Breaking News

vijay_shankar

ಎರಡನೇ ಗಂಡನ ಮನೆಯಲ್ಲಿ ಯುವತಿ ಶವ ಪತ್ತೆ! ರೊಚ್ಚಿಗೆದ್ದ ಪೋಷಕರಿಂದ ನಡೆದೇ ಹೋಯ್ತು ಘೋರ ದುರಂತ

ಹುನಗುಂದ: ಮದುವೆಯಾಗಿದ್ದರೂ ಗಂಡನಿಂದ ದೂರವಾಗಿ ಪ್ರಿಯಕರನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಯುವತಿಯೊಬ್ಬಳು ಇಂದು ತನ್ನ ಪ್ರಿಯ ಗಂಡನ ಮನೆಯಲ್ಲೇ ದುರಂತ ಅಂತ್ಯಕಂಡಿದ್ದಾಳೆ. ಸಿಟ್ಟಿಗೆದ್ದ ಮೃತಳ ಪೋಷಕರು ಮಗಳ ಎರಡನೇ ಗಂಡನ ಮನೆಗೆ ಬೆಂಕಿ ಇಟ್ಟಿದ್ದಾರೆ. ಇಂತಹ ಘಟನೆ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕೆಲೂರಿನಲ್ಲಿ ಸಂಭವಿಸಿದ್ದು, ನೂರಾರು ಜನರ ಕಣ್ಣೆದುರಲ್ಲೇ ಮನೆ ಹೊತ್ತಿ ಉರಿದಿದೆ. ಗ್ರಾಮದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಯುವತಿ ಬಸಮ್ಮ ಮಾದರ ಮತ್ತು ರಂಜಿತ್ ಕೊಂಚನವರ ಪರಸ್ಪರ ಪ್ರೀತಿಸುತ್ತಿದ್ದರು. …

Read More »

ಶೂಲೇಭಾವಿ ಗ್ರಾಮದಲ್ಲಿ ಅನ್ನಪೂರ್ಣೇಶ್ವರಿ ಸ್ವ-ಸಹಾಯ ಸಂಘದ ಉದ್ಘಾಟನೆ ಮಾಡಿದ ಕೃಷ್ಣಾ ರಾಮಾದುರ್ಗ

ಅಮೀನಗಡ: ಹುನಗುಂದ ತಾಲೂಕಿನ ಶೂಲೇಭಾವಿ ಗ್ರಾಮದ ಶ್ರೀ ವಿಜಯ ಮಹಾಂತೇಶ ಮಠದಲ್ಲಿ ಇಂದು ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಗ್ರಾಮೀಣ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಗ್ರಾಮದ ಮಹಿಳೆಯರಿಂದ ಶ್ರೀ ಅನ್ನಪೂರ್ಣೇಶ್ವರಿ ಸ್ವ- ಸಹಾಯ ಸಂಘವನ್ನು ಉದ್ಘಾಟನೆ ಮಾಡುವ ಮೂಲಕ ಮಹಿಳೆಯರು ಈ ಸಂಘದಡಿ ತಾವು ಸಾಲ- ಸೌಲಭ್ಯಗಳನ್ನು ಪಡೆದು ನಾವೆಲ್ಲರೂ ಒಂದೇ ಕುಟುಂಬದ ಸದಸ್ಯರಂತೆ ಒಗ್ಗುಡಿ ಈ ಸಂಘದ ಸೌಲಭ್ಯ ಪಡೆಯುವ ಜೊತೆಗೆ ಉತ್ತಮ ಹಣಕಾಸಿನ ವ್ಯವಹಾರ ಮಾಡಬೇಕೆಂದು …

Read More »

ಬಡತನದ ಕುಲುಮೆಯಲ್ಲರಳಿದ ಕ್ರೀಡಾರತ್ನ ರೇವತಿ ವೀರಮಣಿ

ರೇವತಿ ಓಡಿದ್ದು ಹೂವಿನ ಹಾಸಿಗೆಯ ಮೇಲಲ್ಲ, ಅವರ ಜೀವನದ ಓಟ ಸಾಗಿದ್ದು ಮುಳ್ಳು ಬೇಲಿಗಳ ಮೇಲೆ. ಕಡುಬಡತನದ ನಡುವೆಯೂ ಅವರು ತಮ್ಮ ಒಲಂಪಿಕ್‌ ಕನಸನ್ನು ಕೈಬಿಡಲಿಲ್ಲ. ಒಲಂಪಿಕ್ ಕನಸು ಕಾಣದ ಕ್ರೀಡಾಪಟುಗಳೇ ಇಲ್ಲ ಎನ್ನಬಹುದು. ವಿಶ್ವದ ಅತ್ಯಂತ ದೊಡ್ಡ ಕ್ರೀಡಾಕೂಟದಲ್ಲಿ ಭಾಗವಹಿಸುವ ಆಸೆ ಮತ್ತು ಕನಸು ಪ್ರತಿಯೊಬ್ಬ ಕ್ರೀಡಾಪಟುವಿನ ಜೀವನದಲ್ಲೂ ಇರುತ್ತದೆ. ಬಹುತೇಕ ಕ್ರೀಡಾಪಟುಗಳು ಆರ್ಥಿಕ, ಕೌಟುಂಬಿಕ ಮತ್ತು ವಯಕ್ತಿಕ ಸಮಸ್ಯೆಗಳು ಮತ್ತು ಸಾಮರ್ಥ್ಯಗಳ ಕಾರಣದಿಂದ ಒಲಂಪಿಕ್ ಹಾದಿಯನ್ನು ಅರ್ಧಕ್ಕೇ …

Read More »

ಕಾಶಪ್ಪನವರ ಕುಟುಂಬದಿಂದ ಯಾವತ್ತು ದಬ್ಬಾಳಿಕೆ ಇಲ್ಲ ಅದು ಅವರ ಭ್ರಮೆ! ಡಾ: ವಿಜಯಾನಂದ ಕಾಶಪ್ಪನವರ್

ಇಲಕಲ್ಲ :ಹುನಗುಂದ ತಾಲೂಕಿನ ಹಾವರಿಗೆ ಗ್ರಾಮದಲ್ಲಿ ನಿನ್ನೆಯ ದಿನ SRNE ಫೌಂಡೇಶನ್ ಕಾರ್ಯಕರ್ತರು ಕರೋನಾ ವಾರಿಯರ್‌ ಗಳಿಗೆ ಸನ್ಮಾನ ಹಾಗೂ ದಿನಸಿ ಆಹಾರ ಕಿಟ್ ವಿತರಣೆ ಮಾಡಲು ಮುಂದಾದಾಗ ಡಾ: ವಿಜಯಾನಂದ ಕಾಶಪ್ಪನವರ ಕುಟುಂಬದಿಂದ ಬೆದರಿಕೆ ಕರೆ ಬಂದ ಕಾರಣ ೩:೩೦ ರವರೆಗೆ ಕಾದು ಕುಳಿತಿದ್ದ ನೂರಾರು ಕರೋನಾ ವಾರಿಯರ್ ಗಳು ಹೇಳದೆ ಕೇಳದೆ ಜಾಗ ಖಾಲಿ ಮಾಡಿದ್ದರು. ಇದು ವಿಜಯಾನಂದ ಕಾಶಪ್ಪನವರ ಕುಟುಂಬ ದಬ್ಬಾಳಿಕೆಯ ಸಾಕ್ಷಿ, ಇದನ ಕ್ಷೇತ್ರದ …

Read More »

ಹಾವರಗಿ ಗ್ರಾಮದಲ್ಲಿ ಮಾಜಿ ಶಾಸಕ ಡಾ: ವಿಜಯಾನಂದ ಕಾಶಪ್ಪನವರ ಕುಟುಂಬದಿಂದ ದಬ್ಬಾಳಿಕೆ ! ಆಹಾರ ಕಿಟ್ ಪಡೆಯಲು ಯಾರೂ ಬರಲಿಲ್ಲ,

ಧನ್ನೂರು ಗ್ರಾಮದಲ್ಲಿ ಕರೋನಾ ಸೇನಾನಿಗಳಗೆ & ಆಸ್ಪತ್ರೆ ಸಿಬ್ಬಂದಿಗಳಿಗೆ ಸನ್ಮಾನ ಮಾಡಿ ಆಹಾರ ಕಿಟ್ ನೀಡಿದ ಕ್ಷಣ ಧನ್ನೂರ:ಹುನಗುಂದ ಹಾಗೂ ಇಲಕಲ್ಲ ತಾಲ್ಲೂಕಿನಾಧ್ಯಾಂತ ಕರೋನಾ ಸೇನಾನಿಗಳಾದ ಆರೋಗ್ಯ ಇಲಾಖೆ ಹಾಗೂ ಅಂಗನವಾಡಿ, ಪಂಚಾಯತ್ ಪೌರ ಕಾರ್ಮಿಕರು ಹಾಗೂ ಪತ್ರಕರ್ತರು ಹೀಗೆ ಕಳೆದ ೦೩ ತಿಂಗಳಲ್ಲಿ ಸಾವಿರಾರು ಕರೋನಾ ವಾರಿಯರ್ ಗಳನ್ನು ಗುರುತಿಸಿ ಅವರ ಕರ್ತವ್ಯ ಪ್ರಜ್ಞೆಯನ್ನು ಗುರುತಿಸಿ ಸನ್ಮಾನಿಸಿ ಅವರ ಕುಟುಂಬಕ್ಕೆ ಕಿರಾಣಿ ಆಹಾರ ಕಿಟ್ ನೀಡುವ ಮೂಲಕ ಜಿಲ್ಲೆಯಲ್ಲಿ …

Read More »

ಇಲಕಲ್ಲ ತಹಶಿಲ್ದಾರ ಕಛೇರಿಯಲ್ಲಿ ಕಂದಾಯ ದಿನಾಚರಣೆ ನಿಮಿತ್ಯ ಹಸಿರೋತ್ಸವ ಕಾರ್ಯಕ್ರಮ

ಇಲಕಲ್ಲ :ನಗರದ ತಹಶಿಲ್ದಾರ ಕಾರ್ಯಾಲಯದಲ್ಲಿ ನಿನ್ನೆಯ ದಿನ ಕಂದಾಯಾ ದಿನಾಚರಣೆ ಅಂಗವಾಗಿ ತಹಶಿಲ್ದಾರರ ಇಲಾಖೆಯ ಆವರಣದಲ್ಲಿ ೧೦೦ ಸಸಿಗಳನ್ನು ನೆಡುವ ಮೂಲಕ ಹಸಿರೋತ್ಸವ ಕಾರ್ಯಕ್ರಮವನ್ನು ಆಚರಿಸಲಾ ಯಿತು. ಇಲಾಖೆಯ ಗ್ರೇಡ್ ೨ ತಹಶಿಲ್ದಾರ ಶ್ರೀಮತಿ ಎ ರತ್ನಮ್ಮ ಅವರು ಸಸಿ ನೆಟ್ಟು ನೀರು ಉನಿಸುವ ಮೂಲಕ ಉದ್ಘಾಟನೆ ಮಾಡಿದರು, ಈ ಸಂದರ್ಭದಲ್ಲಿ ರಾಜ್ಯ ಗ್ರಾಮ ಲೇಕ್ಕಾಧಿಕಾರಿಗಳ ರಾಜ್ಯ ಸಹ ಸಂಘಟನಾ ಕಾರ್ಯದರ್ಶಿ ಶ್ರೀ ಡಿ,ಎಸ್,ಯತ್ನಟ್ಟಿ ಅವರು ಕಂದಾಯ ದಿನಾಚರಣೆ ಅಂಗವಾಗಿ …

Read More »

ಕೇಂದ್ರ ಸರಕಾರದ ನಡೆಗೆ ಜನ ಹೈರಾನ್ ! ಎಲ್‌ಪಿಜಿ ಸಿಲಿಂಡರ್ ಬೆಲೆ 25.50 ಮತ್ತೆ ಏರಿಕೆ

ನವದೆಹಲಿ: ಕೊರೋನಾದಿಂದ ಸಂಕಷ್ಟದಲ್ಲಿರುವ ಸಾರ್ವಜನಿಕರಿಗೆ ಆಡಳಿತಾರೂಢ ಕೇಂದ್ರ ಸರ್ಕಾರ ಮತ್ತೆ ಗಾಯದ ಮೇಲೆ ಬರೆ ಎಳೆದಿದ್ದು, ಇಂದಿನಿಂದ ಜಾರಿಗೆ ಬರುವಂತೆ ಸಬ್ಸಿಡಿ ಸಹಿತ ಎಲ್‌ಪಿಜಿಯ ಬೆಲೆ ಒಂದು ಸಿಲಿಂಡರ್‌ಗೆ ೨೫.೫೦ ರೂ. ಹೆಚ್ಚಳ ಮಾಡಲಾಗಿದೆ. ಪ್ರಸ್ತುತ ೧೪.೨ ಕೆಜಿ ತೂಕದ ಗೃಹಬಳಕೆ ಸಿಲಿಂಡರ್‌ಗಳಿಗೆ ದೆಹಲಿಯಲ್ಲಿ ೮೩೪.೫೦ ರೂ. ಇದೆ.ಇನ್ನು ೧೯ ಕೆಜಿ ಸಿಲಿಂಡರ್‌ನ ಬೆಲೆಯನ್ನು ಸಹ ೭೬ ರೂ. ಹೆಚ್ಚಿಸಲಾಗಿದ್ದು, ದೆಹಲಿಯಲ್ಲಿ ೧,೫೫೦ ರೂ. ನಿಗದಿಯಾಗಿದೆ ಎಂದು ವರದಿಯಾಗಿದೆ.ಈಗಾಗಲೇ ದಿನದಿಂದ …

Read More »

SRNE ಫೌಂಡೀಶನ್ ವತಿಯಿಂದ ಚಿತ್ತರಗಿ ಗ್ರಾಮದಲ್ಲಿ ಕರೋನಾ ವಾರಿಯರ್‌ ಗಳಿಗೆ ದಿನಸಿ ಕಿಟ್ ವಿತರಿಸಿದ S R ನವಲಿಹಿರೇಮಠ

ಹುನಗುಂದ : ತಾಲ್ಲೂಕಿನ ಚಿತ್ತರಗಿ ಗ್ರಾಮದಲ್ಲಿ ಇಂದು ಆರೋಗ್ಯ ಇಲಾಖೆಯಲ್ಲಿ ಗ್ರಾಮದ ಕರೋನಾ ವಾರಿಯರ್ ಗಳಾದ ವೈದ್ಯರು ಹಾಗೂ ಆಶಾ/ ,ಅಂಗನವಾಡಿ ಕಾರ್ಯಕರ್ತೆ ,ಪಂಚಾಯತ್ ಪೌರಕಾರ್ಮಿಕರಿಗೆ ಇಂದು ತಾಲೂಕಿನ SRNE ಫೌಂಡೇಶನ್ ಸಂಸ್ಥೆಯ ಸಂಸ್ಥಾಪಕರಾದ S R ನವಲಿ ಹಿರೇಮಠ ಅವರು ಎಲ್ಲಾ ಕರೋನಾ ವಾರಿಯರ್ ಗಳಿಗೆ ದಿನಸಿ ಆಹಾರ ಕಿಟ್ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಫೌಂಡೇಶನ್ ಅಪಾರ ಕಾರ್ಯಕರ್ತರು ಹಾಗೂ ಪಂಚಾಯತ್ ಸದಸ್ಯರು ಭಾಗವಹಿಸಿದ್ದರು. ವೈದ್ಯಕೀಯ ಸಿಬ್ಬಂದಿಯಿಂದ …

Read More »

ಬಿ ಎಸ್ ವೈ ಹಾಗೂ ರಾಘವೇಂದ್ರ ವಿರುದ್ಧ ಹೈಕಮಾಂಡ್ಗೆ ದೂರು ನೀಡಿದ ರಮೇಶ್ ಜಾರಕೀಹೊಳೆ

ನವದೆಹಲಿ: ಹೈಕಮಾಂಡ್ ಬುಲಾವ್ ಮೇರೆಗೆ ಮೊನ್ನೆ ದೆಹಲಿಗೆ ಬಂದಿರುವ ರಮೇಶ್ ಜರಕಿಹೊಳಿ ನಿನ್ನೇಯೇ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಭೇಟಿ ಮಾಡಿದ್ದರು. ಅಲ್ಲದೆ, ದೇವೇಂದ್ರ ಫಡ್ನವಿಸ್ ಮೂಲಕವೇ ಹೈಕಮಾಂಡ್ ನಾಯಕರ ಭೇಟಿಗೆ ಯತ್ನಿಸಿದ್ದರು. ಫಡ್ನವೀಸ್ ಭೇಟಿ ವೇಳೆ ರಾಜ್ಯದ ಮೂವರು ಬಿಜೆಪಿ ನಾಯಕರ ವಿರುದ್ಧ ದೂರು ನೀಡಿದ್ದಾರೆ. ಸಿಎಂ ಯಡಿಯೂರಪ್ಪ, ಪುತ್ರ ಬಿ.ವೈ. ವಿಜಯೇಂದ್ರ, ಗೃಹ ಸಚಿವ ಬಸವರಾಜ ಬೊಮ್ಮಾಯಿ ವಿರುದ್ಧ ದೂರು ನೀಡಿದ್ದು, ಡಿ.ಕೆ. ಶಿವಕುಮಾರ್ ಜತೆ …

Read More »

ಕೇಂದ್ರ ಸಚಿವ ಸಂಪುಟದಿಂದ ರಾಜ್ಯದ ಹಾಲಿ ಸಚಿವರಿಗಿಲ್ಲ ಗೇಟ್‌ಪಾಸ್..!

BB News Kannada : ನವದೆಹಲಿ : ಸುಮಾರು ಎರಡು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಕೇಂದ್ರ ಸಚಿವ ಸಂಪುಟ ಪುನರ್ರಚನೆ ಈಗ ಆಗುವ ಸಾಧ್ಯತೆಗಳಿವೆ. ಏಕೆಂದರೆ ಸಂಪುಟ ಪುನರ್ರಚನೆ ವೇಳೆ ಕೆಲ ಸಚಿವರನ್ನು ಕೈ ಬಿಡಲು ನಿರ್ಧರಿಸ ಲಾಗಿದ್ದು, ಅಂತಹವರಿಗೆ ಧನ್ಯವಾದ ಹೇಳಲೆಂದೇ ಇಂದು ಕೇಂದ್ರ ಸರ್ಕಾರದ `ಕೌನ್ಸಿಲ್ಸ್ ಆಫ್ ಮಿನಿಸ್ಟರ್ಸ್ ಸಭೆ’ ಕರೆಯಲಾಗಿದೆ.ಪ್ರಧಾನಿ ಮೋದಿ ಇಂದು ಸಂಜೆ ೪ ಗಂಟೆಗೆ ಕೌನ್ಸಿಲ್ಸ್ ಆಫ್ ಮಿನಿಸ್ಟರ್ಸ್ ಸಭೆ ಕರೆದಿದ್ದು ಆ …

Read More »