Breaking News

ವಿವಾಹಿತೆಯೊಂದಿಗೆ ಸಲುಗೆಯಿಂದ ಇದ್ದ ವ್ಯಕ್ತಿಯಿಂದ ಸೆಂಡ್ ಆಯ್ತ ಖಾಸಗಿ ಕ್ಷಣದ ವಿಡಿಯೋ

ಬೆಂಗಳೂರು: ವಿವಾಹಿತೆಯೊಂದಿಗೆ ಸಲುಗೆಯಿಂದ ಇದ್ದ ವ್ಯಕ್ತಿಯೊಬ್ಬ ಖಾಸಗಿ ಫೋಟೋ, ವಿಡಿಯೋ ಇಟ್ಟುಕೊಂಡು ಬ್ಲಾಕ್ಮೇಲ್ ಮಾಡುತ್ತಿದ್ದು ಬಸವನಗುಡಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ನಿತೀಶ್ ಕುಮಾರ್ ಸಿಂಗ್ ಎಂಬಾತನೇ ಈ ರೀತಿ ಮಾಡಿದ ಆರೋಪಿಯಾಗಿದ್ದಾನೆ. ಸಂತ್ರಸ್ತೆಗೆ ಮದುವೆಯಾಗಿ ಪತಿಯೊಂದಿಗೆ ಜರ್ಮನಿಯಲ್ಲಿ ಇದ್ದಾರೆ. ಹರಿಯಾಣ ಮೂಲದ ನಿತೀಶ್ ಕುಮಾರ್ ಫೇಸ್ಬುಕ್ ಮೂಲಕ ಪರಿಚಯವಾಗಿದ್ದು ವಿವಾಹಿತೆಯೊಂದಿಗೆ ಗೆಳೆತನವಾಗಿದೆ. ಇಬ್ಬರು ಹೋಟೆಲ್ಗಳಿಗೆ ಹೋಗಿದ್ದಾರೆ. ಮಹಿಳೆಯೊಂದಿಗೆ ಸಲುಗೆಯಿಂದ ಇದ್ದಾಗ ಖಾಸಗಿ ಕ್ಷಣದ ಫೋಟೋ ಮತ್ತು ವಿಡಿಯೋಗಳನ್ನೂ ಮೊಬೈಲ್ನಲ್ಲಿ ಚಿತ್ರೀಕರಿಸಿಕೊಂಡಿದ್ದಾನೆ.

ನಂತರದಲ್ಲಿ ವಿವಾಹಿತೆ ಆತನಿಂದ ದೂರವಾಗಿದ್ದು ಜೂನ್ ತಿಂಗಳಲ್ಲಿ ಬೆಂಗಳೂರಿನ ಎನ್.ಆರ್. ಕಾಲೋನಿಯಲ್ಲಿರುವ ತಂದೆಯ ಮನೆಗೆ ಬಂದಿದ್ದಾಳೆ. ಆರೋಪಿ ಮಹಿಳೆಯ ತಂದೆಯೊಂದಿಗೆ ಮಾತನಾಡಿ ತನ್ನೊಂದಿಗೆ ಸಂಬಂಧ ಮುಂದುವರಿಸದಿದ್ದಲ್ಲಿ ಖಾಸಗಿ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಸಿದ್ದಾನೆ. ತಂದೆಯ ಫೋನ್ ಗೆ ವಾಟ್ಸಾಪ್ ನಲ್ಲಿ ಫೋಟೋ ವಿಡಿಯೋಗಳನ್ನು ಕಳುಹಿಸಿದ್ದಾನೆ. ಸಂಬಂಧ ಮುಂದುವರೆಸಿದ್ದರೆ ಜಾಲತಾಣದಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಸಿದ್ದು, ಆತನ ವಿರುದ್ಧ ಬಸವನಗುಡಿ ಠಾಣೆ ಪೊಲೀಸರಿಗೆ ದೂರು ನೀಡಲಾಗಿದೆ.

About vijay_shankar

Check Also

ನಾಡಿನ ಸಮಸ್ತ ಜನತೆಗೆ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯ ಕೋರಿದ ಆನಂದ ಪರಾಳದ

ಶ್ರೀ ಆನಂದ ಪರಾಳದ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮ ಪಂಚಾಯತಿ ಸದಸ್ಯರು ಇವರಿಂದ ನಾಡಿನ ಸಮಸ್ತ ಜನತೆಗೆ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.