಮತ್ತು ಪ್ರತಿ ಲೀಟರ್ ಡೀಸೆಲ್ ಮೇಲಿನ ಅಬಕಾರಿ ಸುಂಕ ₹36.98ರಷ್ಟಾಗಲಿದೆ. ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು ₹18 ಮತ್ತು ₹12ರಷ್ಟು ಏರಿಕೆ ಮಾಡಲು ಇದೇ ಮಾರ್ಚ್‌ನಲ್ಲಿ ಕೇಂದ್ರ ಸರ್ಕಾರವು ಸಂಸತ್ತಿನ ಒಪ್ಪಿಗೆ ಪಡೆದಿತ್ತು. ಅದರಲ್ಲಿ ಪೆಟ್ರೋಲ್‌ನ ಸುಂಕವನ್ನು ₹12 ಮತ್ತು ಡೀಸೆಲ್ ಮೇಲಿನ ಸುಂಕವನ್ನು ₹9 ಏರಿಕೆ ಮಾಡಿತ್ತು.

2014ರಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರ ರಚನೆಯಾದಾಗ ಪೆಟ್ರೋಲ್‌ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವು ಕ್ರಮವಾಗಿ ₹9.48 ಮತ್ತು ₹3.56 ಇತ್ತು. ಭಾರತದಲ್ಲಿ ಈಗ ಎರಡೂ ಇಂಧನಗಳ ಚಿಲ್ಲರೆ ಮಾರಾಟ ಬೆಲೆಯಲ್ಲಿ ಸುಂಕದ ಪ್ರಮಾಣ ಶೇ 70ರಷ್ಟು. ಇದು ಜಗತ್ತಿನಲ್ಲೇ ಅತ್ಯಧಿಕ.

‘ಅರ್ಥ ವ್ಯವಸ್ಥೆಯ ಪುನಶ್ಚೇತನದ ಸ್ಥಿತಿಯು ಈಗಲೂ ಬಹಳ ನಾಜೂಕಾಗಿಯೇ ಇದೆ. ಅಬಕಾರಿ ಸುಂಕ ಹೆಚ್ಚಳ ಮಾಡದಿರಲು ಕೇಂದ್ರವು ಪ್ರಯತ್ನಿಸಬಹುದು. ಆದರೆ, ಕೋವಿಡ್‌ನಿಂದಾದ ನಷ್ಟ ಪರಿಹಾರಕ್ಕೆ ಇನ್ನೊಂದು ಪ್ಯಾಕೇಜ್‌ ನೀಡಲೇಬೇಕು ಎಂಬ ಸ್ಥಿತಿ ನಿರ್ಮಾಣವಾದರೆ ಸುಂಕ ಹೆಚ್ಚಳ ಅನಿವಾರ್ಯ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

About vijay_shankar

Check Also

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಆನಂದ ಪರಾಳದ

ಶ್ರೀ ಆನಂದ ಪರಾಳದ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮ ಪಂಚಾಯತಿ ಸದಸ್ಯರು ಇವರಿಂದ ನಾಡಿನ ಸಮಸ್ತ ಜನತೆಗೆ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.