

ತಮಿಳುನಾಡು : ಹಿರಿಯ ಸೇನಾಧಿಕಾರಿಗಳು ಪ್ರಯಾಣಿಸುತ್ತಿದ್ದ ಭಾರತೀಯ ಸೇನೆಯ ಹೆಲಿಕಾಪ್ಟರ್ ತಮಿಳುನಾಡಿನ ಊಟಿ ಬಳಿ ಪತನಗೊಂಡಿದೆ. ಹೆಲಿಕಾಪ್ಟರ್ ನಲ್ಲಿದ್ದ 7 ಜನರು ಸಾವಿಗೀಡಾಗಿದ್ದು, ಮೂವರನ್ನು ರಕ್ಷಿಸಲಾಗಿದೆ.
ತಮಿಳುನಾಡಿನ ಊಟಿ ಬಳಿಯ ಕುನೂರ್ ಬಳಿ ಈ ದುರಂತ ಸಂಭವಿಸಿದೆ. ಸೇನಾ ಹೆಲಿಕಾಪ್ಟರ್ ನಲ್ಲಿ ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮಧುಲಿಕಾ ಸೇರಿದಂತೆ 14 ಜನ ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.

ಈಗಾಗಲೇ ಮೂವರನ್ನು ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ. ಹೆಲಿಕಾಪ್ಟರ್ ನಲ್ಲಿ ರಕ್ಷಣಾಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಕೂಡ ಇದ್ದರು ಎಂಬ ಮಾಹಿತಿ ಇದೆ. ಆದರೆ ಈ ಬಗ್ಗೆ ಸೇನಾ ಮೂಲಗಳಿಂದಾಗಲಿ ಅಥವಾ ಕೇಂದ್ರ ಸರ್ಕಾರದಿಂದಾಗಲಿ ಅಧಿಕೃತವಾಗಿ ಮಾಹಿತಿ ಲಭ್ಯವಾಗಿಲಿರಲಿಲ್ಲ

ಇದೀಗ ಬಂದ ಮಾಹಿತಿ ಪ್ರಕಾರ ಬಿಪಿನ್ ರಾವತ್ ಅವರು ಹೆಲಿಕಾಪ್ಟರ್ ದುರಂತದಲ್ಲಿ ಮರಣ ಹೊಂದಿರುವ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿದೆ,ಬಾರತದ ರಕ್ಷಣಾ ವಿಚಾರದಲ್ಲಿ ನೇರೆಯ ಪಾಕಿಸ್ತಾನ,ಚೀನಾ,ದೇಶಗಳಿಗೆ ಸಿಂಹಸೊಪ್ನ ವಾಗಿದ್ದರು, ಅವರ ರಚನಾತ್ಮಕ ಚಕ್ರ ವ್ಯೂಹದಲ್ಲಿ ನಮ್ಮ ದೇಶದೊಳಗೆ ಭಯೋತ್ಪಾದನೆ ಚಟುವಟಿಕೆ ನಡೆಯದಂತೆ ಗಡಿಯೊಳಗೆ ಹದ್ದಿನ ಕಣ್ಣಿಟ್ಟು ದೇಶದ ಭದ್ರತೆ ಬಗ್ಗೆ ಅವರಿಗಿರುವ ದೇಶ ಭಕ್ತಿ ಎಂದು ಮರೆಯುವಂತಿಲ್ಲ ಅವರ ಸೇವೆ ಅಮರ,ಜೈ ಭಾರತ್ ಅವರ ಆತ್ಮಕ್ಕೆ ಆ ಭಗವಂತ ಶಾಂತಿ ನೀಡಲಿ,
