ಕೆಲ ದಿನಗಳ ಹಿಂದಷ್ಟೇ ಸೋಂಕಿತರೇ ಕೋವಿಡ್ ಆಸ್ಪತ್ರೆಯ ವಾರ್ಡಿನ ಕಸಗೂಡಿಸಿದ ಬಗ್ಗೆ ಮಾಹಿತಿ ಬಯಲಾಗಿತ್ತು. ಇದೀಗ ಹಂದಿಗಳು ಆಸ್ಪತ್ರೆಯೊಳಗೆ ನುಗ್ಗಿ ಮೆಡಿಕಲ್ ತ್ಯಾಜ್ಯವನ್ನು ಚೆಲ್ಲಾಪಿಲ್ಲಿ ಮಾಡಿದ್ದು ಸೋಂಕಿತರ ಆಕ್ರೋಶಕ್ಕೆ ಕಾರಣವಾಗಿದೆ.ನಗರದ ಓಪೆಕ್ ನೆರವಿನ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಕೋವಿಡ್ ವಾರ್ಡಿನ ಅವ್ಯವಸ್ಥೆ ಮತ್ತೊಮ್ಮೆ ಬಯಲಾಗಿದೆ.
ಸೋಂಕಿತರಿಂದಲೇ ಅವ್ಯವಸ್ಥೆ ಬಯಲಿಗೆಳೆಯುವ ಪ್ರಯತ್ನ ಇದಾಗಿದೆ. ಕೋವಿಡ್ ವಾರ್ಡಿನಲ್ಲಿ ಶನಿವಾರ ರಾತ್ರಿ ಹಂದಿಗಳು ನುಗ್ಗಿ ವಿವಿಧ ರೀತಿಯ ತ್ಯಾಜ್ಯದ ಚೀಲಗಳನ್ನು ಕಿತ್ತಿ ತಿನ್ನುವ ವಿಡಿಯೋ ವೈರಲ್ ಆಗಿದೆ.
ಕೋವಿಡ್ ವಾರ್ಡಿನಲ್ಲಿ ಹಂದಿಗಳು ನುಗ್ಗಿರುವುದು ಅವ್ಯವಸ್ಥೆಗೆ ಸ್ಪಷ್ಟ ಉದಾಹರಣೆ.
ಈ ಬಗ್ಗೆ ಜಿಲ್ಲಾಡಳಿತ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ವಿಡಿಯೋ ವೈರಲ್ ಮಾಡುವ ಮೂಲಕ ಕೋವಿಡ್ ವಾರ್ಡಿನಲ್ಲಿರುವ ಸೋಂಕಿತರು ಒತ್ತಾಯಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಸೋಂಕಿತರೇ ಕೋವಿಡ್ ಆಸ್ಪತ್ರೆಯ ವಾರ್ಡಿನ ಕಸಗೂಡಿಸಿದ ಬಗ್ಗೆ ಮಾಹಿತಿ ಬಯಲಾಗಿತ್ತು. ಇದೀಗ ಹಂದಿಗಳು ಆಸ್ಪತ್ರೆಯೊಳಗೆ ನುಗ್ಗಿ ಮೆಡಿಕಲ್ ತ್ಯಾಜ್ಯವನ್ನು ಚೆಲ್ಲಾಪಿಲ್ಲಿ ಮಾಡಿದ್ದು ಸೋಂಕಿತರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News