


ಕಾರ್ಯಕ್ರಮದ ಉದ್ಘಾಟನೆ ನೇರವೇರಿಸಿದ ತಹಶಿಲ್ದಾರ ಶ್ರೀ ಬಸಲಿಂಗಪ್ಪ ನೈಕೋಡಿ ಹಾಗೂ ಪೂಜ್ಯರು, ಶಾಸಕರು,ಗಣ್ಯರು ಭಾರತ ಮಾತೆ ಭಾವಚಿತ್ರಕ್ಕೆ ಹೂವುಗಳನ್ನು ಹಾಕಿ ಚಾಲನೆ ನೀಡಿದರು.

ಅಮೀನಗಡ: ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮದಲ್ಲಿ ಕಾಳಿಕಾದೇವಿ ಕಲ್ಯಾಣ ಮಂಟಪದಲ್ಲಿ ಇಂದು ೭೫ ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಹಾಗೂ ಕರೋನಾ ವಾರಿಯರಗಳಿಗೆ ಅಭಿನಂದನೆ ಹಾಗೂ ಪ್ರತಿಭಾ ಪುರಸ್ಕಾರ ಸನ್ಮಾನ ಸಮಾರಂಭ ನೆಡೆಯಿತು.ಈ

ಕರೋನಾ ಒಂದು/ ಎರಡನೇ ಅಲೆಯ ಸಂದ ರ್ಭದಲ್ಲಿ, ತಮ್ಮ ಪ್ರಾಣದ ಹಂಗು ತೋರೆದು ಮನೆ ಮನೆಗೆ ತೆರಳಿ ಕರೋನಾ ಮುಂಜಾಗ್ರತಾ ಕ್ರಮಗಳನ್ನು ತಿಳಿಸಿ ಹೇಳಿ ಕರೋನಾ ಲಸಿಕೆ ಹಾಕಿಸಿಕೊಳ್ಳಲು ಮನವರಿಕೆ ಮಾಡಿ ಈ ಸಮಾಜದ ಆರೋಗ್ಯ ಹಾಗೂ ನಾಗರಿಕರ ಪ್ರಾಣ ರಕ್ಷಣೆ ಮಾಡಿದ ಆಶಾ ಕಾರ್ಯಕರ್ತೆಯರ ಪ್ರಾಮಾಣಿಕ ಸೇವೆ ಗುರುತಿಸಿ ವೀರ ಸಾವರ್ಕರ್ ಯುವಸೇನೆ ಯಿಂದ ಸನ್ಮಾನ ಮಾಡಲಾಯಿತು.

ಕರೋನಾ ಮೂರನೆ ಅಲೆ ಈಗ ಮತ್ತೆ ಶುರುವಾಯಿತು ದೇಶದಲ್ಲಿ ಅಲ್ಲಲ್ಲಿ ಕೆಲವು ಹೆಚ್ಚು ಹೆಚ್ವು ಪ್ರಕರಣಗಳು ಕಂಡುಬರುತ್ತಿವೆ. ಈ ನಿಟ್ಟಿನಲ್ಲಿ ಗ್ರಾಮದಲ್ಲಿ ಸ್ವಚ್ವತೆ ಹಾಗೂ ಉತ್ತಮ ಆರೋಗ್ಯ ,ಮಾರ್ಗದರ್ಶವನ್ನು ನೀಡುವ ವೈಧ್ಯರು ಇವರೆಲ್ಲರನ್ನು ಗುರುತಿಸಿ ಇಂದು ಅರ್ಥಪೂರ್ಣ ಕಾರ್ಯಕ್ರಮ ಮಾಡಬೇಕೆಂದು ವೀರ ಸಾವರ್ಕರ್ ಯುವ ಸೇನೆ ಸಂಚಾಲಕ ನಾಗೇಶ ಗಂಜಿಹಾಳ ಹಾಗೂ ಅವರ ತಂಡ ತಿರ್ಮಾನಿಸಿ ಸಾವಿರಾರು ನೋಟ ಬುಕ್ ಬುಕ್ಕುಗಳನ್ನು ಬಡ ವಿಧ್ಯಾರ್ಥಿಗಳಿಗೆ ವಿತರಣೆ ಮಾಡಿ ಸೈ ಎನ್ನಿಸಿಕೊಂಡರು.

ಇಂದಿನ ಈ ಕಾರ್ಯಕ್ರಮದಲ್ಲಿ ಶಾಸಕರು,ತಾಲೂಕ ದಂಡಾಧಿಕಾರಿಗಳು,ಪೋಲಿಸ್ ಇಲಾಖೆ,ಆರೋಗ್ಯ ಇಲಾಖೆ,ಗ್ರಾಮ ಪಂಚಾಯತ, ಗೃಹ ರಕ್ಷಕದಳ,ಕಂದಾಯ ಇಲಾಖೆ,ಗ್ರಾಮ ಲೆಕ್ಕಾಧಿಕಾರಿ,ಆಶಾ ಕಾರ್ಯಕರ್ತೆ, ಅಂಗನವಾಡಿ ಹಾಗೂ ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ಸನ್ಮಾನ ಮಾಡಿ ಅಭಿನಂದನಾ ಪ್ರಮಾನ ಪತ್ರ ನೀಡಿ ಗೌರವಿಸಿತು, ಬಡ ಮಕ್ಕಳಿಗೆ ಉಚಿತ ನೋಟ ಪುಸ್ತಕ ವಿತರಿಸಿಸಲಾಯಿತು. ಈ ಸಭೆ ಉದ್ದೇಶಿಸಿ ಮಾತನಾಡಿದ ಶಾಸಕ ದೊಡ್ಡನಗೌಡ ಪಾಟೀಲ ಅವರು ಇದೊಂದು ಬಹಳ ಅರ್ಥಪೂರ್ಣ ಕಾರ್ಯಕ್ರಮ ದೇಶದ “ಹರ್ ಘರ್ ತಿರಂಗಾ ” ಅಭಿಯಾನಕ್ಕೆ ಕರೆ ಕೊಟ್ಟ ದೇಶದ ಪ್ರದಾನಿ ಸನ್ಮಾನ್ಯ ನರೇಂದ್ರ ಮೋದಿ ಅವರು ಕೆಂಪು ಕೋಟೆಯ ಮೇಲೆ ನೊಂತು ಕೊಟ್ಟ ಈ ಕರೆ ಇವತ್ತು ಇಡಿ ದೇಶದ ಪ್ರತಿಯೊಬ್ಬ ನಾಗರಿಕರು ಮನೆ ಮೇಲೆ ರಾಷ್ಟ್ರಧ್ವಜ ಹಾರಿಸುತ್ತಿದ್ದಾರೆ.ಇದು ನಾಳೆ ಇಡೀ ವಿಶ್ವ ಸುದ್ದಿ ಆಗಲಿದೆ . ಇಡಿ ಜಗತ್ತಿಗೆ ದೇಶಾಭಿಮಾನ ಎಂದರೆ ಏನು ಎಂಬುದನ್ನು ಜಗತ್ತಿಗೆ ಮೋದಿ ಅವರು ತೋರಿಸಿ ಕೊಟ್ಟಿದ್ದಾರೆ.

ಆದರೆ ವಿರೋಧ ಪಕ್ಷದ ನಾಯಕರು ,ಮೋದಿ ಅವರ ಒಳ್ಳೆಯ ಕಾರ್ಯಕ್ಕೆ ಅಪಪ್ರಚಾರ ಮಾಡಿ ಕರೋನ ಸಂದರ್ಭದಲ್ಲಿ ಲಸಿಕೆಯನ್ನು ಕಂಡು ಹಿಡಿದಾಗ ಅದು ಮೋದಿ ಲಸಿಕೆ,ಅದನ್ನು ಹಾಕಿಸಿಕೊಂಡರೆ ಮಕ್ಕಳು ಆಗಲ್ಲ ,ಮಸ್ಲಿಮರ ಮತ ಓಲೈಸಲು ಅನೇಕ ಆರೋಪ ಮಾಡಿ ಎಷ್ಟೊ ಬಡ,ಯುವಕರ,ಸಾವಿಗೆ ಕಾರಣರಾದರು. ನಂತರ ೨ ನೇ ಅಲೆಗೆ ಇಡೀ ವಿಶ್ವದಲ್ಲಿ ಭಾರತದ ಲಸಿಕೆಗೆ ಭಾರಿ ಬೇಡಿಕೆ ಬಂದು ದೇಶದ ಜನತೆಗೆ ಲಸಿಕೆ ಪೂರೈಸಲು ವಿಳಂಬ ಆಯಿತು,ಆರೋಪ ಮಾಡಿದವರೇ ಸರದಿ ನಿಂತು ಲಸಿಕೆ ಹಾಕಿಸಿಕೊಂಡರು. ಇದು ನಮ್ಮ ದುರಂತ.ಸನ್ಮಾನ್ಯ ನರೇಂದ್ರ ಮೋದಿಜಿ ಅವರು ಈ ದೇಶವನ್ನು ಬಲಿಷ್ಟ ರಾಷ್ಟ್ರ ವನ್ನಾಗಿ,ಮಾಡಿದ್ದಾರೆ .

ವಿಶ್ವಮಟ್ಟದಲ್ಲಿ ಭಾರತದ ಹಿರಿಮೆ ದೊಡ್ಡದಿದೆ,ಅಪಪ್ರಚಾರ ಬಿಟ್ಟು ದೇಶದ ಅಭಿವೃದ್ಧಿಗೆ ಹಾಗೂ ಉತ್ತಮ ಶಿಕ್ಷಣದ ಮೂಲಕ ಪ್ರತಿಯೊಬ್ಬ ಯುವಕರು ಈ ದೇಶದ ಆಸ್ತಿ ಯಾಗಿ ಬೆಳಯಬೇಕು ಎಂದರು. ನಂತರ ಮಾತನಾಡಿದ ಮುಖ್ಯ ಭಾಷಣಕಾರ ನಂದು ಗಾಯಕವಾಡ ಅವರು ದೇಶದ ಸ್ವತಂತ್ರಕ್ಕಾಗಿ ಬಲಿದಾನ ಮಾಡಿದ ಅನೇಕ ವೀರರನ್ನು ಅವರ ಹೆತ್ತ ತಾಯಿಯವರನ್ನು ಅವರ ಹುತ್ಮಾರ ಸ್ಮರಣೆ ಹಾಗೂ ಅವರ ಜೀವನದ ವಾಸ್ತವಿಕ ಸತ್ಯವನ್ನು ,ಅವರ ದೇಶಪ್ರೇಮವನ್ನು ಅವರ ಬಲಿದಾನವನ್ನು ಎತ್ತಿ ತೋರಿಸಿದರು.

ಇಂತಹ ದೇಶ ಪ್ರೇಮ,ಇಂತಹ ದೇಶ ಭಕ್ತಿ ಇರಬೇಕು ಎಂದರು. ಈ ಸಮಾರಂಭದಲ್ಲಿ ಶ್ರೀ ವಿರೇಶ ಉಂಡೋಡಿ,ಮಾಜಿ, ಜಿ,ಪ,ಸದಸ್ಯರು, ಹಾಗೂ ಗ್ರಾಮ ಪಂ,ಅಧ್ಯಕ್ಷರಾದ ಶ್ರೀಮತಿ ಸರೋಜಾ ಕ ವಡ್ಡರ, ಉಪಾಧ್ಯಕ್ಷರಾದ ಶ್ರೀಮತಿ ಸವಿತಾ ಅ ಘಂಟಿ, ಹುನಗುಂದ ಪು,ಸ,ಸದಸ್ಯರಾದ ಶ್ರೀ ಪ್ರವೀಣ ಹಳಪೇಟಿ, ಶ್ರೀ ಕಾಶಿನಾಥ ಕಮ್ಮಾರ, ಶ್ರೀ ನರಪತ ರಾಜಪುರೋಹಿತ ಶ್ರೀ ಷಣ್ಮುಖ ಮಡಿವಾಳರ, ಶ್ರೀ ನಾಗೇಶ ಗಂಜಿಹಾಳ, ಶ್ರೀ ಗ್ಯಾನಪ್ಪ ಗೋನಾಳ,ಆನಂದ ಮೊಕಾಶಿ,ರಮೇಶ ಮಡಿವಾಳರ,ನೀಲಪ್ಪ ಪೂಜಾರಿ, ಮೇಟಿ,ಶ್ರೀ ಮುರಳಿ ಮಾಂಡ್ರೆ, ಯಮನೂರ ಹುಲ್ಯಾಳ, ಹನಮಂತ ಹಿರೇಮನಿ, ಹಾಗೂ ವೀರ ಸಾವರ್ಕರ್ ಯುವ ಸೇನೆಯ ಎಲ್ಲಾ ಸದಸ್ಯರು ಉಪಸ್ಥಿತಿ ಇದ್ದರು.