ಜಗತ್ತಿನ ಎಲ್ಲೂ ಇಲ್ಲ ದಂತಹ ಕೊರೊನ ತ್ರಿವಳಿ ಅಲೆ ಭಾರತದಲ್ಲಿ ಭೀತಿಯನ್ನು ಸೃಷ್ಟಿ ಮಾಡಿದೆ.ಬ್ರಿಟನ್ ಈಗ ತಾನೇ ಭಾರತವನ್ನು ರೆಡ್ ಝೂನ್ ಪಟ್ಟಿಗೆ ಸೇರಿಸಿದೆ. ಭಾರತೀಯರಂತೂ ಕಂಗಾಲಾಗಿ ಅಸಹಾಯಕತೆಯನ್ನು ತೋರ್ಪಡಿಸುತ್ತಿದ್ದಾರೆ.

ಭಾರತವು ಎಲ್ಲೋ ಒಂದು ಕಡೆ ನಿರ್ಲಕ್ಷ್ಯ ತೋರಿತೋ ಎಂದು ಅನಿಸುತ್ತಿದೆ. ಎರಡನೆಯ ಅಲೆಗೆ ಮೊದಲು ಬೇಕಾದ ಸಿದ್ಧತೆ ನಡೆಸುವ ಅವಕಾಶ ಧಾರಾಳವಿತ್ತು. ಅದೇನೆ ಇದ್ದರೂ ಈಗ ಪರಿಭ್ರಮಿಸಿ ಪ್ರಯೋಜನ ಇಲ್ಲ. ಕಳೆದ ಸಲದಂತೆ ತಬ್ಲೀಗಿ ವೈರಸ್ ಯಾರನ್ನೂ ಕಾಡಲಿಲ್ಲ. ಅಂದು ಗಂಟಲು ಒಡೆದು ಹೋಗುವಂತೆ ಅರಚಲು ಚಾನಲುಗಳಿಗೆ ದಮ್ಮು ಇಲ್ಲವಾಗಿದೆ.
ಚುನಾವಣೆಗಳ ಭರಾಟೆ, ಕುಂಭ ಮೇಳ, ಜನರ ನಿರ್ಲಕ್ಷ್ಯ, ಬೇಜವಾಬ್ದಾರಿತನ,ಕೊರೋನ ಸರ್ಕಾರಗಳ ಲೂಟಿ ಮುಂತಾದವು ಸರ್ವಸಾಮಾನ್ಯ ವಾಗಿ ಕಂಡಿತು. ಜೀವರಕ್ಷಕ ಆಕ್ಸಿಜನ್ ಕೂಡಾ ಇಲ್ಲದೇ ಬೆಡ್ ಸಿಗದೇ ಇರುವ ಸಂಕಟ ಎದುರಾಯಿತು. ಜೀವ ಕಳಕೊಂಡರೆ ಹೆಣವನ್ನು ಸುಡಲು ಅಥವಾ ಮಣ್ಣು ಮಾಡಲು ಸಾಧ್ಯವಾಗದೇ ಅವಕಾಶಕ್ಕಾಗಿ ಹರಸಾಹಸ ಪಡುವ ಸಂಬಂಧಿಕರ ರೋಧನವು ಹೃದಯ ಕಲುಕುವಂತಿದೆ.

ಇಂತಹ ದುಸ್ಥಿತಿಗೆ ತಲುಪಲು ಯಾರು ಕಾರಣ? ಜನರು ಸರಕಾರ ಏನು ಹೇಳಿತೋ ಹಾಗೇ ಮಾಡಿತು. ಅಧಿಕಾರಿಗಳು ಏನು ಹೇಳಿದರೋ ಅದನ್ನು ಮಾಡಿದರು. ಜನಸಾಮಾನ್ಯರಂತೂ ಕಾರಣರಲ್ಲ.ಇಂತಹ ದುಸ್ಥಿತಿ ಯಂತೂ ಒಂದು ದೇಶ ಒಂದು ಜನತೆ ಎಂಬ ಪರಿಕಲ್ಪನೆಯಿಂದ ಬಲುದೂರ ಸಾಗಿದಂತಿದೆ.
ಸಂಕಷ್ಟದ ದಿನಗಳಲ್ಲಿ ಮುಸ್ಲಿಮರು ಮಾಡುತ್ತಿರುವ ಮಾನವೀಯ ವರ್ತನೆಗಳಂತೂ ಹೃದಯ ತುಂಬಿ ಬರುವಂತಹುದು.ಈ ಸಲ ಎಚ್ಚರಿಕೆಯಿಂದಲೇ ಸಮುದಾಯವಿದೆ.ತಲ್ಲೀಗೋ ಪಾದರಾಯಣದ ಪುಂಡಾಟವೋ ಇಲ್ಲ. ಎಲ್ಲರ ಕಣ್ಣು ತೆರೆಸುವಂತಹ ಕಾರ್ಯಗಳನ್ನು ಅದು ಮಾಡುತ್ತಿದೆ.ಸಾಕ್ಷಾತ್ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಯವರು ಮುಸ್ಲಿಮರನ್ನು ಮುಕ್ತವಾಗಿ ಹೊಗಳಿದರು.

ಸಂದಿಗ್ಧ ಪರಿಸ್ಥಿತಿಯಲ್ಲಿ ಮುಸ್ಲಿಮರು ಕೊರೊನ ವಿರುದ್ಧ ಹೋರಾಡುವ ವಾರಿಯರ್ ಗಳಾಗಿ ಬದಲಾದ ಸನ್ನಿವೇಶ ವನ್ನು ನೆನೆದು ಅವರು ಹೇಳಿದ್ದು ಈ ರೀತಿ ಯಾಗಿತ್ತು. “ಭಾರತ ಮುಸ್ಲಿಮರನ್ನು ಯಾವತ್ತೂ ಮರೆಯಲು ಸಾಧ್ಯವಿಲ್ಲ.”
ಹೌದು ಮುಸ್ಲಿಮರು ಕೊರೋನ ಬಾಧಿತ ಪ್ರದೇಶಗಳಲ್ಲಿ ಕಾಲಿಗೆ ಚಕ್ರ ಕಟ್ಟಿ ಓಡಾಡಿದರು. ಮಸೀದಿಗಳಲ್ಲಿ ರೋಗಿಗಳಿಗೆ ಆರೈಕೆ ನೀಡಿದರು. ಆಕ್ಸಿಜನ್ ಸಿಲಿಂಡರ್ ಉಚಿತವಾಗಿ ಪೂರೈಸಿದರು. ಎಲ್ಲಾ ರೀತಿಯ ಮಾಡಿದರು.ಶವಸಂಸ್ಕಾರ ಸಹಕಾರ ಕಾರ್ಯ ದಲ್ಲೂ ಮುಂಚೂಣಿ ಯಲ್ಲಿ ನಿಂತರು. ಜಾತಿ ಬೇಧ ವಿಲ್ಲದೇ ಶವಗಳಿಗೆ ಹೆಗಲು ಕೊಟ್ಟರು. ಕೆಲವು ವರ್ಷಗಳ ಹಿಂದೆ ಕೋಮು ದಳ್ಳುರಿಗೆ ಸಿಲುಕಿ ಕಂಗೆಟ್ಟ ಗುಜರಾತಿನ ಮುಸ್ಲಿಂ ಸಮುದಾಯ ಕೊರೋನ ವಿರುದ್ಧ ಹೋರಾಟದಲ್ಲಿ ಹಿಂದೆ ಬೀಳಲಿಲ್ಲ.ಇಡೀ ಜಗತ್ತಿಗೆ ಮಾದರಿಯಾಗಿ ವಡೋದರ ದಲ್ಲಿ ಮಸೀದಿಯನ್ನೇ ಆಸ್ಪತ್ರೆ ಯಾಗಿ ಬದಲಿಸಿ ಸರ್ವರಿಗೂ ಸಾಂತ್ವನ ನೀಡಿತು.
ಯಾರಿಂದಲೂ ತಿರಸ್ಕರಿಸಲಾಗದ ಅತ್ಯಮೂಲ್ಯ ಬಗ್ಗೆ ಮಾನವೀಯ ಮೌಲ್ಯಗಳನ್ನು ಜನರಿಗೆ ಪರಿಚಯಿಸುತ್ತಿರುವ ಸಮುದಾಯದ ಯಾರಿಗಾದರೂ ಹೆಮ್ಮೆ ಎನಿಸದೇ ಹೋದರೆ ಯಾರೂ ಕೂಡಾ ಬೇಸರ ಪಡಬೇಕಾಗಿಲ್ಲ.ನಾವು ನಮ್ಮ ಧರ್ಮವನ್ನು ಪಾಲಿಸಿದ ಬಗ್ಗೆ ಆತ್ಮ ಸಂತೃಪ್ತಿ ಪಡವುದರಲ್ಲಿ ಖಂಡಿತಾ ಆನಂದ ವಿದೆ.
ಕೊನೆಯದಾಗಿ ಮುಂದೆಯೂ ನಾವು ಸದಾ ಸಿದ್ಧ ರಾಗಿ ನಿಲ್ಲಬೇಕಾಗಿದೆ. ಒಂದು ವೇಳೆ ಆಸ್ಪತ್ರೆ ಗಳಲ್ಲಿ ಬೆಡ್ ಮತ್ತು ಆಕ್ಸಿಜನ್ ಸಿಗದಂತೆ ಜನ ಪರದಾಡುವ ಪರಿಸ್ಥಿತಿ ಬರುವುದಾದರೆ ಬಂದ್ ಮಾಡಲಾದ ಮದರಸ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಬದಲಿ ವ್ಯವಸ್ಥೆಗೂ ಸಮುದಾಯ ಸಿದ್ಧರಾಗುವ ಬಗ್ಗೆ ಕೂಡಾ ಚರ್ಚೆಗಳು ನಡೆಯಲಿ. ಆದರೆ ಅಂತಹಾ ಪರಿಸ್ಥಿತಿ ಬಾರದಂತೆ ಶೀಘ್ರವಾಗಿ ಈ ಮಹಾ ಮಾರಿ ಯಿಂದ ಜಗತ್ತನ್ನು ಅಲ್ಲಾಹನು ಪಾರುಮಾಡಲಿ ಎಂದು ಕೈಗಳನ್ನು ಎತ್ತಿ ಪ್ರಾರ್ಥನೆ ಮಾಡೋಣ.
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News