ಅಮೀನಗಡ : ಸಮೀಪದ ಸೂಳೇಭಾವಿ ಗ್ರಾಮದಲ್ಲಿ ಇಂದು ಶ್ರೀ ಗಾಯತ್ರಿ ಪತ್ತಿನ ಸಹಕಾರ ಸಂಘದ ಜನರಲ್ ಬಾಡಿ ಮೀಟಿಂಗ್ ನಲ್ಲಿ ನೂತನ ಇಲಕಲ್ಲ ತಾಲೂಕಿನ ಸ್ಪಂಧನಾ ಪಿ,ಯು ಕಾಲೇಜು ನಲ್ಲಿ ವಿಜ್ಞಾನ ವಿಭಾಗದಲ್ಲಿ ಪ್ರಥಮ ಶ್ರೇಣಿಯಲ್ಲಿ ಪಾಸಾಗಿ ಪ್ರತಿಶತ ೭೧ ‘/. ಫಲಿತಾಂಶ ಪಡೆದ ಕುಮಾರಿ ಸೃಷ್ಟಿ ಪ್ರಕಾಶ ರಾಮದುರ್ಗ ಇವಳಿಗೆ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಆರ್ ,ಪಿ,ಕಲಬುರ್ಗಿ ಹಾಗೂ ಮಾಜಿ ಶಾಸಕರಾದ ಶ್ರೀಎಸ್ ,ಜಿ,ನಂಜಯ್ಯನಮಠ,ಶ್ರೀ ಕೃಷ್ಣಾ ರಾಮದುರ್ಗ, ಗ್ರಾಮ,ಪಂ,ಅಧ್ಯಕ್ಷರಾದ ಶ್ರೀಮತಿ ಸರೋಜಾ ಕ ವಡ್ಡರ ಸಂಘದ ಸದಸ್ಯರಾದ ಶ್ರೀ ರೋಮಣ್ಣ ಭಜಂತ್ರಿ, ನಾಗರಾಜ್ ರಾಮದುರ್ಗ, ಸಂಘದ ಜೆ,ಎಮ್,ಹೇಮಂತ್ ಧುತ್ತರಗಿ, ಹಾಗೂ ಅನೇಕ ಗಣ್ಯರು ಕುಮಾರಿ ಸೃಷ್ಟಿ ರಾಮದುರ್ಗ ಹಾಗೂ ಇತರೆ ಸಾಧನೆ ಗೈದ ವಿಧ್ಯಾರ್ಥಿಗಳಿಗೆ ಸನ್ಮಾನ ಮಾಡಿ ೫೦೦೦,ಸಾವಿರ ಚಕ್ ನೀಡಿ ಪ್ರೋತ್ಸಾಹಿಸುವ ಕೆಲಸವನ್ನು ಸಂಘ ಮಾಡಿತು. ಸಂಸ್ಥೆಯ ಈ ಕೆಲಸಕ್ಕೆ ಸಾರ್ವಜನಿಕ ರಂಗದಲ್ಲಿ ಉತ್ತಮ ಪ್ರಶಂಸೆ ವ್ಯಕ್ತವಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಕುಮಾರಿ ಸೃಷ್ಟೀ ರಾಮದುರ್ಗ ನಮ್ಮ ಫಲಿತಾಂಶ ನೋಡಿ ನಮ್ಮನ್ನು ಗುರುತಿಸಿ ಸನ್ಮಾನಿಸಿ ನಮ್ಮ ಮುಂದಿನ ಓದಿಗೆ ಸನ್ಮಾನ ಮಾಡಿ ನಗದು ಕೊಟ್ಟು ಪ್ರೋತ್ಸಾ ಮಾಡಿದ ಸಂಘದ ಎಲ್ಲಾ ಗೌರವಾನ್ವಿತ ಆಡಳಿತ ಮಂಡಳಿಗೆ ನನ್ನ ಕೃತಜ್ಞತೆಗಳು ಎಂದರು.