
ಅಮೀನಗಡ : ಹುನಗುಂದ ತಾಲೂಕಿನ ಅಮೀನಗಡ ನಗರದಲ್ಲಿ ಇಂದು ಕರ್ನಾಟಕದ ಯುವರತ್ನ ಡಾ: ಪುನಿತರಾಜಕುಮಾರ ಅವರ ೪೭ ನೇ ಹುಟ್ಟು ಹಬ್ಬ ಹಾಗೂ ಅವರ ಬಹು ನೀರಿಕ್ಷೀತ “ಜೇಮ್ಸ್ , ಕನ್ನಡ ಚಲನಚಿತ್ರ ಇಂದು ಅದ್ದೂರಿಯಾಗಿ ಬೆಳ್ಳಿ ಪರದೆಯ ಮೇಲೆ ಮೂಡಿ ಬರುತ್ತಿದೆ. ಇದೆ ರಾಜ್ಯಾದ್ಯಂತ ಅಪ್ಪು ಅವರ ಅಭಿಮಾನಿಗಳು ಪ್ರತಿ ಗ್ರಾಮದಲ್ಲಿ ಹಬ್ಬದ ಹಬ್ಬದ ವಾತಾರಣ ಸೃಷ್ಟಿ ಮಾಡಿದ್ದಾರೆ. ಮೂವಿ ನೋಡಲು ಬರುವ ಪಸ್ಟ ಶೂಗೆ ಇಂದ ಹಿಡಿದು ರಾತ್ರಿ ವರೆಗೂ ಸಾರ್ವಜನಿಕರಿವೆ ಊಟದ ವ್ಯವಸ್ಥೆ ಮಾಡಿದ್ದಾರೆ.

ಅಲ್ಲದೆ ನೇತ್ರದಾನ ಮಾಡುತ್ತಿದ್ದಾರೆ. ನೂರಾರು ಅಭಿಮಾನಿಗಳು ಕಳೆದ ೮ ದಿನಗಳಿಂದ ಹಗಲು ರಾತ್ರಿ ಕಟ್ಟೌಟ್ ,ಬ್ಯಾನರ್ ಕಟ್ಟಿ ಅವರ ಭಾವ ಚಿತ್ರಕ್ಕೆ ಹಾಲಿನ ಅಭಿಶೇಖ ಮಾಡುತ್ತಿದ್ದಾರೆ. ಅಪಾರ ಅಭಿಮಾನಿಗಳು ಇಂದು ನಗರದಲ್ಲಿ ೪೦ ಕ್ಕೂ ಹೆಚ್ಚು ಆಟೊ ಚಾಲಕರು ಅಪ್ಪು ಅವರ ಭಾವ ಚಿತ್ರ ಕಟ್ಟಿ ನಗರದ ಮುಖ್ಯ ರಸ್ತೆ ಮೂಲಕ ಮೆರವಣಿಗೆ ಮಾಡುತ್ತಿದ್ದಾರೆ.

ಅಪ್ಪು ಅಭಿಮಾನಿಯೊಬ್ಬರು ನಿನ್ನೆಯ ದಿನ ೩೦೦ ಜನರಿಗೆ ಎಲ್ಲಾ ಟಿಕೆಟ್ಗಳನ್ನು ಉಚಿತವಾಗಿ ನೀಡಿ ಅದರ ಎಲ್ಲಾ ಮೊತ್ತವನ್ನು ನಾನೇ ಭರಿಸುತ್ತೇನೆ ಎಂದು ಚಿತ್ರಮಂದಿರದ ಮಾಲೀಕರ ಜೊತೆಗೆ ಅಭಿಮಾನಿಯೊಬ್ಬರು ಪಟ್ಟು ಹಿಡಿದು ಮಾತನಾಡಿದರು ಅದಕ್ಕೆ ಮಾಲಿಕ ಒಪ್ಪಲಿಲ್ಲ, ಇಂತಹ ಅಭಿಮಾನಿಗಳನ್ನು ಅಪ್ಪು ಅವರು ಹೊಂದಿದ್ದು ನಿಜಕ್ಕೂ ಶ್ಲಾಘನೀಯ. ಇಂದು ೧೨ ಗಂಟೆಗೆ ನಗರದ ಲಕ್ಷೀ ಚಿತ್ರ ಮಂದಿರದಲ್ಲಿ ಅಪ್ಪು ಅಭಿಮಾನಿಗಳು ಇಡಿ ಚಿತ್ರ ಮಂದಿರವನ್ನು ಮದುವನ ಗಿತ್ತಿಯಂತೆ ಶ್ರಿಂಗಾರ ಮಾಡಿದ್ದಾರೆ.

ಅಪ್ಪು ಅವರು ಈಗಾಗಲೇ ಅಭಿನಯ ಮಾಡಿರುವ ಎಲ್ಲಾ ಚಲನಚಿತ್ರ ಪೊಸ್ಟಗಳನ್ನು ಕಟ್ಟ ಹಾಕಿ ಬಿದಿ ಬದಿಗಳಲ್ಲಿ ಬ್ಯಾನರ್ ಹಾಕಿ ನಿಲ್ಲಿಸಿದ್ದಾರೆ. ಇದು ಅಪ್ಪು ಅಭಿಮಾನದ ಸಂಖ್ಯೆತವಾಗಿದೆ. ರಾಜ್ಯದಲ್ಲಿ ಇಂದು ಲಕ್ಷಾಂತರ ಅಪ್ಪು ಅಭಿಮಾನಿಗಳು ಹಬ್ಬದ ವಾತಾರಣವನ್ನು ಸೃಷ್ಟಿಸಿದ್ದಾರೆ. ಪ್ರತಿ ಚಿತ್ರಮಂದಿರಗಳಲ್ಲಿ ಸಡಗರ ,ಸಂಮ್ರಮ ಕಳೆಗಟ್ಟಿದೆ,ನಿರಂತರ ಅನ್ನಸಂತರ್ಪನೆ ನಡೆಯುತ್ತಿದೆ, ಮತ್ತೊಮ್ಮೆ ಇಂತಹ ಕಲಾರತ್ನ ಹುಟ್ಟುಲು ಸಾಧ್ಯವಿಲ್ಲವೆನೊ ಎಂಬ ನೋವು ಅಪಾರ ಅಭಿಮಾನಿಹಳಲ್ಲಿ ಕಾಡುತ್ತಿದೆ,ಕನ್ನಡದ ಯುವ ರತ್ನನಿಗೆ ನಮ್ಮ BB News Channel ಕಡೆಯಿಂದ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಸುತ್ತೇವೆ.
ಮತ್ತೆ ಹುಟ್ಟಿ ಬಾ ಅಪ್ಪು ಎಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡು ಅಪಾರ ಅಭಿಮಾನಿಗಳಿಗೆ ತುಂಬಾ ನೋವಾಗಿದೆ, ಅವರಿಗೆ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ, ಇಂದಿನ ಈ ಅದ್ದೂರಿ ಹುಟ್ಟು ಹಬ್ಬ ಹಾಗೂ ಜೇಮ್ಸ್ ಚಲನಚಿತ್ರ ಬಿಡುಗಡೆಗೆ ಅಮೀನಗಡ ನಗರದಲ್ಲಿ ಭರ್ಜರಿ ಸ್ವಾಗತ ಕೋರಿ ನಗರದಲ್ಲಿ ಹಬ್ಬದ ಕಳೆ ತಂದಿದ್ದಾರೆ,ಈಗ ರಾಜ್ಯದಲ್ಲಿ ಜೇಮ್ಸ್ ಚಿತ್ರ ಅದ್ದೂರಿ ತೆರೆ ಕಂಡಿದ್ದು ಎಲ್ಲಾ ಚಿತ್ರಮಂದಿರಗಳು ಹೌಸ್ ಪುಲ್ ಚಿತ್ರತಂಡ ಅಪ್ಪು ಅಭಿಮಾನಿಗಳ ದಂಡು ಅವರ ಅಭಿಮಾನದ ಕೆಲಸ ನೋಡಿ ಶಾಕ್ ಆಗಿದ್ದಾರೆ. ಅಪ್ಪು ಅಭಿಮಾನಿಗಳಾದ ಶ್ರೀ ನಾಗರಾಜ್ ಎಸ್. ಲಮಾಣಿ,ಶ್ರೀ ವೆಂಕಟೇಶ್ ರಾಠೋಡ್,ಶ್ರೀ ಶಿವಾನಂದ ರಾಠೋಡ್,ಶ್ರೀ ಕಿರಣ್ ನಾಯಕ್, ಶ್ರೀ ಸಂತೋಷ ಚವ್ಹಾಣ, ಶ್ರೀ ಮುತ್ತು ಚವ್ಹಾಣ,ಶ್ರೀ ರಾಹುಲ್ ಚವ್ಹಾಣ, ಶ್ರೀಶೈಲ ಎಸ್ ತತ್ರಾಣಿ, ಶ್ರೀ ಸಂತೋಷ ಬ ಐಹೊಳೆ, ಶ್ರೀ ರವಿ ಅನಗಲ್,ಶ್ರೀ ಅಶೋಕ್ ಸೀರಿಯನ್, ರವಿ ಕೆ. ರಾಠೋಡ್,ನಾಗರಾಜ್ ಅನೇಕ ಅಭಿಮಾನಿಗಳು ಪಾಲ್ಗೊಂಡಿದ್ದರು.