Breaking News

ಬಾಗಲಕೋಟೆ ನಗರದಲ್ಲಿ ಮಹಾ ಮಾನವತಾವಾದಿ ಡಾ: ಬಿ ಆರ್ ಅಂಬೇಡ್ಕರ್ ಅವರ ೧೩೦ನೇ ಜಯಂತೋತ್ಸವ

ಬಾಗಲಕೋಟೆ : ಬಾಗಲಕೋಟೆ ನಗರದಲ್ಲಿ ದಲಿತ ಸಮಾಜದ ವತಿಯಿಂದ ಸಂವಿಧಾನ ಶಿಲ್ಪಿ ಡಾ ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯನ್ನು ಆಚರಣೆ ಮಾಡಿದರು, ಬಾಗಲಕೋಟೆಯ ವಾಂಬೆ ಕಾಲೂನಿ ನಗರದ ಗಣೇಶ ಲಘಳಿ ಹಾಗೂ ಬಸವರಾಜ ನೀಲನಾಯಕ ಅವರ ನೇತೃತ್ವದಲ್ಲಿ ಹಾಗೂ ಯುವಕರು ಸೇರಿ ಸಂಘಟನೆ ಹಾಗೂ ಬಿಜೆಪಿ ಕಾರ್ಯಕರ್ತರು ಇಂದು

ಬಿ.ಆರ್.ಅಂಬೇಡ್ಕರ್ ಅವರ
ಜನಿಸಿದ ದಿನ. ಅವರು 1891 ಏಪ್ರಿಲ್ 14 ರಂದು ಜನಿಸಿ ಸಂವಿಧಾನದ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿದರು, ಸಮಾಜದಲ್ಲಿ ಸ್ವಾತಂತ್ರ್ಯ, ಸಮಾನತೆ ಮತ್ತು ಸೋದರತ್ವ ತತ್ವಗಳ ಆಧಾರದ ಮೇಲೆ ಶೋಷಿತ ಸಮುದಾಯಗಳ ಪರವಾಗಿ ಸತತವಾಗಿ ಹೋರಾಡಿದರು. ಇಂದು ಅವರ ಜನ್ಮದಿನ ಈ ಸಂದರ್ಭದಲ್ಲಿ ಅಂಬೇಡ್ಕರ್ ಅವರು ಕೆಲವು ಮಹತ್ವದ ನುಡಿ ಮುತ್ತುಗಳನ್ನು ಸ್ಮರಿಸಿಕೊಳ್ಳೋಣ ಎಂದರು.

ಧರ್ಮದಲ್ಲಿ ಭಕ್ತಿಯು ಆತ್ಮಕ್ಕೆ ಮುಕ್ತಿ ಸಿಗುವ ಮಾರ್ಗವಾಗಿರಬಹುದು. ಆದರೆ ರಾಜಕೀಯದಲ್ಲಿನ ಭಕ್ತಿ ಅಥವಾ ವ್ಯಕ್ತಿ ಆರಾಧನೆ ಮುಂದೆ ಸರ್ವಾಧಿಕಾರಕ್ಕೆ ದಾರಿ ಮಾಡಿಕೊಡುತ್ತದೆ. ಇಂದು ಭಾರತೀಯರು ಎರಡು ವಿಭಿನ್ನ ಸಿದ್ಧಾಂತಗಳಿಂದ ಆಳಲ್ಪಡುತ್ತಿದ್ದಾರೆ. ಒಂದು ಸಂವಿಧಾನದ ಪ್ರಸ್ತಾವನೆಯಲ್ಲಿ ಅವರ ರಾಜಕೀಯ ಆದರ್ಶವು ಸ್ವಾತಂತ್ರ್ಯ, ಸಮಾನತೆ ಮತ್ತು ಸೋದರತ್ವದ ಜೀವನವನ್ನು ದೃಢಪಡಿಸುತ್ತದೆ. ಇನ್ನೊಂದು ಅವರ ಧರ್ಮದಲ್ಲಿ ಅಡಕವಾಗಿರುವ ಸಾಮಾಜಿಕ ವಿಚಾರವು ಅವರನ್ನು ನಿರಾಕರಿಸುತ್ತದೆ.

ರಾಜಕೀಯ ಪ್ರಜಾಪ್ರಭುತ್ವಕ್ಕೆ ಸಾಮಾಜಿಕ ಪ್ರಜಾಪ್ರಭುತ್ವದ ಬುನಾದಿ ಇಲ್ಲದಿದ್ದರೆ ಅದು ಧೀರ್ಘಕಾಲ ಬಾಳುವುದಿಲ್ಲ. ಸಾಮಾಜಿಕ ಪ್ರಜಾಪ್ರಭುತ್ವ ಎಂದರೇನು? ಜೀವನ ವಿಧಾನವು ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಗುರುತಿಸುವ ಜೀವನದ ಮಾರ್ಗವಾಗಿದೆ. ಪ್ರಜಾಪ್ರಭುತ್ವ ಕೇವಲ ಒಂದು ಸರ್ಕಾರದ ರೂಪವಲ್ಲ. ಇದು ಪ್ರಾಥಮಿಕವಾಗಿ ಸಂಯೋಜಿತ ಜೀವನ, ಸಂಯೋಜಿತ ಸಂವಹನ ಅನುಭವದ ವಿಧಾನವಾಗಿದೆ. ಇದು ಮುಖ್ಯವಾಗಿ ಸಹ ಗೌರವದ ವರ್ತನೆ ಮತ್ತು ಸಹ ವ್ಯಕ್ತಿ ಕಡೆಗೆ ತೋರುವ ಗೌರವವನ್ನು ಹೊಂದಿದೆ.

ರಾಜಕೀಯ ಸರ್ವಾಧಿಕಾರವು ಸಾಮಾಜಿಕ ಸರ್ವಾಧಿಕಾರಕ್ಕೆ ಹೋಲಿಸಿದಲ್ಲಿ ಅದು ಏನೂ ಅಲ್ಲ ಮತ್ತು ಸಮಾಜವನ್ನು ವಿರೋಧಿಸುವ ಸುಧಾರಣಾವಾದಿ ಸರ್ಕಾರವನ್ನು ವಿರೋಧಿಸುವ ರಾಜಕಾರಣಿಗಿಂತ ಹೆಚ್ಚು ಧೈರ್ಯಶಾಲಿಯಾಗಿರುತ್ತಾನೆ .” ಎಲ್ಲಿಯವರೆಗೆ ನಿಮಗೆ ಸಾಮಾಜಿಕ ಸ್ವಾತಂತ್ರ ಸಿಗುವುದಿಲ್ಲವೋ ಅಲ್ಲಿಯವರೆಗೆ ಕಾನೂನಿನ ಮೂಲಕ ನೀಡಿರುವ ಎಲ್ಲ ಸ್ವಾತಂತ್ರ್ಯ ನಿಮಗೆ ದೊರಕಲು ಸಾಧ್ಯವಿಲ್ಲ.

ದಲಿತ ಸಮಾಜದಿಂದ ಸನ್ಮನ ರಾಜ್ಯ IFSMN ಸಂಸ್ಥಯ ರಾಜ್ಯ ಉಪಾಧ್ಯಕ್ಷ ಶ್ರೀ ಡಿ,ಬಿ,ವಿಜಯಶಂಕರ ಮತ್ತು ಬಾಗಲಕೋಟ ಜಿಲ್ಲಾ IFSMN ಸಂಸ್ಥಯ ಕಾರ್ಯದರ್ಶಿ ಹಾಜೀಮಸ್ತಾನ್ ಬದಾಮಿ ಅವರಿಗೆ ಸನ್ಮಾನ

ಒಬ್ಬ ಮಹಾನ್ ವ್ಯಕ್ತಿ ಒಬ್ಬ ಶ್ರೇಷ್ಠ ವ್ಯಕ್ತಿಯಿಂದ ಭಿನ್ನವಾಗಿರುತ್ತಾನೆ ಏಕೆಂದರೆ, ಅವನು ಸಮಾಜದ ಸೇವಕನಾಗಲು ಸಿದ್ಧನಾಗಿರುತ್ತಾನೆ” ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲು ಸಾಧ್ಯವಿಲ್ಲ, ಎಂದು ರಾಜ್ಯ IFSMN ಸಂಸ್ಥಯ ರಾಜ್ಯ ಉಪಾಧ್ಯಕ್ಷ ಶ್ರೀ ಡಿ,ಬಿ,ವಿಜಯಶಂಕರ ಹೇಳಿದರು. ಈ ಸಂದರ್ಬದಲ್ಲಿ, ಗಣೇಶ್ ಲಗಳಿ. ಶ್ರೀಕಾಂತ್ ಚಲವಾದಿ ಛಲವಾದಿ. ಬಸುರಾಜ್ ನೀಲನಾಯಕ. ಹಾಜೀಮಸ್ತಾನ್ ಬದಾಮಿ, ಪವಾಡೆಪ್ಪ ಚಲವಾದಿ. ದಯಾನಂದ ಚಲವಾದಿ. ಬಿಎಲ್ ಬಜಂತ್ರಿ. ಮಲ್ಲಪ್ಪ ಸೂಳಿಕೇರಿ .ಪ್ರವೀಣ್ ಬಡಿಗೇರ್. ಹನುಮಂತ ಸಂಕಣ್ಣವರ್. ಮಲ್ಲೇಶ್ ತಿಮ್ಮಣ್ಣವರ್. ಕುಮಾರ್. ಪರಶುರಾಮ್. ಸಂತೋಷ್ ಚೆಲುವಾದಿ .ರಾಜು ಕೆರೂರು . ಆಕಾಶ್ ಸುರುಗುಂಪೆ. ಬಸುರಾಜ್ ದೊಡ್ಡಮನಿ. ಆನಂದ್ ನಾಯಕ್. ಅಜಯ್ ಭಜಂತ್ರಿ. ಶ್ರೀಶೈಲ್ ತಿಮ್ಮಣ್ಣವರ್ ಇನ್ನು ಅನೇಕ ಯುವಕರು ಉಪಸ್ಥಿತಿ ಇದ್ದರು.

About vijay_shankar

Check Also

ವಡಗೇರಿ ಗ್ರಾಮದ ನಂದೀಶ ಹನಮಂತಪ್ಪ ನೆರೆಣ್ಣವರ ರಾಜ್ಯಕ್ಕೆ ೮ನೇ ರ‍್ಯಾಂಕ್

ಇಲಕಲ್ಲ ತಾಲೂಕಿನ ವಡಗೇರಿ ಗ್ರಾಮದ ಕುಮಾರ ನಂದೀಶ ಹನಮಂತಪ್ಪ ನರೆಣ್ಣನವರ, ಇವರು BSc ಯಲ್ಲಿ ರಾಜ್ಯಕ್ಕೆ ೮ನೇ ರ‍್ಯಾಂಕ್ ಬಂದಿದ್ದಾರೆ. …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.