Breaking News

vijay_shankar

ದಂಗಾಗಿಸುತ್ತೆ ಬಹು ಕಾಲದ ಬಳಿಕ ತೆರೆದ ಚಿತ್ರಮಂದಿರಕ್ಕೆ ಬಂದವರ ಸಂಖ್ಯೆ..!

ದೆಹಲಿಯಲ್ಲಿ ಕೊರೊನಾ ಹಾಗೂ ಲಾಕ್​ಡೌನ್​ನಿಂದಾಗಿ 7 ತಿಂಗಳುಗಳ ಕಾಲ ಸ್ಥಗಿತಗೊಂಡಿದ್ದ ಸಿನಿಮಾ ಹಾಲ್​ಗಳು ಇದೀಗ ಮತ್ತೆ ಓಪನ್​ ಆಗಿವೆ. ಸಾಕಷ್ಟು ಮುಂಜಾಗ್ರತಾ ಕ್ರಮಗಳ ಮೂಲಕ ಥಿಯೇಟರ್​ಗಳನ್ನ ತೆರೆಯಲಾಗಿದೆ. ಆದರೆ ಬೆರಳಣಿಕೆಯ ಪ್ರೇಕ್ಷಕರು ಮಾತ್ರ ಥಿಯೇಟರ್​ನಲ್ಲಿ ಕಾಣಿಸಿಕೊಂಡಿದ್ದಾರೆ. ದೆಹಲಿಯ ಗ್ರೇಟರ್​ ಕೈಲಾಶ್​ ಏರಿಯಾದಲ್ಲಿ 150 ಸೀಟ್​ಗಳನ್ನ ಹೊಂದಿದ್ದ ಸಿನಿಮಾ ಹಾಲ್​ನಲ್ಲಿ ಬೆಳಗ್ಗೆ 11:30ರ ಶೋಗೆ ಕೇವಲ 4 ಟಿಕೆಟ್​ ಮಾತ್ರ ಬಿಕರಿಯಾಗಿದೆ. ಮಧ್ಯಾಹ್ನ 2.30ರ ಶೋಗೆ 5 ಸೀಟ್​ಗಳು ಬುಕ್​ ಆಗಿವೆ. …

Read More »

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ : ಕರ್ನಾಟಕ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಬೆಂಗಳೂರು : ಕರ್ನಾಟಕ ಅರಣ್ಯ ಇಲಾಖೆಯು ಉದ್ಯೋಕಾಂಕ್ಷಿಗಳಿಗೆ ಸಿಹಿಸುದ್ದಿ ನೀಡಿದ್ದು, ಕರ್ನಾಟಕ ಅರಣ್ಯ, ಪರಿಸರ ಹಾಗೂ ಜೀವಿಶಾಸ್ತ್ರ ಇಲಾಖೆಯಲ್ಲಿ ಖಾಲಿ ಇರುವ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗ್ರೂಪ್ ಎ ವೃಂದದ ಹುದ್ದೆಗಳನ್ನು ಭರ್ತಿ ಮಾಡಲು ಲೋಕಸೇವಾ ಆಯೋಗವು ಅಧಿಸೂಚನೆ ಹೊರಡಿಸಿದೆ. ಒಟ್ಟು 16 ಹುದ್ದೆಗಳ ಪೈಕಿ ಬಿ.ಎಸ್ಸಿ (ಅರಣ್ಯ ಶಾಸ್ತ್ರ) ಪದವೀಧರರಿಗೆ 8, ಬಿ.ಎಸ್ಸಿ (ಅರಣ್ಯ ಶಾಸ್ತ್ರ) ಪದವಿ ಹೊರತುಪಡಿಸಿ ಇತರೆ ವಿಜ್ಞಾನ/ಇಂಜಿನಿಯರಿಂಗ್ ಪದವೀಧರರಿಗೆ 8 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. …

Read More »

ಸೊಳೇಭಾವಿ ಗ್ರಾಮ ಪಂಚಾಯತ್ ವತಿಯಿಂದ ನಾರಾಯಣ ಕತ್ತಿ ಇವರಿಗೆ ಬಿಳ್ಕೋಡಿಗೆ ಹಾಗೂ ಸನ್ಮಾನ ಸಮಾರಂಭ.

ಅಮೀನಗಡ: ಹುನಗುಂದ ತಾಲೂಕಿನ ಸೊಳೇಭಾವಿ ಗ್ರಾಮ ಪಂಚಾಯತ್ ನಲ್ಲಿ ಪ್ರಸಕ್ತ ೨೦೦೪ ರಿಂದ ವಸೂಲಿ ಕ್ಲಾರ್ಕ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ನಾರಾಯಣ ,ಬಿ,ಕತ್ತಿ ಅವರು ಕಳೆದ ೧೬ ವರ್ಷಗಳಿಂದ ಇಲ್ಲಿ ದಿನಗೂಲಿ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದರು, ಅವರ ಪ್ರಾಮಾಣಿಕ ಸೇವಾ ಫಲವಾಗಿ ಸರಕಾರದ ಆದೇಶದಂತೆ ಖಾಯಂ ನೌಕರರಾಗಿ (SDA) ಬಡ್ತಿ ಹೊಂದಿ ಬದಾಮಿ ತಾಲೂಕಿನ ನಂದಿಕೇಶ್ವರ ಗ್ರಾಮ ಪಂಚಾಯತಿಗೆ ಪ್ರಮೋಶನ್ ಆಗಿ ವರ್ಗಾವಣೆ ಆದ ಕಾರಣ ಇಂದು ಗ್ರಾಮ ಪಂಚಾಯತಿ …

Read More »

ನೀವು ‘ಕೊರೋನಾ’ ಬಂದು ‘ಗುಣಮುಖ’ ಆಗಿದ್ದೀರಾ? ಹಾಗಿದ್ದರೇ ತಪ್ಪದೇ ಈ ಸುದ್ದಿ ಓದಿ

ಕೆಎನ್‌ಎನ್ ಡಿಜಿಟಲ್ ಡೆಸ್ಕ್ : ಕೊರೋನಾ ವಿಶ್ವಾಧ್ಯಂತ ಎಲ್ಲರನ್ನು ನಲುಗಿಸುತ್ತಿದೆ. ಕೊರೋನಾ ನಿಯಂತ್ರಣ ಕ್ರಮಗಳ ಹೊರತಾಗಿಯೂ ಇನ್ನೂ ಯಾವುದೇ ದೇಶ ಅಧಿಕೃತವಾಗಿ ಕೊರೋನಾಗೆ ಲಸಿಕೆ ಕಂಡು ಹಿಡಿದಿಲ್ಲ. ಇದರ ಮಧ್ಯೆ ಕೊರೋನಾ ಬಂದ ನಂತ್ರ, ಕೊರೋನಾದಿಂದ ಗುಣಮುಖರಾದ ನಂತ್ರ ಎಷ್ಟು ದಿನ ನಮ್ಮನ್ನು ರೋಗ ಭಾಧಿಸುತ್ತದೆ ಎಂಬುದು ಅನೇಕರ ಪ್ರಶ್ನೆಯಾಗಿದೆ. ಇದಕ್ಕೆ ಅನೇಕ ಸಂಶೋಧಕರು, ಸಂಶೋಧನಗಳು ಒಂದೊಂದು ಬಗೆಯ ಉತ್ತರವನ್ನು ನೀಡಿವೆ. ಆ ಬಗ್ಗೆ ಮುಂದೆ ಓದಿ.. ಕೊರೋನಾ ಬಂದ …

Read More »

ಮೈಕ್ರೋ ಫೈನಾನ್ಸ್ ವಿರುದ್ಧ ಕ್ರಮಕ್ಕೆ ಆಗ್ರಹ

ಶ್ರೀನಿವಾಸಪುರ: ಕೊರೊನಾ ಸಂಕಷ್ಟದ ನಡುವೆ ಸಾಲ ಪಡೆದ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿ ಸಾಲ ವಸೂಲಿ ಮಾಡುತ್ತಿರುವ ಮೈಕ್ರೊ ಫೈನಾನ್ಸ್‌ ಕಂಪನಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ವಿಜಯಕುಮಾರಿ ಆಗ್ರಹಿಸಿದರು. ಪಟ್ಟಣದ ಕರ್ನಾಟಕ ಪ್ರಾಂತ ರೈತ ಸಂಘದ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಮೈಕ್ರೊ ಫೈನಾನ್ಸ್‌ ಸಾಲಗಾರರ ಸಭೆಯಲ್ಲಿ ಮಾತನಾಡಿದರು. ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ ಮೈಕ್ರೊ ಫೈನಾನ್ಸ್‌ …

Read More »

ರಾಜ್ಯದ ವಿವಿಧೆಡೆ ಉತ್ತಮ ಮಳೆ, 10 ಜಿಲ್ಲೆಗಳಲ್ಲಿ ರೆಡ್ ಅಲಟ್೯

ಬೆಂಗಳೂರು: ಉತ್ತರ ಕರ್ನಾಟಕ ಭಾಗದಲ್ಲಿ ಮಂಗಳವಾರ ಭಾರಿ ಮಳೆಯಾಗಿದೆ. ದೋಣಿ ನದಿಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಹಳ್ಳಗಳು ಭರ್ತಿಯಾಗಿದ್ದು, ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿದೆ. ವಿಜಯಪುರ ಜಿಲ್ಲೆಯಲ್ಲಿ ಮಳೆಯಿಂದಾಗಿ 127 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಚಡಚಣ ತಾಲ್ಲೂಕಿನ ಹಾಲಳ್ಳಿ ಗ್ರಾಮದಲ್ಲಿ ಸಿಡಿಲಿಗೆ ಎಮ್ಮೆ ಬಲಿಯಾಗಿದೆ. ಡೋಣಿ ನದಿಯ ಪ್ರವಾಹದಿಂದ ತಾಳಿಕೋಟೆ-ಹಡಗಿನಾಳ ನೆಲಮಟ್ಟದ ಸೇತುವೆ ಹಾಗೂ ಸಾತಿಹಾಳದಲ್ಲಿ ದೇವರಹಿಪ್ಪರಗಿ- ಬಸವನ ಬಾಗೇವಾಡಿ ಮುಖ್ಯ ರಸ್ತೆಯಲ್ಲಿರುವ ಸಂಪರ್ಕ ಸೇತುವೆ ಜಲಾವೃತವಾಗಿದೆ. ಬಾಗಲಕೋಟೆ ಜಿಲ್ಲೆಯ ಹುನಗುಂದ …

Read More »

ಆಧಾರ್ ಕಾರ್ಡ್ ಹೊಂದಿದವರಿಗೆ ಮುಖ್ಯ ಮಾಹಿತಿ: ಜನನ, ಮರಣ ನೋಂದಣಿಗೆ ಕಡ್ಡಾಯವಲ್ಲ ‘ಆಧಾರ್’

ನವದೆಹಲಿ: ಜನನ ಮತ್ತು ಮರಣ ನೋಂದಣಿಗೆ ಆಧಾರ್ ಒದಗಿಸುವುದು ಕಡ್ಡಾಯವಲ್ಲ ಎಂದು ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ ಸ್ಪಷ್ಟಪಡಿಸಿದೆ. ಸ್ವಯಂಪ್ರೇರಣೆಯಿಂದ ಆಧಾರ್ ಒದಗಿಸಿದರೆ, ಅದನ್ನು ಯಾವುದೇ ದಾಖಲೆಯಲ್ಲಿ ಮುದ್ರಿಸಬಾರದು ಎಂದು ಆರ್‌ಟಿಐಗೆ ನೀಡಿದ ಉತ್ತರದಲ್ಲಿ ಆರ್ಜಿಐ ತಿಳಿ6ಸಿದೆ. ವಿಶಾಖಪಟ್ಟಣಂ ಮೂಲದ ವಕೀಲ ಎಂ.ವಿ.ಎಸ್. ಅನಿಲ್ ಕುಮಾರ್, ಮರಣದ ನೋಂದಣಿಗೆ ಆಧಾರ್ ಕಡ್ಡಾಯವೇ ಅಥವಾ ಇಲ್ಲವೇ ಎಂದು ಕೇಳಿ ಆರ್‌ಟಿಐ ಮನವಿ ಸಲ್ಲಿಸಿದ್ದರು. ಕಳೆದ ವಾರ ಟ್ವಿಟರ್‌ನಲ್ಲಿ ಈ ಬಗ್ಗೆ ಉತ್ತರ ನೀಡಲಾಗಿದೆ. …

Read More »

ಪ್ರತಿದಿನ 1000 ಜನರ ಹೊಟ್ಟೆ ತುಂಬಿಸುವ 1 ರೂಪಾಯಿ ಊಟ

ನವದೆಹಲಿ: ಒಂದು ರೂಪಾಯಿಗೆ ಏನು ಬರುತ್ತೆ ಎಂದು ಕೇಳುವ ಜನರಿದ್ದಾರೆ. ಆದ್ರೆ ಇಲ್ಲೊಬ್ಬರು ಒಂದು ರೂಪಾಯಿಯಲ್ಲಿ ಒಬ್ಬ ವ್ಯಕ್ತಿಗೆ ಒಂದು ಹೊತ್ತಿನ ಹೊಟ್ಟೆ ತುಂಬಿಸುತ್ತಿದ್ದಾರೆ. ಈ ಮೂಲಕ ಜನ ಸೇವೆಯನ್ನು ಮಾಡುತ್ತಾ ಆ ಪ್ರದೇಶದಲ್ಲಿ ಯಾರೂ ಹಸಿವಿನಿಂದ ಇರದಂತೆ ನೋಡಿಕೊಂಡಿದ್ದಾರೆ. ನಂಗ್ಲೋಯಿನ ಶಿವ ಮಂದಿರ ಬಳಿಯ ‘ಶ್ಯಾಮ್ ರಸೋಯಿ’ ಎಂಬ ರೆಸ್ಟೋರೆಂಟ್, ಜನರಿಗೆ 1 ರೂಪಾಯಿಗೆ ಒಂದು ಹೊತ್ತಿನ ಊಟ ನೀಡುತ್ತಿದೆ. ಈ ಬಗ್ಗೆ ಸಂಸ್ಥೆಯ ಮಾಲೀಕ ಪ್ರವೀಣ್ ಗೋಯಲ್ …

Read More »

ಪ್ರವಾಸಿಗರ ಹುಚ್ಚಾಟ: ವಾರಾಂತ್ಯಕ್ಕೆ ಸುರಕ್ಷತೆ ಇಲ್ಲದೆ ಜನಜಾತ್ರೆ!

ಬೆಂಗಳೂರು: ಕೊರೋನಾ ಹಿನ್ನೆಲೆಯಲ್ಲಿ ಭಣಗುಡುತ್ತಿದ್ದ ರಾಜ್ಯದ ಪ್ರಮುಖ ಪ್ರವಾಸಿತಾಣಗಳಲ್ಲೀಗ ಮತ್ತೆ ಪ್ರವಾಸಿಗರ ಕಲರವ ಆರಂಭವಾಗಿದೆ. ಲಾಕ್‌ಡೌನ್‌ ನಿಯಮಾವಳಿ ಸಡಿಲಗೊಳ್ಳುತ್ತಿದ್ದಂತೆ ಬೆಂಗಳೂರಿನ ನಂದಿಬೆಟ್ಟ, ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ಸೇರಿ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿ ವಾರಾಂತ್ಯದಲ್ಲಿ ಪ್ರವಾಸಿಗರ ಭಾರೀ ದಂಡು ಕಾಣಸಿಗುತ್ತಿದೆ. ಈ ಮೂಲಕ ಪ್ರವಾಸೋದ್ಯಮ ಕ್ಷೇತ್ರ, ರಾಜ್ಯದ ಆರ್ಥಿಕತೆಯ ಚೇತರಿಕೆಯ ಮುನ್ಸೂಚನೆ ನೀಡುತ್ತಿದೆ. ಆದರೆ, ಈ ವೇಳೆ ಕೋವಿಡ್‌ ನಿಯಮಾವಳಿ ಗಾಳಿಗೆ ತೂರಿ ಗುಂಪುಸೇರುವುದು, ಮಾಸ್ಕ್‌ ಧರಿಸದೆ ಸುತ್ತಾಡುವಂಥ ಹುಚ್ಚಾಟವೂ ಪ್ರವಾಸಿಗರಿಂದ …

Read More »

ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ನಿಧನ

ನವದೆಹಲಿ : ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಇಂದು ನಿಧನರಾಗಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಕೆಲ ಕಾಲದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಉಪಚಾರ ಫಲಿಸದೆ ಇಂದು ನಿಧನರಾಗಿದ್ದಾರೆ. ಈ ಕುರಿತು ಅವರ ಪುತ್ರ ಚಿರಾಗ್ ಪಾಸ್ವಾನ್ ಟ್ವೀಟ್ ಮೂಲಕ ವಿಷಯವನ್ನು ಬಹಿರಂಗಪಡಿಸಿದ್ದಾರೆ. 8 ಎಂಟು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರೆ ರಾಮ್ ವಿಲಾಸ್ ಪಾಸ್ವಾನ್ ಹಲವು ಬಾರಿ ಕೇಂದ್ರದಲ್ಲಿ ಸಚಿವರಾಗಿದ್ದರು. ದಲಿತ ನಾಯಕರಾಗಿದ್ದ ರಾಮ್ ವಿಲಾಸ್ ಪಾಸ್ವಾನ್ ಬಿಹಾರದ …

Read More »