ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 48,296 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಸೋಂಕಿತರ ಸಂಖ್ಯೆ 15,23,142ಕ್ಕೆ ಏರಿದ್ದು, 3,82,690 ಸಕ್ರಿಯ ಪ್ರಕರಣಗಳಿವೆ.
ಬೆಂಗಳೂರು, 30: ಸೋಂಕು ದೃಢಪಡುತ್ತಿರುವ ಶೇಕಡವಾರು ಪ್ರಮಾಣ ಶೇ 25ಕ್ಕೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ 217 ಜನರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಇಂದಿನವರೆಗೆ ಮೃತರ ಒಟ್ಟು ಸಂಖ್ಯೆ 15,523ಕ್ಕೆ ಜಿಗಿದಿದೆ.

ಬೆಂಗಳೂರು ಒಂದರಲ್ಲೇ 26,756 ಹೊಸ ಪ್ರಕರಣ ಪತ್ತೆಯಾಗಿವೆ. ಒಂದೇ ದಿನ ನಗರದಲ್ಲಿ 93 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 2,59,058ಕ್ಕೆ ಏರಿಕೆಯಾಗಿದೆ.ಉಳಿದಂತೆ, 3,500 ಹೊಸ ಪ್ರಕರಣಗಳು ದಾಖಲಾಗುವ ಮೂಲಕ ಮೈಸೂರು ಜಿಲ್ಲೆ ಎರಡನೇ ಸ್ಥಾನ ಪಡೆದಿದೆ. ಬಳ್ಳಾರಿಯಲ್ಲಿ 1,282, ಕಲಬುರ್ಗಿಯಲ್ಲಿ 1,250 ಮತ್ತು ದಕ್ಷಿಣ ಕನ್ನಡದಲ್ಲಿ 1,205 ಹೊಸ ಪ್ರಕರಣಗಳು ಪತ್ತೆಯಾಗಿವೆ.