ಬೈರೂತ್: ಲೆಬನಾನ್ ರಾಜಧಾನಿ ಬೈರೂತ್ ನಲ್ಲಿ ಮಂಗಳವಾರ ಭಾರೀ ಪ್ರಮಾಣದ ಅವಳಿ ಸ್ಫೋಟ ಸಂಭವಿಸಿದ್ದು. ಸ್ಫೋಟದ ತೀವ್ರತೆಗೆ ಅಕ್ಕಪಕ್ಕದ ಹಲವು ಕಟ್ಟಡಗಳು ಧ್ವಂಸಗೊಂಡಿದ್ದು, ಸಾವಿರಾರು ಕಟ್ಟಡಗಳು ಭಾರೀ ಹಾನಿಗೊಳಗಾಗಿದೆ. ಸ್ಫೋಟಕ್ಕೆ ನಿಖರ ಕಾರಣಗಳು ತಿಳಿದುಬಂದಿಲ್ಲ. ಪ್ರಾಥಮಿಕ ವರದಿಗಳ ಅನ್ವಯ 70 ಮಂದಿ ಬಲಿಯಾಗಿದ್ದು, ಸಾವಿರಾರು ಜನರು ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ. ಬಂದರು ಸಮೀಪದಲ್ಲೇ ನಡೆದ ಸ್ಫೋಟದಿಂದ ಎದ್ದ ಅಗ್ನಿ ಜ್ವಾರೆ ಮುಗಿಲೆತ್ತರಕ್ಕೆ ಏರಿದ ಮತ್ತು ತೀವ್ರತೆಯಿಂದ ಸಮುದ್ರ ನೀರು ನೂರಾರು ಮೀಟಲ್ …
Read More »ಆಹಾರ ಖಾತೆ ಸಚಿವರಿಂದ ಮತ್ತೊಂದು ಗುಡ್ ನ್ಯೂಸ್
ಚಿತ್ರದುರ್ಗ: ಕೇಂದ್ರ ಮತ್ತು ರಾಜ್ಯ ಸರ್ಕಾರದ ವತಿಯಿಂದ ವಿತರಿಸುತ್ತಿರುವ ಪಡಿತರವನ್ನು ಸರಿಯಾದ ಸಮಯಕ್ಕೆ ಜನರಿಗೆ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಆಹಾರ ಇಲಾಖೆ ಸಚಿವ ಕೆ. ಗೋಪಾಲಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಚಿತ್ರದುರ್ಗದಲ್ಲಿ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏಪ್ರಿಲ್ ನಿಂದ ಪಡಿತರವನ್ನು ನಿಗದಿತ ಸಮಯದಲ್ಲಿ ವಿತರಣೆ ಮಾಡುತ್ತಿರುವಂತೆಯೇ ನವೆಂಬರ್ ವರೆಗೂ ಪಡಿತರ ವಿತರಿಸಬೇಕು. ಆಗಸ್ಟ್ 11 ರಿಂದ ಪಡಿತರ ವಿತರಣೆಗೆ ಸಿದ್ಧತೆ ಕೈಗೊಳ್ಳಬೇಕು. …
Read More »ಮಿಲಿಟರಿ ಲ್ಯಾಬ್‌ನಲ್ಲಿ ಕೊರೋನಾ ತಯಾರಿಸಿದ್ದ ಡ್ರ್ಯಾಗನ್: ಚೀನಾ ಬಂಡವಾಳ ಬಯಲು!
ಬೀಜಿಂಗ್(ಆ.03): ಚೀನಾ ಆಡಳಿತದಲ್ಲಿರುವ ಹಾಂಗ್‌ಕಾಂಗ್‌ನಿಂದ ಓಡಿಹೋಗಿ ಅಮೆರಿಕಾ ತಲುಪಿರುವ ಹಾಂಗ್‌ಕಾಂಗ್ ಸ್ಕೂಲ್ ಆಫ್ ಹೆಲ್ತ್‌ನ ಹಿರಿಯ ವೈರಾಲಾಜಿಸ್ಟ್ ಡಾ. ಲೀ ಮೆಂಗ್ ಯಾನ್ ಚೀನಾ ಮಾರಕ ಕೊರೋನಾ ವೈರಸ್‌ನ್ನು ಇಲ್ಲಿನ ಮಿಲಿಟರಿ ಲ್ಯಾಬ್‌ನಲ್ಲಿ ತಯಾರಿಸಿದೆ ಎಂದು ಹೇಳಿದೆ. ಅಲ್ಲದೇ ಇದು ವೆಟ್ ಮಾರ್ಕೆಟ್‌ನಿಂದ ಹರಡಿತು ಎಂದಿರುವ ಚೀನಾ ಮಾತನ್ನೂ ತಳ್ಳಿ ಹಾಕಿದ್ದಾರೆ. ಈ ವಿಚಾರ ಬಯಲಾಗುತ್ತಿದ್ದಂತೆಯೇ ಚೀನಾ ಈ ವಿಜ್ಞಾನಿ ಆರೋಪ ಸತ್ಯಕ್ಕೆ ದೂರವಾಗಿದ್ದು ಎಂದಿದ್ದಾರೆ. ಈ ಬಾರಿ ಸ್ವದೇಶಿ …
Read More »ಮುಖ್ಯಮಂತ್ರಿ ಯಡಿಯೂರಪ್ಪ ಶೀಘ್ರ ಗುಣಮುಖರಾಗಲಿ: ಸಚಿವ ಶೆಟ್ಟರ್ ಹಾರೈಕೆ
ಹುಬ್ಬಳ್ಳಿ: ನಾಡಿನ ಅಭಿವೃದ್ಧಿ ಹಾಗೂ ಕೊರೊನಾ ನಿಯಂತ್ರಣ ಕಾರ್ಯದಲ್ಲಿ ಹಗಲಿರುಳು ತಮ್ಮನ್ನು ತೊಡಗಿಸಿಕೊಂಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೊರೊನಾ ಸೋಂಕಿನಿಂದ ಶೀಘ್ರ ಗುಣಮುಖರಾಗಿ ಹೊರ ಬರಲಿ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಹಾರೈಸಿದ್ದಾರೆ. ಸೋಂಕಿನ ಲಕ್ಷಣಗಳಿಲ್ಲದಿದ್ದರೂ ಮುನ್ನೆಚ್ಚರಿಕೆ ದೃಷ್ಟಿಯಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶೀಘ್ರ ಗುಣಮುಖರಾಗಿ ರಾಜ್ಯದ ಜನತೆಗೆ ಪುನಃ ಅವರ ದಕ್ಷ ಮತ್ತು ನಿಸ್ವಾರ್ಥ ಸೇವೆ ದೊರಕುವಂತಾಗಲಿ ಎಂದು ತಿಳಿಸಿದ್ದಾರೆ.
Read More »ಖ್ಯಾತ ವೈದ್ಯ ಡಾ.ಹೆಗ್ಡೆ ಸೂಚಿಸಿದ ಸಿಂಪಲ್ ಮನೆ ಔಷಧಿ: ಕೊರೊನಾ ಮಾಯ!
ಕೊರೊನಾ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ, ಗುಣಮುಖರಾಗುತ್ತಿರುವ ಸಂಖ್ಯೆಯಲ್ಲೂ ಏರಿಕೆಯಾಗುತ್ತಿರುವುದು ಮತ್ತು ಮರಣದ ಪ್ರಮಾಣವೂ ಇಳಿಕೆಯಾಗುತ್ತಿರುವುದು ನಿಟ್ಟುಸಿರು ಬಿಡುವಂತಹ ವಿಚಾರ.ಮನುಕುಲವನ್ನು ಕಾಡುತ್ತಿರುವ ಈ ವೈರಸಿಗೆ ಆಯುರ್ವೇದದಲ್ಲಿ ಯಶಸ್ವಿ ಕ್ಲಿನಿಕಲ್ ಟೆಸ್ಟ್ ಪ್ರಯೋಗವಾಗಿದ್ದರೂ, ಸರಕಾರದಿಂದ ಈ ಲಸಿಕೆಗೆ ಅಧಿಕೃತ ಅನುಮತಿ ಇನ್ನಷ್ಟೇ ಸಿಗಬೇಕಷ್ಟೇ.ಕೊರೊನಾಗೆ ಭಯ ಪಡಬೇಕಾಗಿಲ್ಲ ಎಂದು ಹಲವು ಖ್ಯಾತ ವೈದ್ಯರು ಸಾರ್ವಜನಿಕರಲ್ಲಿ ಮನವಿಯನ್ನು ಮಾಡಿದ್ದಾಗಿದೆ.ಬಿಂಬಿತವಾಗುತ್ತಿರುವಂತೆ ಇದು ಅಂತಹ ಭಯಾನಕ ವೈರಸ್ ಅಲ್ಲ ಎಂದು ಒತ್ತಿಒತ್ತಿ ಹೇಳುತ್ತಿದ್ದಾರೆ.ಇವೆಲ್ಲದರ ನಡುವೆ, ಖ್ಯಾತ ವೈದ್ಯ …
Read More »ಅಂಬಿಗರ ಚೌಡಯ್ಯ ಅಭಿವೃದ್ದಿ ನಿಗಮದಿಂದ ಅರ್ಜಿ ಆಹ್ವಾನ
ಯಾದಗಿರಿ : ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ನಿಯಮಿತದ ಮೂಲಕ 2020-21ನೇ ಸಾಲಿನಲ್ಲಿ ಅನುಷ್ಠಾನಗೊಳಿಸುತ್ತಿರುವ ವಿವಿಧ ಯೋಜನೆಗಳಲ್ಲಿ ಸೌಲಭ್ಯ ಪಡೆಯಲಿಚ್ಛಿಸುವ ಅರ್ಹ ಫಲಾನುಭವಿಗಳಿಂದ ಆನ್‍ಲೈನ್ ಅಥವಾ ಆಫ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ಬ್ಯಾಂಕ್‍ಗಳ ಸಹಯೋಗದೊಂದಿಗೆ ಸ್ವಯಂ ಉದ್ಯೋಗ ಸಾಲ ಯೋಜನೆ, ಸ್ವಯಂ ಉದ್ಯೋಗ ಸಾಲ ಯೋಜನೆ, ಕಿರುಸಾಲ / ಸ್ವಸಹಾಯ ಗುಂಪುಗಳಿಗೆ ಸಹಾಯ ಧನ, ಗಂಗಾ ಕಲ್ಯಾಣ ನೀರಾವರಿ ಯೋಜನೆ, ಅರಿವು ಶೈಕ್ಷಣಿಕ ಸಾಲ ಯೋಜನೆ, ಕೌಶಲ್ಯಾಭಿವೃದ್ಧಿ/ಉದ್ಯಮಶೀಲತಾ ತರಬೇತಿಯೋಜನೆಗಳಿಗೆ ಪ್ರವರ್ಗ-1ರ …
Read More »ಸಚಿವೆ ಕಮಲಾರಾಣಿ ಕೋವಿಡ್ ಗೆ ತುತ್ತಾಗಿ ಸಾವು.
ಲಕ್ನೋ:- ಕೋವಿಡ್ ಸೋಂಕಿಗೆ ತುತ್ತಾಗಿದ್ದ ಉತ್ತರ ಪ್ರದೇಶದ ಸಚಿವೆ ಕಮಲ ರಾಣಿ ಇಂದು ಮುಂಜಾನೆ ಲಕ್ನೋ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇವರಿಗೆ 62 ವರ್ಷ ವಯಸ್ಸಾಗಿತ್ತು.ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರದಲ್ಲಿ ಕಮಲಾ ರಾಣಿ ವರುಣ್ ತಾಂತ್ರಿಕ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದರು. ಇವರಿಗೆ ಜುಲೈ 18 ರಂದು ಕೋವಿಡ್ ಪಾಸಿಟಿವ್ ವರದಿ ಬಂದು ರಾಜಧಾನಿ ಕೋವಿಡ್ ಹಾಸ್ಪತ್ರೆಗೆ ದಾಖಲಾಗಿದ್ದರು.ಕೋವಿಡ್ ಮಾತ್ರವಲ್ಲದೆ ಶ್ವಾಸಕೋಶ ಸೋಂಕು ಆಗಿದ್ದರಿಂದ ಕಳೆದ ಹಲವು ದಿನಗಳಿಂದ …
Read More »ಯೋಗೇಶ್ವರ್ ಗೆ ವಾರ್ನಿಂಗ್ ನೀಡಿದ ಬಿಎಸ್ವೈ.
ಬೆಂಗಳೂರು:- ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ ವಿರುದ್ಧ ಅಡ್ಜೆಸ್ಟ್ ಮೆಂಟ್ ಪಾಲಿಟಿಕ್ಸ್ ಆರೋಪ ಮಾಡಿರುವ ಸಿ.ಪಿ.ಯೋಗೇಶ್ವರ್‌ಗೆ ಸಿಎಂ ಯಡಿಯೂರಪ್ಪ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಪಕ್ಷ, ಸರ್ಕಾರಕ್ಕೆ ಮುಜುಗರ ಆಗುವಂಥ ಹೇಳಿಕೆ ಕೊಡಬೇಡಿ. ಕೊರೊನಾ ಸಮಯದಲ್ಲಿ ಅನಗತ್ಯ ಹೇಳಿಕೆ ಕೊಡಬೇಡಿ. ನಿಮ್ಮ ಕಿತ್ತಾಟ ಕ್ಷೇತ್ರದ ಮಟ್ಟಿಗೆ ಇಟ್ಕೊಳ್ಳಿ. ಸುಮ್ನೆ ನಿಮ್ ಜಂಜಾಟದಲ್ಲಿ ನಮ್ಮನ್ನ್ಯಾಕೆ ಎಳೀತೀರಾ ಅಂದಿದ್ದಾರೆ ಎಂದು ಬಿಎಸ್ವೈ ಕಚೇರಿಯ ಮೂಲದಿಂದ ತಿಳಿದಿದೆ.ಸಚಿವ ಸಂಪುಟ ವಿಸ್ತರಣೆ ಚರ್ಚೆ …
Read More »ಮಂಡ್ಯ: ಅತ್ಯಾಚಾರವೆಸಗಿದ ಯುವಕನನ್ನು ಕೊಂದ ಬಾಲಕಿಯ ಪೋಷಕರು.
ಏಳು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಯುವಕನನ್ನು ಆಕೆಯ ಪೋಷಕರು ಹೊಡೆದು ಕೊಂದ ಘಟನೆ ಮಂಡ್ಯದ ಎಸ್.ಐ ಕೋಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.ಭೈರಪ್ಪ(30) ಮೃತಪಟ್ಟ ಯುವಕ. ಈತ 7 ವರ್ಷದ ಬಾಲಕಿಯೊಬ್ಬಳಿಗೆ ಚಾಕಲೇಟ್ ನೀಡುವ ಆಮಿಷವೊಡ್ಡಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಈ ವಿಚಾರ ತಿಳಿದು ರೊಚ್ಚಿಗೆದ್ದ ಆಕೆಯ ಪೋಷಕರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡ ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನಪ್ಪಿದ್ದಾನೆ. ಈ …
Read More »ವಿಶಾಖಪಟ್ಟಣದಲ್ಲಿ ಕ್ರೇನ್ ಕುಸಿತ, 11 ಮಂದಿ ಸಾವು.
ವಿಶಾಖಪಟ್ಟಣ:- ಆಂಧ್ರಪ್ರದೇಶದ ವಿಶಾಖಪಟ್ಟಣದ ಹಿಂದೂಸ್ಥಾನ್ ಶಿಪ್ ಯಾರ್ಡ್ ನಲ್ಲಿ ಕ್ರೇನ್ ಕುಸಿದು ಭಾರಿ ದುರ್ಘಟನೆ ನಡೆದಿದ್ದು, 11 ಮಂದಿ ಸಾವನ್ನಪ್ಪಿದ್ದಾರೆ.ಘಟನೆಯಲ್ಲಿ ಇನ್ನೂ ಹಲವರು ಗಾಯಗೊಂಡಿದ್ದು, ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳದಲ್ಲಿ ಇನ್ನೂ ಹಲವರು ಸಿಲುಕಿರುವ ಸಾಧ್ಯತೆಯಿದ್ದು, ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ವಿಶಾಖಪಟ್ಟಣದ ಬಂದರಿನ ಹಿಂದೂಸ್ಥಾನ್ ಶಿಪ್ ಯಾರ್ಡ್ ನಲ್ಲಿ ನೂತನ ಕ್ರೇನ್ ಅನ್ನು ನಿಲ್ಲಿಸುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಈ ಕ್ರೇನ್ 70 ಟನ್ ತೂಕವಿದೆ. ಕ್ರೇನ್ ಕುಸಿದು …
Read More »
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News