Breaking News

ಪಂಚಾಯತ ಸಿಬ್ಬಂದಿಯ ಪತ್ನಿಯನ್ನೇ ಮಂಚಕ್ಕೆ ಕರೆದ ಭೂಪ ಹೆಂಡ್ತಿ ಮೆಂಬರ್, ಗಂಡನ ದರ್ಬಾರ್.!!

ಗದಗ: ತುಂಬು ಸಂಸಾರ, ಜೀವನ ನಿರ್ವಹಣೆಗೆ ಗ್ರಾಮ ಪಂಚಾಯತ್ನಲ್ಲಿ ಒಂದು ಕೆಲಸ. ಈ ನಡುವೆ ಆರೋಗ್ಯ ಸರಿಯಿಲ್ಲ ಎಂದು ತಿಂಗಳ ಕಾಲ ರಜೆ ಹಾಕಿದ್ದನ್ನೇ ನೆಪ ಮಾಡಿಕೊಂಡು ಅಮಾಯಕ ವ್ಯಕ್ತಿಯನ್ನ ಕೆಲಸದಿಂದ ತೆಗೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೇ ನನ್ನ ಗಂಡನನ್ನು ಮತ್ತೆ ಕೆಲಸಕ್ಕೆ ತಗೋಳಿ ಎಂದು ಮನವಿ ಮಾಡಿಕೊಂಡರೇ ಪ್ರಭಾವಿ ವ್ಯಕ್ತಿವೋರ್ವ ಪಂಪ್ ಆಪರೇಟರನ ಪತ್ನಿಯನ್ನೇ ಮಂಚಕ್ಕೆ ಕರೆದಿದ್ದಾನೆ ಎನ್ನಲಾದ ಆಡಿಯೋವೊಂದು ವೈರಲ್ ಆಗಿದೆ.

ಹೌದು, ಗದಗ ತಾಲೂಕಿನ ಹುಯಿಲಗೋಳ ಗ್ರಾಮ ಪಂಚಾಯತ್ ಸದಸ್ಯೆ ನೀಲವ್ವ ಎಂಬುವರ ಗಂಡ ರಮೇಶನ ವಿರುದ್ಧ ಈ ಆರೋಪ ಕೇಳಿಬಂದಿದೆ. ಹಣಮಂತಪ್ಪ ಗಂಗಪ್ಪನವರ್ ಎಂಬಾತ ಕಳೆದ 18 ವರ್ಷಗಳಿಂದ ಪಂಚಾಯತ್ ನೌಕರನಾಗಿ ಕೆಲಸ ಮಾಡುತ್ತಿದ್ದಾನೆ. ಎರಡು ತಿಂಗಳ ಹಿಂದೆ ಕೈಗೆ ಪೆಟ್ಟಾಗಿ ರಜೆ ತೆಗೆದುಕೊಂಡಿದ್ದ. ಇದರಿಂದ ಕೆಲಸಕ್ಕೆ ಸರಿಯಾಗಿ ಬರುತ್ತಿಲ್ಲ ಎಂಬ ನೆಪವೊಡ್ಡಿ ಆಫೀಸ್ಗೆ ಬರಬೇಡಿ ಎಂದು ಪಂಚಾಯತ್ ಅಧಿಕಾರಿಗಳು ಸೂಚಿಸಿದ್ದರು ಎನ್ನಲಾಗ್ತಿದೆ.

ಮನೆಯ ಪರಿಸ್ಥಿತಿಯೂ ಬಿಗಡಾಯಿಸಿದ ಹಿನ್ನೆಲೆ ಹಣಮಂತಪ್ಪನ ಹೆಂಡತಿ ಪಂಚಾಯತ್ ಸದಸ್ಯರ ಬಳಿ ಕೆಲಸಕ್ಕೆ ಸೇರಿಸುವಂತೆ ಬೇಡಿಕೊಂಡಿದ್ದಾರೆ. ರಮೇಶನಿಗೂ ಫೋನ್ ಮೂಲಕ ಸಹಾಯ ಮಾಡಿ ಎಂದು ಕೇಳಿದ್ದಾರೆ. ಈಕೆಯ ಅಸಹಾಯಕತೆಯನ್ನ ಬಂಡವಾಳ ಮಾಡಿಕೊಂಡ ಜೊಲ್ಲು ಪಾರ್ಟಿ ರಮೇಶ, ಸೀದಾ ಮಂಚಕ್ಕೆ ಕರೆದಿದ್ದಾನೆ. ನೀನು ಬೇಕು ಬಾ ಅಂತಾ ದುಂಬಾಲು ಬಿದ್ದಿದ್ದಾನೆ.

ಈ ಬಗ್ಗೆ ಪಂಚಾಯತ್ ಅಧಿಕಾರಿಗಳನ್ನು ಕೇಳಿದರೆ ಹಣಮಂತಪ್ಪ ಸರಿಯಾಗಿ ಕೆಲಸಕ್ಕೆ ಬರ್ತಿರಲಿಲ್ಲ. ಬುದ್ಧಿ ಕಲಿಯಲಿ ಎಂದು ಎರಡು ತಿಂಗಳು ವಜಾ ಮಾಡಿದ್ವಿ. ಆದರೆ ರಮೇಶ ಮಾತಾಡಿರೋದು ಈಗಷ್ಟೇ ಗೊತ್ತಾಯ್ತು. ನಮಗೂ ಪೂರ್ಣ ಮಾಹಿತಿ ಇಲ್ಲ. ಈ ಸಂಬಂಧ ಕಾನೂನು ಕ್ರಮಕ್ಕೆ ಮುಂದಾಗಲಿದ್ದೇವೆ ಎಂದು ಪಂಚಾಯತ್ ಸದಸ್ಯರು ಹೇಳಿದ್ದಾರೆ.

ಈ ಕುರಿತು ಸಂತ್ರಸ್ತೆ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದು, ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಿದ್ದಾಳೆ. ತನಿಖೆಯ ಬಳಿಕ ಘಟನೆಯ ಸತ್ಯಾಸತ್ಯತೆ ಹೊರಬೀಳಲಿದೆ.

About vijay_shankar

Check Also

ಅಮೀನಗಡ  ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಶಿವಾನಂದ ಕಟ್ಟಿಮನಿ ಅವರಿಗೆ ಸದ್ಭಾವನ ರಾಜ್ಯ ಪ್ರಶಸ್ತಿ ಪ್ರಯುಕ್ತ ಅಭಿನಂದನ ಕಾರ್ಯಕ್ರಮ

ಅಮೀನಗಡ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಶಿವಾನಂದ ಕಟ್ಟಿಮನಿ ಅವರಿಗೆ ಸದ್ಭಾವನ ರಾಜ್ಯ ಪ್ರಶಸ್ತಿ ಪ್ರಯುಕ್ತ ಅಭಿನಂದನ ಕಾರ್ಯಕ್ರಮ

ಅಮೀನಗಡ : ಇಂದು ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಜ ಯುವ ಸಂಘಗಳ ಒಕ್ಕೂಟ ವಿಜಯಪುರ ಹಾಗೂ ಮುದ್ದೇಬಿಹಾಳ ಘಟಕದಿಂದ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.