
ಅಮೀನಗಡ : ಭಾರತ ದೇಶಕ್ಕಾಗಿ ಬರಿ ಹಿಂದುಗಳು ಪ್ರಾಣ ತ್ಯಾಗ ಮಾಡಿಲ್ಲ ಅನೇಕ ಮುಸ್ಲಿಂ ಜನಾಂಗದವರು ಈ ದೇಶಕ್ಕಾಗಿ ಸ್ವತ್ರಂತ್ರಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಇಂಡಿಯಾ ಗೆಟ್ ಬಳಿ ಸುಮಾರು 65 ಸಾವಿರ ಮುಸ್ಲಿಂ ಸ್ವಾತಂತ್ರ ಹೋರಾಟಗಾರರ ಅಧಿಕೃತ ಹೆಸರು ಕೆತ್ತನೆ ಮಾಡಲಾಗಿದೆ,ಈ ದೇಶದ ಸ್ವತಂತ್ರಕ್ಕಾಗಿ ಸತ್ತವರು ಲೆಕ್ಕಕ್ಕಿಲ್ಲ ಆದರೆ ಇವತ್ತು ನಾವು ಸ್ವತಂತ್ರ ಹೋರಾಟಗಾರ ,ಕವಿ,ಆಶ್ಪಾಕುಲ್ಲಾಖಾನ್ ಅವರು ತಮ್ಮ 27 ನೇ ವಯಸ್ಸಿನಲ್ಲಿ ಮರಣ ದಂಡನೆಗೆ ಗುರಿಯಾದರು, ಅವರು ಇಂದಿನ ಉತ್ತರ ಪ್ರದೇಶದ ಶಹಜಾನಪುರ ಗ್ರಾಮದಲ್ಲಿ ೧೯೦೦ ರಲ್ಲಿ ಜನಿಸಿ ೧೯೨೭ ರಲ್ಲಿ ಅಕ್ಟೋಬರ್ ೨೨ ರಂದು ಕ್ರಾಂತಿಕಾರಿ ಆಶ್ಪಾಕುಲ್ಲಾ ಖಾನ್ ಅವರ ಕಲ್ಲು ಶಿಕ್ಷೆಗೆ ಒಳಪಡಿಸಿದ ಕ್ಷಣ ಅವರು ಈ ಹೋರಾಟಕ್ಕಾಗಿ ಕ್ರಾಂತಿಕಾರಿ ಹೆಜ್ಜೆಯನ್ನು ಇಟ್ಟ ದೇಶ ಭಕ್ತ,ಎಂದ ಪತ್ರಕರ್ತ ವಿಜಯಶಂಕರ್ ಅವರು ಈ ಸಭೆಯನ್ನು ಉದ್ದೇಶಿಸಿ ಮಾತನಾಡಿದರ.
ವೀರರಾಣಿ ಕಿತ್ತೂರು ಚನ್ನಮ್ಮ ಹಾಗೂ ಸ್ವತಂತ್ರ ಹೋರಾಟಗಾರ ಆಶ್ಪಾಕುಲ್ಲಾ ಖಾನ್ ಅವರ ಜಯಂತಿಯನ್ನು ಸರಳವಾಗಿ ಗ್ರಾಮದ ಶಾದಿ ಮಹಲ್ ವನಲ್ಲಿ ನಡೆಸಿದರು. ಮಹಾಂತಪ್ಪ ಭದ್ರಣ್ಣನವರ,ರಹೇಮಾನಸಾಬ ದೊಡಮನಿ,ಮಾತನಾಡಿದರು.
ಹಜರಾಜ್ ಟಿಪ್ಪು ಸುಲ್ತಾನ್ ಶಾಹಿದ್ (RH) ಕಮಿಟಿ. ಹಾಗೂ ಅಂಜುಮನ್ ಸಮಿತಿ ವತಿಯಿಂದ
ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಹಿರಿಯರು ಮತ್ತು ಎಲ್ಲರೂ ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೆಹಮಾನ್ ಸಾಬ್ ದೊಡ್ಮನಿ. ಮುಖ್ಯ ಅತಿಥಿ ಸ್ಥಾನವನ್ನು ಮಹಾಂತಪ್ಪ ಭದ್ರಣ್ಣನವರ . ಅತಿಥಿಗಳಾಗಿ ಮಹಾಂತೇಶ್ ಭದ್ರಣ್ಣವರ್(ವಕೀಲರು), ದೇವರಾಜ್ ಕಮತಗಿ ಡಿ,ಬಿ,ವಿಜಯಶಂಕರ್ ಭಾಷೇಸಾಬ ತಂಗಡಗಿ, ಮಲಿಕಾಸಾಬ್ ಬುವಾಜಿ, ಮೈನುದ್ದಿನ್ ಮುದ್ದೇಬಿಹಾಳ,ಖಾಸಿಂ ಸಾಬ್ ಬೂದಿಹಾಳ,ಜಹಾಂಗೀರ್ ಜಹಾಗಿರದಾರ್,ದಸ್ತರ ಮಿರ್ಜಿ,ಇಮಾಮಜಾ ಅಲಿ ಮುಲ್ಲಾ,.

ಈ ಕಾರ್ಯಕ್ರಮವನ್ನು ಹಜರಜ್ ಟಿಪ್ಪು ಸುಲ್ತಾನ್ ಶಹಿದ್ (RH) ಕಮಿಟಿ. ನೆರವೇರಿಸಿದ್ದು ಅಧ್ಯಕ್ಷರು ಹರೂನ್ ರಶೀದ್ ಮುದ್ದೇಬಿಹಾಳ, ಉಪಾಧ್ಯಕ್ಷರು ಅಖಿಲ್ ಮುಲ್ಲಾ, ಕಾರ್ಯದರ್ಶಿ ಮೈನು ಮುಲ್ಲಾ, ಸದಸ್ಯರಾದ ದಾವಲ್ ಮಲಿಕ್ ನದಾಫ್,
ಇಸ್ಮಾಯಿಲ್ ಮುಲ್ಲಾ,ರಫೀಕ್ ಕಿಡಕಿಮನಿ, ಸಾದಿಕ್ ಹುಣಚಾಗಿ, ಸಲೀಂ ವಾಲಿಕಾರ,ಇರ್ಫಾನ್ ಮುಲ್ಲಾ, ದಾದೆಪೀರ್ ಅತ್ತಾರ್, ನೆರವೇರಿಸಿದ್ದು ಕಾರ್ಯಕ್ರಮದ ನಿರೂಪಣೆಯನ್ನು ಸಲೀಂ ಅಮೀನಗಡ ಮಾಡಿದರು.
ಈ ಕಾರ್ಯಕ್ರಮದಲ್ಲಿ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.