
ಅಮೀನಗಡ: ಇಂದು ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದ ಸರಕಾರಿ ಪ್ರೌಡ ಶಾಲೆಯ ಆವರಣದಲ್ಲಿ ಬೆಳಗ್ಗೆ ೬ ಗಂಟೆಗೆ ವಿಶ್ವ ಯೋಗ ದಿನದ ನಿಮಿತ್ತವಾಗಿ ಗ್ರಾಮದ ವೀರ ಸಾರ್ವಕರ ಯುವಸೇನೆ ಸಂದಿಂದ ಈ ಯೋಗ ದಿನಾಚರಣೆಯನ್ನು ಆಚರಿಸಲಾಯಿತು, ಯೋಗಪಟು ಗ್ರಾಮದ ಸಂಗಮೇಶ ಘಂಟಿ ಅವರಿಂದ ಶಾಲಾ ಮಕ್ಕಳಿಗೆ ,ಕಿರಿಯರಿಗೆ, ಮಹಿಳೆಯರಿಗೆ, ಒಂದು ಗಂಟೆ ಯೋಗದ ವಿವಿಧ ಭಂಗಿಗಳ ನ್ನು ನಿತ್ಯ ಮನೆಯಲ್ಲಿ ಹೇಗೆ ಮಾಡಬೇಕು ಎಂದು ಸಂಗಮೇಶ ಅವರು ತಿಳಿಸಿ ಕೊಟ್ಟರು.

ಈ ವಿಶ್ವ ಯೋಗ ದಿನದಂದು ಬರಿ ಒಂದು ಗಂಟೆ ಯೋಗ ಮಾಡಿದರೆ ಗೊತ್ತಾಗೊದಿಲ್ಲ ಈ ಗ್ರಾಮದ ಪ್ರತಿಯೊಬ್ಬರ ಆರೋಗ್ಯದ ಹಿತ ದೃಷ್ಟಿಯಿಂದ ಪ್ರತಿ ದಿನ ಬೆಳಗಿನ ೫:೩೦ ಗಂಟೆಗೆ ಐದು ದಿನಗಳ ಕಾಲ ಉಚಿತವಾಗಿ ಈ ವೀರ ಸಾರ್ವಕರ ಯುವ ಸೇನೆ ಯೋಗ ತರಬೇತಿ ಹಮ್ಮಿಕೊಂಡಿದೆ,ಸಾರ್ವಜನಿಕರು ತಪ್ಪದೆ ಇದರ ಸದುಪಯೋಗ ಪಡೆದು ಉತ್ತಮ ಆರೋಗ್ಯ ಪಡೆಯಬೇಕು ಎಂದು ನಾಗೇಶ ಗಂಜಿಹಾಳ ಹೇಳಿದರು,

ಈ ಯೋಗ ದಿನಾಚರಣೆಯನ್ನು ಪ್ರೌಡ ಶಾಕೆಯ ಉಪಪ್ರಾಚಾರ್ಯರಾದ ಶ್ರೀ ಎಚ್,ಎಮ್, ಹಾಲಣ್ನವರ ಭಾರತ ಮಾತೆಗೆ ಹಾಗೂ ವೀರ ಸಾರ್ವಕರ ಅವರ ಭಾವ ಚಿತ್ರಕ್ಕೆ ಪುಷ್ಪಗಳನ್ನು ಅರ್ಪಿಸುವ ಮೂಲಕ ಉದ್ಘಾಟಿಸಿದರು, ಈ ಸಂದರ್ಭದಲ್ಲಿ ಈ ಯೋಗ ದಿನದ ಕಾರ್ಯಕ್ರಮ ಹಮ್ಮಿಕೊಂಡಿರುವ ಈ ಸಂಘದ ಮುಖ್ಯ ರುವಾರಿ,ಶ್ರೀ ನಾಗೇಶ ಗಂಜಿಹಾಳ, ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀ ಹನಮಂತ ಮಿಣಜಗಿ,ಶ್ರೀ ಗ್ಯಾನಪ್ಪ ಗೋನಾಳ,ಶ್ರೀ ನೀಲಪ್ಪ ಪೂಜಾರ,ಶ್ರೀ ಆನಂದ ಮೊಕಾಶಿ,ಶ್ರೀ ರಮೇಶ ಮಡಿವಾಳರ,ಶ್ರೀ ಕೂಡ್ಲಪ್ಪ ಹುಲ್ಯಾಳ,ಶ್ರೀ ಯಮನೂರ ಹುಲ್ಯಾಳ,ಶ್ರೀ ಮಾಂಡ್ರೆ,ನೆಮದಿ,ಅನೇಕ ಯುವಕರು ಈ ಯೋಗದಿನವನ್ನು ಆಯೋಜಿಸಿದ್ದರು.

, ಉಪ ಪ್ರಾಚಾರ್ಯ ಸೇರಿದಂತೆ ಶಾಲೆಯ ಗುರುಗಳಾದ ಶ್ರೀ ಮಹಾದೇವ ಬಸರಕೊಡ,ಶ್ರೀಮತಿ ಡಾ: ಶಿವಗಂಗಾ ರಂಜನಗಿ. ಶ್ರೀ ಗುರುರಾಜ್ ಚಿನಿವಾಲರ, ಯೋಗ ಹಾಗೂ ಆರೋಗ್ಯದ ಕುರಿತು ಮಾತನಾಡಿ ಪ್ರತಿ ನಿತ್ಯ ಯೋಗ ಮಾಡಿ ಆರೋಗ್ಯ ಕಾಪಾಡಲು ಸಲಹೆ ನೀಡಿದರು.ಯೋಗಪಟು ಶ್ರೀ ಸಂಗಮೇಶ ಘಂಟಿ ಉಚಿತವಾಗಿ ಇಂದಿನಿಂದ ಐದು ದಿನ ಇದೆ ಶಾಲಾ ಆವರಣದಲ್ಲಿ ಯೋಗವನ್ನು ಸರಳವಾಗಿ ಮನೆಯಲ್ಲಿ ಮಾಡುವ ಕೆಲವು ಆಸನಗಳನ್ನು ಹೇಳಿ ಕೋಡಲಾಗುದು ಗ್ರಾಮದ ಜನತೆ ಇದರ ಉಪಯೋಗ ಮಾಡಿಕೊಳ್ಳಬೇಕು ಎಂದರು.
