Breaking News

ಗೋಹತ್ಯೆ ನಿಷೇಧ ಮಸೂದೆ ಅಧಿವೇಶನದಲ್ಲಿ ಮಂಡನೆ

ಕಲಬುರಗಿ: ಗೋ ಮಾತೆ ರಕ್ಷಣೆಗೆ ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ' ಮಸೂದೆಯನ್ನು ಮಳೆಗಾಲ ಅಧಿವೇಶನದಲ್ಲೇ ಮಂಡಿಸುವುದಾಗಿ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಹೇಳಿದರು. ಗೋವು ಇತರ ಪಶುಗಳಿಗೆ ತುರ್ತು ಸಂದರ್ಭದಲ್ಲಿ ಮನೆ ಬಾಗಿಲಿಗೆ ತೆರಳಿ ಚಿಕಿತ್ಸೆ ನೀಡಲು ಹೊಸದಾಗಿ ಆರಂಭಿಸಿರುವಪಶು ಸಂಜೀವಿನಿ’ ಆಂಬುಲೆನ್ಸ್ ಸೇವೆಗೆ ನಗರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ಸಂಸದ ನಳಿನ್ ಕುಮಾರ ಕಟೀಲ್ ಜತೆ ಗುರುವಾರ ಚಾಲನೆ ನೀಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಈಗಾಗಲೇ ಇಂತಹ ಕಾಯ್ದೆ ಜಾರಿಗೊಳಿಸಿರುವ ಗುಜರಾತ್, ಮಧ್ಯಪ್ರದೇಶ ಮೊದಲಾದ ಕಡೆಗಳಿಂದ ಕಾಯ್ದೆ ಪ್ರತಿ ತರಿಸಿಕೊಂಡು ತಜ್ಞರು ಅಧ್ಯಯನ ಮಾಡಿ ಕರ್ನಾಟಕ ಗೋಹತ್ಯೆ ನಿಷೇಧ ಕಾಯ್ದೆ-2020 ರೂಪಿಸುವ ನಿಟ್ಟಿನಲ್ಲಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎಂದರು.
ಈ ಕಾಯ್ದೆ ಗೋವುಗಳನ್ನು ಕಸಾಯಿಖಾನೆಗೆ ಸಾಗಿಸುವುದನ್ನು ತಡೆಗಟ್ಟಲು ಸಹಕಾರಿಯಾಗಲಿದೆ. ಈ ಹಿಂದೆ ರೂಪಿಸಿದ್ದ ಕಾಯ್ದೆಯನ್ನು ಕೇಂದ್ರ ಸರ್ಕಾರ ವಾಪಸ್ ಕಳುಹಿಸಿತ್ತು. ಈಗ ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದುದ್ದರಿಂದ ಮಹತ್ವದ ಕಾಯ್ದೆ ಜಾರಿಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ಶಾಸಕರಾದ ಬಿ.ಜಿ.ಪಾಟೀಲ್, ರಾಜಕುಮಾರ ಪಾಟೀಲ್ ತೆಲ್ಕೂರ, ಬಸವರಾಜ ಮತ್ತಿಮೂಡ, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ದಿ ನಿಗಮ ಅಧ್ಯಕ್ಷ ಬಾಬುರಾವ ಚಿಂಚನಸೂರ, ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಅಮರನಾಥ ಪಾಟೀಲ್, ಮಾಲೀಕಯ್ಯ ಗುತ್ತೇದಾರ್, ಯುವ ನೇತಾರ ಚಂದು ಪಾಟೀಲ್, ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ಮಹಾನಗರ ಜಿಲ್ಲಾಧ್ಯಕ್ಷ ಸಿದ್ದಾಜಿ ಪಾಟೀಲ್, ಮುಖಂಡರಾದ ರವಿ ಬಿರಾದಾರ, ಸಂಜಯ ಮಿಸ್ಕಿನ್, ಸೂರಜ್ ತಿವಾರಿ, ಪ್ರಲ್ಹಾದ್ ಭಟ್ಟ ಪೂಜಾರಿ, ಉಮೇಶ ಪಾಟೀಲ್, ಶರಣಬಸಪ್ಪ ಅಂಬೆಸಿಂಗೆ, ಪಶುಸಂಗೋಪನೆ ಇಲಾಖೆ ಉಪನಿದರ್ೇಶಕ ಡಾ.ವಿ.ಎಚ್. ಹನುಮಂತಪ್ಪ ಇತರರಿದ್ದರು.

41 ಆಂಬುಲೆನ್ಸ್ ಖರೀದಿ
ರಾಜ್ಯಾದ್ಯಂತ ಪಶುಗಳಿರುವ ಸ್ಥಳಕ್ಕೆ ಹೋಗಿ ಚಿಕಿತ್ಸೆ ನೀಡುವ ಪಶು ಸಂಜೀವಿನಿ ಆಂಬುಲೆನ್ಸ್ ಸೇವೆ ಪಡೆಯಲು ರೈತರು 1962 ಸಂಖ್ಯೆಗೆ ಕರೆ ಮಾಡಬಹುದು. ಈ ಸೇವೆ ಒದಗಿಸಲು 41 ಆಂಬುಲೆನ್ಸ್ಗಳನ್ನು ಖರೀದಿಸಿ ಜಿಲ್ಲೆಗೊಂದು ವಿತರಿಸಲಾಗುವುದು. ದೊಡ್ಡ ಜಿಲ್ಲೆಗೆ ಎರಡು ಒದಗಿಸಲಾಗುವುದು ಎಂದು ಸಚಿವ ಪ್ರಭು ಚವ್ಹಾಣ್ ತಿಳಿಸಿದರು. ಶಸ್ತ್ರ ಚಿಕಿತ್ಸೆ ಸಲಕರಣೆ, ಸಾ್ಕೃನಿಂಗ್ ಸೇರಿ ಎಲ್ಲ ಯಂತ್ರೋಪಕರಣಗಳನ್ನು ಆಂಬುಲೆನ್ಸ್ ಹೊಂದಿದೆ. ಮೊದಲ ಹಂತದಲ್ಲಿ 15 ವಾಹನ ಖರೀದಿಸಿದ್ದು, ಈ ಪೈಕಿ 10 ಬೆಂಗಳೂರಿಗೆ, ಬೀದರ್, ಕಲಬುರಗಿ, ಯಾದಗಿರಿ ಜಿಲ್ಲೆಗಳಿಗೆ ಒಂದೊಂದು ನೀಡಲಾಗಿದೆ. ಉಳಿದವು ಕ್ರಮೇಣ ಹಂಚಿಕೆ ಮಾಡಲಾಗುತ್ತದೆ ಎಂದರು. ಪ್ರಾಣಿಗಳ ರಕ್ಷಣೆಗಾಗಿ ಪ್ರಾಣಿ ಕಲ್ಯಾಣ ಮಂಡಳಿ ಸ್ಥಾಪಿಸಲಾಗಿದೆ. ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಬಡ್ತಿ ನೀಡಿ ನಿಯೋಜಿಸಿದ್ದರಿಂದ ಸಮಸ್ಯೆ ಕೊಂಚ ಕಡಿಮೆಯಾಗಿದೆ. ಇನ್ನಷ್ಟು ವೈದ್ಯರನ್ನು ಶೀಘ್ರ ನೇಮಕ ಮಾಡಲಾಗುವುದು ಎಂದು ಸಚಿವ ಚವ್ಹಾಣ್ ತಿಳಿಸಿದರು.

ಗೋವು ಇತರ ಪ್ರಾಣಿಗಳಿಗೆ ತುತರ್ು ಹೊತ್ತಿನಲ್ಲಿ ಸೂಕ್ತ ಚಿಕಿತ್ಸೆ ಸಿಗುವಂತಾಗಬೇಕು ಎಂಬ ಉದ್ದೇಶದಿಂದ ಪಶು ಸಂಜೀವಿನಿ ಆಂಬುಲೆನ್ಸ್ ಸೇವೆಯ ಮೊದಲ ಪ್ರಯೋಗವನ್ನು ಸಚಿವ ಪ್ರಭು ಚವ್ಹಾಣ್ ಮಾಡಿದ್ದು ಮಾದರಿಯಾಗಿದೆ. ಅಲ್ಲದೆ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರುವುದಾಗಿ ಪ್ರಕಟಿಸಿದ್ದು ಒಳ್ಳೆಯ ಸಂಗತಿ.
| ನಳಿನ್ಕುಮಾರ್ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷ

About vijay_shankar

Check Also

test

test

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.