ಇಳಕಲ್: ಪಟ್ಟಣದ ವಾರ್ಡ ನಂ ೦೩ ಜನ್ನತ ನಗರ ಬಡಾವಣೆಯ ಲಬೈಕ್ ಸ್ಟಾರ್ ಗ್ರೂಪ್ ಯುವಕರು ಹಮ್ಮಿಕೊಂಡಿದ್ದ ಪ್ರವಾದಿ ಮೊಹಮ್ಮದ(ಸ) ಜನ್ಮೋತ್ಸವದ ಅಂಗವಾಗಿ “ನಾಥಿಯಾ ಮುಕಾಬಲಾ” ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರದಲ್ಲಿ ಒಟ್ಟು ೪೦ ವಿಧ್ಯಾರ್ಥಿಗಳು ಭಾಗವಹಿಸಿದ್ದರು ಮತ್ತು ಉಳಿದ ಪ್ರತಿಯೊಬ್ಬ ವಿಧ್ಯಾರ್ಥಿಗಳಿಗೆ ಪ್ರತ್ಯೇಕ ಬಹುಮಾನ ನೀಡಲಾಯಿತು.

ಪ್ರಥಮ ಬಹುಮಾನ ೧೧೦೦ ರೂ ಹಾಗೂ ಒಂದು ಕಪ್ಪು ಕುಮಾರಿ. ಶೀಫಾ ಆದವಾನಿ ಪಡೆದುಕೊಂಡರು, ದೃತೀಯ ಬಹುಮಾನ ೭೦೦ ರೂ ಹಾಗೂ ಒಂದು ಕಪ್ಪು ಕುಮಾರ. ಮಹಮ್ಮದಹಾಸಿಮ್ ಮುದಗಲ್ಲ ಪಡೆದುಕೊಂಡರು. ತೃತೀಯ ಬಹುಮಾನ ೫೦೦ ರೂ ಹಾಗೂ ಒಂದು ಕಪ್ಪು ಉಮ್ಮೆಅಪ್ಸಾ ಮುಗನೂರ, ಬಹುಮಾನ ವಿಧ್ಯಾರ್ಥಿಗಳಿಗೆ ನೀಡಲಾಯಿತು. ಹಾಗೂ ಮೌಲಾನಾ ಹಾಫಿಜ್ ಜವೂಅಹ್ಮದ ರವರು ಮಹಾನ್ ಪ್ರವಾದಿ (ಸ್ವ) ರವರ ಬಗ್ಗೆ ಪ್ರವಚನ ನೀಡಿದರು.
ಈ ಕಾರ್ಯಕ್ರಮದಲ್ಲಿ ಮೌಲಾನಾ ಹಾಫಿಜ್ ಜವೂಅಹ್ಮದ, ಮೌಲಾನಾ ಹುಸೇನ ಡೊನ್ನಿಗುಡ್ಡ. ಹಿರಿಯರಾದ ಜನಾಬ ಬಾಷಾ ಮಾರಬಸರಿ, ಖಾಜೇಸಾಬ ದಾಸ್ಯಾಳ, ಡಾ. ಮುರ್ತುಜಾ ಮುಗನೂರ, ಶೇಖ ಅಬ್ದುಲ್ ಬೇಟಗೇರಿ, ಅಬ್ಬಾಸಲಿ ಜಮಖಾನ್, ಮಹಮ್ಮದರಫೀ ಮೈದರಗಿ, ಮೆಹಬೂಬ ಕಾಂಟ್ರ‍್ಯಾಕ್ಟರ್, ಗುಲಾಮನಬಿ ಭನ್ನು, ಮೆಹಬೂಬ ಭನ್ನು, ಮೆಹಬೂಬ ಟಪಾಲ, ಮೆಹಬೂಬ ಮುಗನೂರ ಹಾಗೂ ಲಬೈಕ್ ಸೇವಾ ಸಮೀತಿ ಸದಸ್ಯರು, ಉಪಸ್ಥಿತರಿದ್ದರು.