ಬಾಗಲಕೋಟೆ:
ಇಂದು ನವನಗರದ ಪೊಲೀಸ್ ಕವಾಯತು ಮೈದಾನದ ಕಛೇರಿಯಲ್ಲಿ ಕುರಿಗಾಯಿಗಳಿಗೆ ವಿಶೇಷ ಬಂದೂಕು ತರಬೇತಿ ಶಿಬಿರದ ಉದ್ಘಾಟನೆಯನ್ನು ಜಿಲ್ಲಾ ಅಧಿಕಾರಿ ಶ್ರೀಮತಿ ಕೆ,ಎಂ ಜಾನಕಿ ಅವರು ಉದ್ಘಾಟನೆ ಮಾಡಿ ಮಾತನಾಡಿದ ಅವರು ಇಂದು ಗ್ರಾಮೀಣ ಪ್ರದೇಶಗಳಲ್ಲಿ ಅಲ್ಲಲ್ಲಿ ಕುರಿ,ಮೆಕೆ,ಕಳ್ಳತನ ಪ್ರಕರಣಗಳು ಕಂಡುಬರುತ್ತಿವೆ ನಿಮ್ಮ ಆತ್ಮ ರಕ್ಷಣೆಗಾಗಿ ಸರಕಾರ ತಮಗೂ ಕೂಡ ಈ ವಿಷೇಶವಾಗಿ ಬಂದೂಕು ತರಬೇತಿ ನೀಡಲಾಗುತ್ತಿದೆ,ತಾವು ಕೂಡ ಈ ಶಿಬಿರದ ತರಬೇತಿ ಪಡೆದು ಇದರ ಸದುಪಯೋಗ ಪಡೆಯಬೇಕೆಂದು ತಿಳಿಸಿದರು

.ಜಿಲ್ಲಾ ಅಧಿಕಾರಿ ಕೆಎಂ ಜಾನಕಿ ಅವರಿಗೆ ಪುಷ್ಪಗುಚ್ಚ ಕೊಟ್ಟು ಸ್ವಾಗತಿಸಿದ ಎಸ್,ಪಿ, ಅಮರನಾಥ ರೆಡ್ಡಿ .
ಜಿಲ್ಲಾ ಅಧಿಕಾರಿಗೆ ಸ್ವಾಗತ ನೀಡಿ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಅವರು ಕೂಡ ಕುರಿಗಾಯಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ತಮಗಾಗಿ ಈ ವಿಶೇಷ ತರಬೇತಿಯ ಸದುಪಯೋಗವನ್ನು ಪಡೆದು ಸಾಮಾಜಿಕ ರಂಗದಲ್ಲಿ ತಮ್ಮ ಆತ್ಮ ರಕ್ಷಣೆ ಹಾಗೂ ಶಾಂತಿ ಕಾಪಾಡಬೇಕು ಎಲ್ಲರೂ ತಪ್ಪದೆ ಕಡ್ಡಾಯವಾಗಿ ಈ ಶಿಬಿರದಲ್ಲಿ ಪಾಲ್ಗೊಂಡು ಸಮಯಕ್ಕೆ ಸರಿಯಾಗಿ ಹಾಜರಾಗಬೇಕು ಅಲ್ಲದೆ ಇಲ್ಲಿ ಶಿಸ್ತನ್ನು ಕಾಪಾಡಬೇಕು ಸರಕಾರ ತಮ್ಮ ರಕ್ಷಣೆ ಹಾಗೂ ಕುರಿಗಳನ್ನು ಕಳ್ಳ ಕಾಕರಿಂದ ಕೃರ ಮೃಗಗಳಿಂದ ರಕ್ಷಣೆ ಪಡೆಯಲು ಈ ತರಬೇತಿಯನ್ನು ಸದುಪಯೋಗ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಸಿಇಓ ಶಶಿಧರ್ ಕುರೇರ ಡಿವೈಎಸ್,ಪಿ ಪ್ರಭು ಪಾಟೀಲ ಮತ್ತಿತರರು ಉಪಸ್ಥಿತಿ ಇದ್ದರು.