Breaking News

vijay_shankar

ಸ್ವಸಹಾಯ ಗುಂಪುಗಳ ಮಹಿಳೆಯರಿಗೆ ಗುಡ್ ನ್ಯೂಸ್

ಬೆಂಗಳೂರು: ರಾಜ್ಯದಲ್ಲಿ ಸ್ವಸಹಾಯ ಗುಂಪುಗಳು ತಯಾರಿಸುವ ಉತ್ಪನ್ನಗಳ ಮಾರಾಟಕ್ಕೆ ಅಮೆಜಾನ್ ವೇದಿಕೆ ಒದಗಿಸಲಿದೆ. ಅಮೆಜಾನ್ ಕಂಪನಿ ಸಾರ್ವಜನಿಕ ಕಾರ್ಯನೀತಿ ವಿಭಾಗದ ಉಪಾಧ್ಯಕ್ಷ ಚೇತನ್ ಕೃಷ್ಣಸ್ವಾಮಿ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವಥ್ ನಾರಾಯಣ ಅವರೊಂದಿಗೆ ನಡೆಸಿದ ಸಭೆಯಲ್ಲಿ ಈ ಕುರಿತಂತೆ ಭರವಸೆ ನೀಡಿದ್ದಾರೆ. ರಾಜ್ಯದಲ್ಲಿ 1.5 ಲಕ್ಷ ಸ್ವಸಹಾಯ ಗುಂಪುಗಳು ಇದ್ದು ನಾನಾ ಉತ್ಪನ್ನಗಳನ್ನು ತಯಾರಿಸುತ್ತಿವೆ. ಇವುಗಳಿಗೆ ಇ -ಕಾಮರ್ಸ್ ವೇದಿಕೆ ಒದಗಿಸಿ ಉತ್ಪನ್ನ ಮಾರಾಟಕ್ಕೆ ಅನುಕೂಲ ಮಾಡಿಕೊಡಬೇಕಿದೆ ಎಂದು ಡಿಸಿಎಂ ಹೇಳಿದ್ದಾರೆ. ಗ್ರಾಮೀಣ …

Read More »

ಅಕ್ರಮ `BPL’ ಕಾರ್ಡ್ ಪಡೆದವರಿಗೆ ರಾಜ್ಯ ಸರ್ಕಾರದಿಂದ ಬಿಗ್ ಶಾಕ್!

ಬೆಂಗಳೂರು : ಆರ್ಥಿಕವಾಗಿ ಸದೃಢವಾಗಿದ್ದರೂ ತಪ್ಪು ಮಾಹಿತಿ ನೀಡಿ ಬಿಪಿಎಲ್ ಕಾರ್ಡ್ ಪಡೆದುಕೊಂಡವರಿಗೆ ರಾಜ್ಯ ಸರ್ಕಾರವು ಬಿಗ್ ಶಾಕ್ ನೀಡಿದ್ದು, ಒಟ್ಟು 94 ಸಾವಿರಕ್ಕೂ ಅಧಿಕ ಅನರ್ಹ ಬಿಪಿಎಲ್ ಕಾರ್ಡ್ ಗಳನ್ನು ರದ್ದುಪಡಿಸಲಾಗಿದೆ. ಅನರ್ಹ ಬಿಪಿಎಲ್ ಕಾರ್ಡ್ ಗಳನ್ನು ತಡೆಯುವ ಉದ್ದೇಶದಿಂದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಬಿಪಿಎಲ್ ಕಾರ್ಡ್ ಪಡೆದ ಅನರ್ಹರರ ಪತ್ತೆಗೆ ಮುಂದಾಗಿತ್ತು. ಕಳೆದ 15 ತಿಂಗಳಲ್ಲಿ ರಾಜ್ಯಾದ್ಯಂತ 94,885 ಬಿಪಿಎಲ್ ಕಾರ್ಡ್ ಗಳನ್ನು ಇಲಾಖೆ …

Read More »

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಸೋಂಕು ದೃಢ

ಹುಬ್ಬಳ್ಳಿ ; ಕೇಂದ್ರ ಸಚಿವರ ಪ್ರಹ್ಲಾದ ಜೋಶಿ ಅವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಕುರಿತು ಸ್ವತಃ ಟ್ವೀಟ್ ಮಾಡಿರುವ ಸಚಿವರು ತಮಗೆ ಸೋಂಕು ತಗುಲಿರುವುದು ದೃಢಪಟ್ಟಿದೆ ಆದರೆ ರೋಗಲಕ್ಷಣಗಳು ಕಂಡು ಬಂದಿಲ್ಲ ವೈದ್ಯರ ಸಲಹೆಯಂತೆ ತಾವು ಹೊಮ ಕ್ವಾರಂಟೈನ್ ಆಗುತ್ತಿರುವುದಾಗಿ ಅವರು ಹೇಳಿದ್ದಾರೆ. ಸಚಿವರು ನಿನ್ನೆಯಷ್ಟೇ ಬೆಳಗಾವಿಗೆ ಆಗಮಿಸಿದ್ದರು. ದಿ.ಸಚಿವ ಸುರೇಶ್ ಅಂಗಡಿಯವರ ಮನೆಗೆ ಭೇಟಿ ನೀಡಿದ್ದರು .

Read More »

ಗೂಡುರು sc ಗ್ರಾಮದಲ್ಲಿ ಬೃಹತ್‌ ಕರವೇ ಪ್ರತಿಭಟನೆ, ಯೋಗಿ ಆದಿತ್ಯನಾಥ ಸರಕಾರದ ವಿರುದ್ಧ ಕರವೇ ಗರಂ,

ಗೂಡೂರ SC : ಇಂದು ಇಲಕಲ್ಲ ತಾಲೂಕಿನ ಗುಡೂರು Sc, ಗ್ರಾಮದಲ್ಲಿ ಕರವೇ, ಸಂಘಟನೆಯಿಂದ ಬೃಹತ್ ಪ್ರತಿಭಟನೆ ನಡೆಯಿತು ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ಹಾಗೂ ಸಾವಿನ ಪ್ರಕರಣದ ಬಗ್ಗೆ ಇಡೀ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿರುವಂತೆಯೇ ಇದೇ ರೀತಿಯಲ್ಲಿ ಮತ್ತೊಂದು ಪ್ರಕರಣ ವರದಿಯಾಗಿದೆ. ಹತ್ರಾಸ್ ನಿಂದ 500 ಕಿಲೋ ಮೀಟರ್ ದೂರದಲ್ಲಿರುವ ಬಲ ರಾಮ್ ಪುರ ಗ್ರಾಮದಲ್ಲಿ ಮಂಗಳವಾರ ಸಂಜೆ 22 ವರ್ಷದ ದಲಿತ …

Read More »

ಚಕ್ರಬಡ್ಡಿ ಮನ್ನಾ’ ಒಪ್ಪಂದ ಸುಪ್ರೀಂಕೋರ್ಟ್!

ಮುಂಬಯಿ: 2 ಕೋಟಿ ರೂಪಾಯಿವರೆಗಿನ ಸಾಲಗಳಿಗೆ ಚಕ್ರಬಡ್ಡಿ ಮನ್ನಾ ಮಾಡುವ ಸಂಬಂಧ ಹೆಚ್ಚುವರಿ ಅಫಿಡವಿಟ್ ಸಲ್ಲಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಕೇಂದ್ರ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಸೋಮವಾರ ಒಂದು ವಾರ ಕಾಲಾವಕಾಶ ನೀಡಿದೆ. ಅಂದ್ರೆ, ಪ್ರಕರಣದ ವಿಚಾರಣೆಯನ್ನ ಅಕ್ಟೋಬರ್ 13ಕ್ಕೆ ಮುಂದೂಡಿದೆ. ಕೇಂದ್ರದ ಪ್ರಸ್ತಾವನೆಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಭಾರತೀಯ ಬ್ಯಾಂಕುಗಳ ಸಂಘವನ್ನ ಕೋರಿದ ನ್ಯಾಯಾಲಯ, ರಿಯಲ್ ಎಸ್ಟೇಟ್ ಸಂಘಗಳು ಮತ್ತು ವಿದ್ಯುತ್ ಉತ್ಪಾದಕರು ಎತ್ತಿದ ಸಮಸ್ಯೆಗಳನ್ನ ಪರಿಗಣಿಸುವಂತೆ ಸರ್ಕಾರ …

Read More »

ಅಮೆರಿಕನ್‌ ಚುನಾವಣೆ ಗೆಲವು ಯಾರಿಗೆ?

ಅಮೆರಿಕನ್‌ ಮತದಾರರು ಮುಂದಿನ ಅಧ್ಯಕ್ಷರನ್ನು ಆಯ್ಕೆ ಮಾಡಲು ನವೆಂಬರ್‌ 3 ರಂದು ಮತದಾನ ಮಾಡಲಿದ್ದಾರೆ. ಅವರು ಮತ್ತೆ ರಿಪಬ್ಲಿಕನ್‌ ನಾಯಕ ಡೊನಾಲ್ಡ್‌ ಟ್ರಂಪ್‌ಗೆ 4 ವರ್ಷ ಅಧಿಕಾರ ಮುಂದುವರಿಸುವ ಅವಕಾಶ ಕೊಡಲಿದ್ದಾರೋ ಅಥವಾ ಶ್ವೇತ ಭವನದ ಕೀಲಿಕೈಯನ್ನು ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ, ಮಾಜಿ ಉಪಾಧ್ಯಕ್ಷ 77 ವರ್ಷದ ಜೋ ಬೈಡನ್‌ಗೆ ಕೊಡಲಿದ್ದಾರೋ? ಈ ಪ್ರಶ್ನೆಗೆ ಉತ್ತರ ಹುಡುಕುವ ಸಮಯದಲ್ಲೇ ಅಮೆರಿಕನ್‌ ಚುನಾವಣೆಯಲ್ಲಿ ಹಠಾತ್‌ ತಿರುವು ಎದುರಾಗಿದೆ. ಅಕ್ಟೋಬರ್‌ 2 ರಂದು …

Read More »

ಮಾಸ್ಕ್ ಬಳಕೆ ಬಗ್ಗೆ ಅರಿವು ಮೂಡಿಸಿ; ಮಾಸ್ಕ್ ಸರಿಯಾಗಿ ಬಳಸದಿದ್ದಲ್ಲಿ ದಂಡ : ಡಿ ಸಿ

ಕಾರವಾರ: ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮಾಸ್ಕ್ ಬಳಕೆ ಬಗ್ಗೆ ಅರಿವು ಮೂಡಿಸಬೇಕು. ಜೊತೆಗೆ ಮಾಸ್ಕ್‍ನ್ನು ಸರಿಯಾಗಿ ಬಳಸದಿದ್ದಲ್ಲಿ ಅಂತಹವರಿಗೆ ದಂಡ ವಿಧಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಕೆ ಅವರು ತಿಳಿಸಿದರು ಜಿಲ್ಲಾಧಿಕಾರಿ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲ ಎ ಸಿ ಮತ್ತು ತಹಸೀಲ್ದಾರ್ ಹಾಗೂ ಪೊಲೀಸ್ ಅಧಿಕಾರಿಗಳೊಂದಿಗೆ ವಿಡಿಯೊ ಕಾನ್ಫ್‍ರೆನ್ಸ್ ಮೂಲಕ ಮಾಹಿತಿ ಪಡೆದು ಅವರು ಮಾತನಾಡಿ,ಇತ್ತೀಚಿನ ದಿನಗಳಲ್ಲಿ ದಿನದಿಂದ ದಿನಕ್ಕೆ ಕೋವಿಡ್ …

Read More »

ಬಸವಣ್ಣನ ಐಕ್ಯ ಮಂಟಪ ವೀಕ್ಷಣೆಗೆ ಅವಕಾಶ

ಬಾಗಲಕೋಟೆ : ದುರಸ್ತಿ ಕಾರ್ಯದ ಕಾರಣ ಮುಚ್ಚಲಾಗಿದ್ದ ಇಲ್ಲಿನ ಬಸವಣ್ಣನ ಐಕ್ಯ ಮಂಟಪವು ಶನಿವಾರ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿದೆ. ಬರೋಬ್ಬರಿ 16 ತಿಂಗಳ ನಂತರ ಇದು ವೀಕ್ಷಣೆಗೆ ಮುಕ್ತಗೊಂಡಿದೆ. ‘₹87 ಲಕ್ಷ ವೆಚ್ಚದಲ್ಲಿ ಐಕ್ಯಮಂಟಪದ ದುರಸ್ತಿ ಕಾರ್ಯ ನಡೆದಿದೆ. ಪ್ರತಿದಿನ ಬೆಳಿಗ್ಗೆ 6 ರಿಂದ ಸಂಜೆ 6ರವರೆಗೆ ಸಾರ್ವಜನಿಕರ ಭೇಟಿಗೆ ಅವಕಾಶ ನೀಡಲಾಗಿದೆ’ ಎಂದು ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಆಯುಕ್ತ ಎಂ.ಗಂಗಪ್ಪ ತಿಳಿಸಿದರು. ಐಕ್ಯಮಂಟಪದಲ್ಲಿ ಬಿರುಕುಗಳು ಕಂಡು ಬಂದಿದ್ದ ಕಾರಣ ಅದರ …

Read More »

ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ತಂಡದ ಮೇಲೆ ಪೊಲೀಸರ ದಾಳಿ ಐವರ ಬಂಧನ

ವಿಜಯಪುರ : ಜಿಲ್ಲೆಯಲ್ಲಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಜೂಜಾಟ ಮುಂದು ವರೆದಿದ್ದು, ಜಿಲ್ಲೆಯ ಅಪರಾಧ ವಿಭಾಗದ ದಳದ ಪೊಲೀಸರು ಎರಡು ಪ್ರತ್ಯೇಕ ಸ್ಥಳಗಳ ಮೇಲೆ ದಾಳಿ ನಡೆಸಿ, ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಕ್ರಿಕೆಟ್ ಬೆಟ್ಟಿಂಗ್ ವಿರುದ್ಧ ಸಮರ ಸಾರಿರುವ ಜಿಲ್ಲೆಯ ಪೊಲೀಸರು, ಎಸ್ಪಿ ಅನುಪಮ ಅಗರವಾಲ್ ಹಾಗೂ ಎಎಸ್ಪಿ ರಾಮ ಅರಸಿದ್ಧಿ ಅವರ ಮಾರ್ಗದರ್ಶನದಲ್ಲಿ ಸಿಎಸ್‍ಎನ್ ವಿಭಾಗದ ಸಿಪಿಐ ಸುರೇಶ ಬೆಂಡೆಗುಂಬಳ ನೃತೃತ್ವದಲ್ಲಿ ಖಚಿತ ಮಾಹಿತಿ ಮೇರೆಗೆ ಆ.1 ರಂದು ಎರಡು …

Read More »

ಇಂದು ರಾಜ್ಯದ 604 ಕೇಂದ್ರಗಳಲ್ಲಿ `TET’ ಪರೀಕ್ಷೆ : ಅಭ್ಯರ್ಥಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ

ಬೆಂಗಳೂರು : ಇಂದು ರಾಜ್ಯದ 604 ಕೇಂದ್ರಗಳಲ್ಲಿ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ನಡೆಯಲಿದ್ದು, ಈ ಬಾರಿ ಪತ್ರಿಕೆ -1 ಕ್ಕೆ 74,977 ಮತ್ತು ಪತ್ರಿಕೆ-2 ಕ್ಕೆ 1,69,716 ಸೇರಿ ಒಟ್ಟುಉ 2,44,693 ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಟಿಇಟಿ ಪರೀಕ್ಷೆಗೆ ಕೊರೊನಾ ಪಾಸಿಟಿವ್ ಅಭ್ಯರ್ಥಿಗಳಿಗೂ ಅವಕಾಶ ನೀಡಲಾಗಿದೆ. ಅಭ್ಯರ್ಥಿಗಳು ಪರೀಕ್ಷೆ ಆರಂಭಕ್ಕಿಂತ ಒಂದು ಗಂಟೆ ಮೊದಲೇ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿ, ತಪಾಸಣೆ ಕೌಂಟರ್ ನಲ್ಲಿ ಆರೋಗ್ಯ ತಪಾಸಣೆಗೆ ಒಳಪಡಬೇಕಿದೆ. ಪ್ರವೇಶ …

Read More »