Breaking News

vijay_shankar

ಐಎಸ್‌ಐಎಸ್‌ ಉಗ್ರನ ಬಂಧನದ ಬಳಿಕ ನೊಯ್ಡಾದಲ್ಲಿ ತೀವ್ರಗೊಂಡ ಭದ್ರತಾ ತಪಾಸಣೆ

ನವದೆಹಲಿ: ಸ್ಫೋಟಕಗಳ ಸಹಿತ ಐಎಸ್‌ಐಎಸ್‌ ಉಗ್ರನೊಬ್ಬನನ್ನು ದೆಹಲಿಯಲ್ಲಿ ಬಂಧಿಸಿದ ಬಳಿಕ ಉತ್ತರ ಪ್ರದೇಶದ ನೊಯ್ಡಾದಲ್ಲಿ ಭದ್ರತಾ ತಪಾಸಣೆ ತೀವ್ರಗೊಳಿಸಲಾಗಿದೆ. ದೆಹಲಿಯಿಂದ ಬರುತ್ತಿರುವ ಮತ್ತು ಅಲ್ಲಿಗೆ ತೆರಳುತ್ತಿರುವ ಎಲ್ಲ ವಾಹನಗಳು, ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಗೌತಮ ಬುದ್ಧ ನಗರ ಜಿಲ್ಲೆಯಲ್ಲೂ ಕಟ್ಟೆಚ್ಚರ ಘೋಷಿಸಲಾಗಿದೆ ಎಂದು ನೊಯ್ಡಾ ಪೊಲೀಸ್ ಆಯುಕ್ತ ರಾಜೇಶ್ ಎಸ್ ಹೇಳಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಗಳು ಸಹ ದೆಹಲಿ ಗಡಿಯಲ್ಲಿ ಭದ್ರತಾ ಪರಿಶೀಲನೆ ನಡೆಸಿದ್ದಾರೆ. ಸುಧಾರಿತ ಸ್ಫೋಟಕಗಳನ್ನು ಹೊಂದಿದ್ದ ಐಎಸ್‌ ಶಂಕಿತ …

Read More »

ಅಮೀನಗಡ ಪೊಲೀಸ್ ಠಾಣೆ ಯಲ್ಲಿ ಪರಿಸರ ಸ್ನೇಹಿ ಗಣಪತಿ / ವಿಸರ್ಜನೆ,

ಅಮೀನಗಡ: ಇಂದು ಅಮೀನಗಡ ನಗರದ ಪೊಲೀಸ್ ಠಾಣೆಯಲ್ಲಿ ಕೋವಿಡ್ ೧೯ ಸರಕಾರದ ನಿಯಮನುಸಾರ ಪರಿಸರ ಸ್ನೇಹಿ ಗಣಪತಿಯನ್ನು ತಂದು ಬೆಳಗೆ ಪ್ರತಿಷ್ಟಾಪನೆ ಮಾಡಿ ಇಂದು ಸಾಯಂಕಾಲ ೫:೩೦,ಸುಮಾರಿಗೆ ಸರಳವಾಗಿ ವಿಸರ್ಜನೆ ಮಾಡಲಾಯಿತು, ಪ್ರತಿ ವರ್ಷ ಠಾಣೆಯಲ್ಲಿ ಅದ್ದೂರಿಯಾಗಿ ಹಬ್ಬ ಆಚರಿಸಲಾಗುತ್ತಿತ್ತು, ದೇಶದಲ್ಲಿ ಕರೋನ ಹಾವಳಿ ಹೆಚ್ಚುತ್ತಿರುವ ಕಾರಣ ಸರಕಾರ ಸಾರ್ವಜನಿಕ ಹಾಗೂ ಇಲಾಖೆಯಲ್ಲಿ ಗಣಪತಿ ಪ್ರತಿಷ್ಟಾಪನೆ ಮಾಡುವುದನ್ನು ಒಂದು ಇಡಲು ಮಾತ್ರ ಅವಕಾಶ ಕಲ್ಪಿಸಿದ ಕಾರಣ ಈ ವರ್ಷ ಸರಕಾರದ …

Read More »

ಕೊರೊನಾ ಬಳಿಕ ಸಾವಿರಾರು ಕೋಟಿ ರೂಪಾಯಿಗೆ ಏರಿಕೆಯಾಗಿದೆ ಈ ಕ್ಷೇತ್ರದ ವಹಿವಾಟು

ಕೊರೊನಾ ಸೋಂಕು ನಿಯಂತ್ರಣಕ್ಕೆ ಮಾಸ್ಕ್ ಹಾಗೂ ಸ್ಯಾನಿಟೈಜರ್ ಬಳಕೆ ಕಡ್ಡಾಯವಾಗಿದೆ. ಸ್ಯಾನಿಟೈಜರ್ ಬಳಸುವಂತೆ ವೈದ್ಯರು ಸಲಹೆ ನೀಡ್ತಿದ್ದಾರೆ. ಇದ್ರಿಂದ ಸ್ಯಾನಿಟೈಜರ್ ಮಾರಾಟ ವೇಗವಾಗಿ ಹೆಚ್ಚಾಗಿದೆ. ದೇಶದಲ್ಲಿ ಸ್ಯಾನಿಟೈಜರ್ ಮಾರುಕಟ್ಟೆ ಶೇಕಡಾ 7ರಿಂದ 8 ಪಟ್ಟು ಹೆಚ್ಚಳವಾಗಿದೆ. ಮಹಾರಾಷ್ಟ್ರದ ಅಂಗಡಿಯೊಂದರಲ್ಲಿ 2017 ರಲ್ಲಿ 43,000 ರೂಪಾಯಿ ಮೌಲ್ಯದ ಸ್ಯಾನಿಟೈಜರ್ ಮಾರಾಟವಾಗಿತ್ತು 2018 ರಲ್ಲಿ 53,000 ರೂಪಾಯಿ ಮೌಲ್ಯದ ಸ್ಯಾನಿಟೈಜರ್ ಮಾರಾಟವಾಗಿತ್ತು. 2019 ರಲ್ಲಿ ಜನರು 58,000 ರೂಪಾಯಿ ಮೌಲ್ಯದ ಸ್ಯಾನಿಟೈಜರ್ ಖರೀದಿಸಿದ್ದರು. …

Read More »

ಪ್ರವಾಹ ಪರಿಸ್ಥಿತಿ ವೀಕ್ಷಿಸಲು ಜಾರಕಿಹೊಳಿ ಕ್ಷೇತ್ರಕ್ಕೆ ಬರಲಿದ್ದಾರೆ ಡಿಕೆಶಿ

ಬೆಳಗಾವಿ, ಆಗಸ್ಟ್ 22: ಬೆಳಗಾವಿಯಲ್ಲಿ ಕೆಲವು ದಿನಗಳ ಹಿಂದೆ ಸುರಿದ ಭಾರೀ ಮಳೆಯಿಂದ ಅವಾಂತರ ಸೃಷ್ಟಿಯಾಗಿದ್ದು, ಕಷ್ಟ ನಷ್ಟಗಳು ಸಂಭವಿಸಿವೆ. ಈ ಕಾರಣಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ‌. ಶಿವಕುಮಾರ್ ಆಗಸ್ಟ್‌ 24ರಂದು ಬೆಳಗಾವಿ ಜಿಲ್ಲೆಯ ನೆರೆ ಪೀಡಿತ ಪ್ರದೇಶಗಳ ವೀಕ್ಷಣೆ ಮಾಡಲಿದ್ದಾರೆ. ಡಿಕೆಶಿ ಅವರು ಸಚಿವ ರಮೇಶ್ ಜಾರಕಿಹೊಳಿ ಅವರ ಕ್ಷೇತ್ರ ಗೋಕಾಕನ್ನೇ ಪ್ರವಾಹ ವೀಕ್ಷಣೆಗೆ ಆಯ್ದುಕೊಂಡಿದ್ದು ಕುತೂಹಲಕ್ಕೆ ಕಾರಣವಾಗಿದೆ. ಜಿಲ್ಲೆಯ ‌ಖಾನಾಪುರ, ರಾಮದುರ್ಗ, ಸವದತ್ತಿ ಹಾಗೂ ಚಿಕ್ಕೋಡಿ, ಅಥಣಿ …

Read More »

ಕೊಡಗು ಜಿಲ್ಲೆ ಮಳೆ ವಿವರ, ಹಾರಂಗಿ ಜಲಾಶಯ ನೀರಿನ ಮಟ್ಟ

ಮಡಿಕೇರಿ ಆ. 22: ಕೊಡಗು ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಸರಾಸರಿ ಮಳೆ 15.12 ಮಿ.ಮೀ ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 9.83 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗಿನ ಮಳೆ 1838.93 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 1910.77 ಮಿ.ಮೀ ಮಳೆಯಾಗಿತ್ತು. ಮಡಿಕೇರಿ ತಾಲ್ಲೂಕಿನಲ್ಲಿ ಇಂದಿನ ಸರಾಸರಿ ಮಳೆ 21.30 ಮಿ.ಮೀ. ಕಳೆದ ವರ್ಷ ಇದೇ ದಿನ 22.75 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 2591.33 …

Read More »

ಯಾವುದೇ ಟೈಂನಲ್ಲೂ ಇವರು ಮಾತ್ರ ಫುಲ್ ಅಲರ್ಟ್: ಬೆಳ್ಳಂಬೆಳಗ್ಗೆ ಗಡಿಯಲ್ಲಿ ಐವರು ಉಡೀಸ್

ನವದೆಹಲಿ: ಇಂದು ಮುಂಜಾನೆ ನಡೆದ ಮಹತ್ವದ ಕಾರ್ಯಾಚರಣೆಯಲ್ಲಿ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯ ಬಳಿ ಐವರು ನುಸುಳುಕೋರರನ್ನು ಬಿಎಸ್​ಎಫ್​ ಯೋಧರು ಗುಂಡು ಹೊಡೆದು ಹತ್ಯೆ ಮಾಡಿದ್ದಾರೆ. ಪಂಜಾಬ್​​ ಅಂತಾರಾಷ್ಟ್ರೀಯ ಗಡಿಯ ಬಳಿ ಇಂದು ಮುಂಜಾನೆ ಕೆಲವರು ಅನುಮಾನಾಸ್ಪದವಾಗಿ ಒಳ ನುಸುಳುತ್ತಿರುವುದುನ್ನು ನೋಡಿದ ಗಡಿ ಭದ್ರತಾ ಪಡೆಯ 103ನೇ ಬೆಟಾಲಿಯನ್​ ಯೋಧರು ಅವರನ್ನು ಹತ್ಯೆ ಮಾಡಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಯೋಧರು ಸುಮ್ಮನೆ ಫೈರಿಂಗ್ ಮಾಡಲಿಲ್ಲ. ಒಳನುಸುಳುತ್ತಿರುವವರನ್ನು ತಡೆಯಲು ಪ್ರಯತ್ನಿಸಿದರು. ಆದರೆ ಅವರೇ …

Read More »

ದುಬೈಗೆ ಹಾರುವ ಮುನ್ನ ‘ಎಂಗೇಜ್’ ಆದ ಆಲ್‌ರೌಂಡರ್ ವಿಜಯ್ ಶಂಕರ್

ಯುವ ಕ್ರಿಕೆಟಿಗ ವಿಜಯ್ ಶಂಕರ್ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದಾರೆ. ಈ ವಿಚಾರವನ್ನು ಸ್ವತಃ ವಿಜಯ್ ಶಂಕರ್ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಾಕುವ ಮೂಲಕ ಘೋಷಿಸಿದ್ದಾರೆ. ನಿಶ್ಚಿತಾರ್ಥದ ಫೋಟೋಗಳನ್ನು ಕೂಡ ಅವರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಭಾರತೀಯ ಕ್ರಿಕೆಟ್‌ ತಂಡದಲ್ಲಿ ಆಲ್‌ರೌಂಡರ್ ಆಗಿ ಹಲವು ಪಂದ್ಯಗಳಲ್ಲಿ ಕಣಕ್ಕಿಳಿದಿರುವ ವಿಜಯ್ ಶಂಕರ್ ಈ ಬಾರಿಯ ಐಪಿಎಲ್‌ನಲ್ಲೂ ಪಾಲ್ಗೊಳ್ಳಲಿದ್ದಾರೆ. ಐಪಿಎಲ್‌ನಲ್ಲಿ ಸನ್ ರೈಸರ್ಸ್ ತಂಡದ ಪರವಾಗಿ ವಿಜಯ್ ಶಂಕರ್ ಕಣಕ್ಕಿಳಿಯಲಿದ್ದು ದುಬೈಗೆ ಹಾರಲು ಸಜ್ಜಾಗಿದ್ದಾರೆ. ಶಂಕರ್ ತನ್ನ …

Read More »

ನಿಮ್ಮ ಬೆಳೆ ಮುಂದೆ ನಿಂತು ಫೋಟೋ ಕಳಿಸಿ ಪರಿಹಾರ ಪಡೆಯಿರಿ

ಬೆಂಗಳೂರು (ಆ.21): ರೈತರಿಗೆ ಸಮರ್ಪಕವಾಗಿ ಬೆಳೆ ಪರಿಹಾರ ತಲುಪಿಸುವ ಉದ್ದೇಶದಿಂದ ದೇಶದಲ್ಲಿ ಇದೇ ಮೊದಲ ಬಾರಿಗೆ ರೈತರಿಂದಲೇ ಕೃಷಿ ಬೆಳೆ ಸಮೀಕ್ಷೆ ಮಾಡುವ ಕಾರ್ಯ ಈಗಾಗಲೇ ಆರಂಭವಾಗಿದ್ದು, ಸೆ.24ರೊಳಗೆ ರೈತರು ತಾವು ಬೆಳೆದ ಬೆಳೆ ಮುಂದೆ ನಿಂತು ಮೊಬೈಲ್‌ನಲ್ಲಿ ಫೋಟೋ ತೆಗೆದು ರವಾನಿಸುವಂತೆ ಸರ್ಕಾರ ಮನವಿ ಮಾಡಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಈ ಮನವಿ ಮಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ, …

Read More »

ಜಲಸಂಪನ್ಮೂಲ ಇಲಾಖೆ ಸಾಧನೆಯ ಕಿರುಹೊತ್ತಿಗೆ ಜಲ ಯಜ್ಞ ಪುಸ್ತಕ ಬಿಡುಗಡೆ

ಜಲಸಂಪನ್ಮೂಲ ಇಲಾಖೆಯ ಒಂದು ವರ್ಷದ ಸಾಧನೆಯ ಕಿರುಹೊತ್ತಿಗೆ *ಜಲ ಯಜ್ಞ* ಪುಸ್ತಕವನ್ನು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ ಎಸ್ ಯಡಿಯೂರಪ್ಪ ಮತ್ತು ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳಿ‌ ಅವರು ಕೃಷ್ಣರಾಜಸಾಗರ ಜಲಾಶಯದ ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸಿ ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ಸಂಪುಟದ ಸಚಿವರು, ಸಂಸದರು, ಶಾಸಕರು‌ ‌ಮತ್ತು ಇತರೆ ಜನಪ್ರತಿನಿಧಿಗಳು, ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Read More »