
ಅಮೀನಗಡ ಬಂಜಾರಾ ಸಮಾಜದಲ್ಲಿ ಸಂತ ಶ್ರೀ ಸೇವಾಲಾಲರ ೨೮೪ ನೇ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಾಹಿತಿ ಯೋಗೇಶ ಲಮಾಣಿ ಮಾತನಾಡಿ ‘ ಪ್ರಕೃತಿಯೇ ದೇವರೆಂದು ಸಾರಿದ ಮಹಾನ್ ಸಂತ ಸೇವಾಲಾಲರು. ಎಂದು ಅಭಿಪ್ರಾಯ ಪಟ್ಟರು.ಸಕಲ ಮಾನವರಿಗೂ ಜೀವಜಂತುಗಳಿಗೂ ಒಳಿತು ಬಯಸಿ ಸನ್ಮಾರ್ಗದಲ್ಲಿ ನಡೆಯಬೇಕು.ಎಂಬ ಸಂದೇಶ ಸಾರಿದ ಮಹಾನ್ ದಾರ್ಶನಿಕರು ಎಂದು ಅವರ ತತ್ವ ಸಿದ್ದಾಂತಗಳನ್ನು ಯುವಪೀಳಿಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಶಿಕ್ಷಕ ಎಲ್ ಎನ್ ಲಮಾಣಿ ಮಾತನಾಡಿ ಜಗದ ಉದ್ದಾರಕ್ಕಾಗಿಯೇ ದೇಶ ಪರ್ಯಟಣೆ ಮಾಡಿ ಸಂಸ್ಕಾರಯುತ ಸಮಾಜ ನಿರ್ಮಾಣ ಮಾಡಲು ಒಳ್ಳೆಯ ಸಂದೇಶಗಳನ್ನು ಜಗತ್ತಿಗೆ ಕೊಡುಗೆಯಾಗಿ ನೀಡಿದ್ದಾರೆ ಎಂದರು. ಈ ಸಂದರ್ಬದಲ್ಲಿ ಪಟ್ಟಣ ಪಂಚಾಯತ ಸದಸ್ಯರಾದ ತುಕಾರಾಮ ಜಿ ಲಮಾಣಿ, ಹಿರಿಯರಾದ ಶಂಕ್ರಪ್ಪ ರಾಠೋಡ, ಗಿರಿಯಪ್ಪ ಚವ್ಹಾಣ, ದಿವಾಕರ ಕಾರಭಾರಿ, ಹೋಮಸಿಂಗ ನಾಯಕ, ರಮೇಶ ಕಾರಭಾರಿ, ರಮೇಶ ರಾಠೋಡ, ವಾಲಪ್ಪ ನಾಯಕ, ಗುಂಡಪ್ಪ ರಾಠೋಡ, ಚಂದ್ರಕಾಂತ ಚವ್ಹಾಣ, ಹಾಮಸಿಂಗ ಚವ್ಹಾಣ, ರಾಮಪ್ಪ ಜಾಧವ, ಆನಂದ ಚವ್ಹಾಣ, ಆನಂದ ರಾಠೋಡ, ಲೋಕಪ್ಪ ಕಾರಭಾರಿ, ಟೋಪಣ್ಣ ರಾಠೋಡ, ರಾಜು ನಾಯಕ,ಹರಿಯಪ್ಪ ರಾಠೋಡ,ಬಂಜಾರಾ ಸಮಾಜದ ಹಿರಿಯರು ಮಹಿಳೆಯರು,ಮಕ್ಕಳು ಇದ್ದರು.