Breaking News

ದಾವಣಗೆರೆಯಲ್ಲಿ 332 ಮಂದಿಗೆ ಕೊರೊನಾ ಸೋಂಕು: ವೃದ್ಧ ಸಾವು

ದಾವಣಗೆರೆ: ಜಿಲ್ಲೆಯಲ್ಲಿ 38 ವೃದ್ಧರು, 37 ವೃದ್ಧೆಯರು ಸೇರಿ 332 ಮಂದಿಗೆ ಕೊರೊನಾ ಇರುವುದು ಮಂಗಳವಾರ ದೃಢಪಟ್ಟಿದೆ. ಒಬ್ಬರು ಮೃತಪಟ್ಟಿದ್ದಾರೆ.

ಪಿಜೆ ಬಡಾವಣೆಯ 65 ವರ್ಷದ ವೃದ್ಧ ತೀವ್ರ ಉಸಿರಾಟದ ಸಮಸ್ಯೆಯಿಂದ ನಿಧನರಾದರು. ಅವರು ಅಧಿಕ ರಕ್ತದೊತ್ತಡ, ಹೃದಯಸಂಬಂಧಿ ಕಾಯಿಲೆ, ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದರು.

21 ಬಾಲಕರಿಗೆ, 19 ಬಾಲಕಿಯರಿಗೂ ಕೊರೊನಾ ಬಂದಿದೆ. 18ರಿಂದ 59 ವರ್ಷದ ವರೆಗಿನ 121 ಪುರುಷರಿಗೆ, 96 ಮಹಿಳೆಯರಿಗೆ ಸೋಂಕು ತಗುಲಿದೆ.

ದಾವಣಗೆರೆ ತಾಲ್ಲೂಕಿನಲ್ಲಿ 206 ಪ್ರಕರಣಗಳು ದಾಖಲಾಗಿವೆ. ಅಣಜಿಯಲ್ಲಿ 13, ಅತ್ತಿಗೆಯಲ್ಲಿ 12, ನಂತ್ಲೂರಲ್ಲಿ 8, ಮಾಯಕೊಂಡದಲ್ಲಿ ಏಳು ಪ್ರಕರಣಗಳು ಪತ್ತೆಯಾಗಿವೆ. ಮಂಡಲೂರು, ಅಗಸನಕಟ್ಟೆಯಲ್ಲಿ ತಲಾ 2, ಬೆಳಗುತ್ತಿ, ಕಂಚನೂರು, ಹೊನ್ನೂರು, ಪುಟ್ಟನಾಳ್‌, ಕಕ್ಕರಗೊಳ್ಳ, ಕಮಂಡಲಗುಂಡಿ, ಐಗೂರಿನಲ್ಲಿ ಒಂದೊಂದು ಪ್ರಕರಣಗಳು ಪತ್ತೆಯಾಗಿವೆ.

ಉಳಿದ 157 ಪ್ರಕರಣಗಳು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಂಡು ಬಂದಿವೆ.

ಇನ್‌ಸ್ಟಿಟ್ಯೂಷನಲ್‌ ಕ್ವಾರಂಟೈನ್‌ನಲ್ಲಿದ್ದ 24 ಮಂದಿ ಸೋಂಕಿಗೆ ಒಳಗಾಗಿದ್ದಾರೆ. ಆಂಜನೇಯ ಬಡಾವಣೆ, ನಿಟುವಳ್ಳಿಗಳಲ್ಲಿ 10ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ವಿನೋಬನಗರ, ಕೆ.ಬಿ. ಬಡಾವಣೆ, ಕೆಟಿಜೆ ನಗರ, ಜಯನಗರ, ಸರಸ್ವತಿನಗರ, ಭಗತ್‌ಸಿಂಗ್‌ ನಗರಗಳಲ್ಲಿ ಐದಕ್ಕಿಂತ ಹೆಚ್ಚು ಪ್ರಕರಣಗಳಿವೆ.

ಹರಿಹರ ತಾಲ್ಲೂಕಿನಲ್ಲಿ 42, ಜಗಳೂರು ತಾಲ್ಲೂಕಿನಲ್ಲಿ 25, ಹೊನ್ನಾಳಿ-ನ್ಯಾಮತಿ ತಾಲ್ಲೂಕು ವ್ಯಾಪ್ತಿಯಲ್ಲಿ 29, ಚನ್ನಗಿರಿ ತಾಲ್ಲೂಕಿನಲ್ಲಿ 19 ಪ್ರಕರಣಗಳು ಪತ್ತೆಯಾಗಿವೆ. ದಾವಣಗೆರೆಯಲ್ಲಿ ವಿವಿಧ ರೋಗಗಳಿಗೆ ಚಿಕಿತ್ಸೆ ಪಡೆಯುತ್ತಿದ್ದ ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ನಾಲ್ವರು, ಬ್ಯಾಡಗಿಯ ಇಬ್ಬರು, ಚಿತ್ರದುರ್ಗದ ಇಬ್ಬರು, ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ, ಹಾಸನ ಜಿಲ್ಲೆ ಅರಸೀಕೆರೆ, ಬೆಳಗಾವಿ ಜಿಲ್ಲೆಯ ಕಾನ್ಪುರದ ತಲಾ ಒಬ್ಬರಿಗೆ ಸೋಂಕು ಇರುವುದು ದೃಢವಾಗಿದೆ.

ಐವರು ವೃದ್ಧೆಯರು, 9 ವೃದ್ಧರು, ಒಬ್ಬ ಬಾಲಕ, ಒಬ್ಬ ಬಾಲಕಿ ಸೇರಿ 45 ಮಂದಿ ಗುಣಮುಖರಾಗಿ ಮಂಗಳವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 5785 ಪ್ರಕರಣಗಳು ದಾಖಲಾಗಿವೆ. ಅದರಲ್ಲಿ 3787 ಮಂದಿ ಗುಣಮುಖರಾಗಿದ್ದಾರೆ. 130 ಮಂದಿ ಮೃತಪಟ್ಟಿದ್ದಾರೆ. 1868 ಪ್ರಕರಣಗಳು ಸಕ್ರಿಯವಾಗಿವೆ. ಅದರಲ್ಲಿ 9 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

About vijay_shankar

Check Also

test

test

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.