Breaking News

ಸಚಿವರ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆ; ಆರೋಪಿ ಬಂಧನ

ಠಾಣೆ : ಮಹಾರಾಷ್ಟ್ರದ ಸಚಿವರೊಬ್ಬರ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆ ಸೃಷ್ಟಿಸಿ, ಅದರಿಂದ ಆಕ್ಷೇಪಾರ್ಹ ವಿಷಯವನ್ನು ಪೋಸ್ಟ್ ಮಾಡಿದ ಆರೋಪದಡಿ ವ್ಯಕ್ತಿಯೊಬ್ಬನನ್ನು ಠಾಣೆ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದರು.

ಈ ಸಂಬಂಧ ಪೊಲೀಸರು ಏಪ್ರಿಲ್‌ 8 ರಂದು ಪ್ರಕರಣ ದಾಖಲಿಸಿದ್ದರು. ಇಲಾಖೆಯ ಸೈಬರ್‌ ವಿಭಾಗವು ಪ್ರಕರಣ ಸಂಬಂಧ ತನಿಖೆಯನ್ನು ನಡೆಸಿತು.

‘ಕಳೆದ ವಾರ ಈ ಪ್ರಕರಣದಡಿ ಔರಾಂಗಬಾದ್‌ ಜಿಲ್ಲೆಯ ವಾಲುಜ್‌ನಲ್ಲಿ 28 ವರ್ಷದ ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಸೈಬರ್‌ ವಿಭಾಗದ ಇನ್‌ಸ್ಪೆಕ್ಟರ್‌ ಬಾಲಕೃಷ್ಣ ವಾಘ್‌ ಅವರು ಮಾಹಿತಿ ನೀಡಿದರು. ನಕಲಿ ಫೇಸ್‌ಬುಕ್‌ ಖಾತೆ ಸೃಷ್ಟಿಸಲು ಬಳಸಲಾಗಿದ್ದ ಫೋನ್‌ ಅನ್ನು ಪೊಲೀಸರು ವಶಕ್ಕೆ ಪಡಿದಿದ್ದಾರೆ ಎಂದು ಅವರು ಹೇಳಿದರು.

About vijay_shankar

Check Also

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಆನಂದ ಪರಾಳದ

ಶ್ರೀ ಆನಂದ ಪರಾಳದ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮ ಪಂಚಾಯತಿ ಸದಸ್ಯರು ಇವರಿಂದ ನಾಡಿನ ಸಮಸ್ತ ಜನತೆಗೆ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.