Breaking News

ಕಾರು ಖರೀದಿಸಿದ್ದಕ್ಕಿಂತಲೂ ಎಮ್ಮೆ ಖರೀದಿಸಿದ್ದೇ ಹೆಚ್ಚು ಖುಷಿ ಕೊಟ್ಟಿದೆ: ಸೋನು ಸೂದ್‌!

ಐಷಾರಾಮಿ ಕಾರು ಕೊಂಡುಕೊಳ್ಳುವುದು ಎಂದರೆ ಸೆಲೆಬ್ರಿಟಿಗಳಿಗೆ ಸಖತ್‌ ಉತ್ಸಾಹ. ಆದರೆ ನಟ ಸೋನು ಸೂದ್‌ ಅವರಿಗೆ ಕಾರಿಗಿಂತಲೂ ಎಮ್ಮೆ ಖರೀದಿಸಿದ್ದರಲ್ಲೇ ಹೆಚ್ಚು ಖುಷಿ ಸಿಕ್ಕಿದೆ! ಯಾಕೆ ಎಂಬುದಕ್ಕೆ ಉತ್ತರ ಈ ಲೇಖನದಲ್ಲಿದೆ. ನಟ ಸೋನು ಸೂದ್‌ ಅವರ ಇಮೇಜ್‌ ಸಂಪೂರ್ಣ ಬದಲಾಗಿದೆ. ಪರದೆ ಮೇಲೆ ವಿಲನ್‌ ಆಗಿ ಕಾಣಿಸಿಕೊಳ್ಳುವ ಅವರು ನಿಜಜೀವನದಲ್ಲಿ ರಿಯಲ್‌ ಹೀರೋ ಆಗಿದ್ದಾರೆ. ಲಾಕ್‌ಡೌನ್‌ ಸಂದರ್ಭದಲ್ಲಿ ಜನರಿಗೆ ಅವರು ಮಾಡಿದ ಸಹಾಯವೇ ಈ ಬದಲಾವಣೆಗೆ ಕಾರಣ. ಈಗ ಅವರು ಎಮ್ಮೆ ಖರೀದಿಯ ಖುಷಿ ಬಗ್ಗೆ ಮಾತನಾಡಿದ್ದಾರೆ!

ಅರೆರೆ, ಬಾಲಿವುಡ್‌ನಲ್ಲಿ ಸ್ಟಾರ್‌ ನಟನಾಗಿ ಮಿಂಚುತ್ತಿರುವ ಸೂನು ಸೂದ್‌ಗೆ ಎಮ್ಮೆ ಯಾಕೆ ಬೇಕು? ಅದಕ್ಕೂ ಕಾರಣ ಇದೆ. ಅವರು ಎಮ್ಮೆ ಖರೀದಿಸಿರುವುದು ಸ್ವಂತಕ್ಕಾಗಿ ಅಲ್ಲ. ಬದಲಿಗೆ, ಬಿಹಾರದ ಬಡ ರೈತ ಕುಟುಂಬಕ್ಕಾಗಿ ಒಂದು ಎಮ್ಮೆಯನ್ನು ಖರೀದಿಸಿದ್ದಾರೆ. ಅದರ ಬಗ್ಗೆ ಅವರು ಸೋಶಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಆ ಪೋಸ್ಟ್ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಸೋನು ಮಾಡಿದ ಕೆಲಸಕ್ಕೆ ಜನಮೆಚ್ಚುಗೆಯೂ ಸಿಗುತ್ತಿದೆ.

ಕುಟುಂಬ ನಿರ್ವಹಣೆಗೆ ಏಕೈಕ ಆದಾಯದ ಮೂಲವಾಗಿದ್ದ ಎಮ್ಮೆಯನ್ನು ಪ್ರವಾಹದಿಂದಾಗಿ ಆ ಬಡಕುಟುಂಬ ಕಳೆದುಕೊಂಡಿತ್ತು. ಜೊತೆಗೆ ಮಗನೂ ಸಾವಿಗೀಡಾಗಿದ್ದ. ಈ ವಿಷಯ ಗೊತ್ತಾದ ಬಳಿಕ ಅವರಿಗೆ ಸೋನು ಸೂದ್‌ ಸಹಾಯ ಮಾಡಿದ್ದಾರೆ. ಹೊಸ ಎಮ್ಮೆ ಕೊಡಿಸುವ ಮೂಲಕ ಜೀವನದಲ್ಲಿ ಹೊಸ ಬೆಳಕು ಮೂಡುವಂತೆ ಮಾಡಿದ್ದಾರೆ. ‘ನನ್ನ ಮೊದಲ ಕಾರು ಖರೀದಿಸಿದ್ದಕ್ಕಿಂತಲೂ ನಿಮಗಾಗಿ ಎಮ್ಮೆ ಖರೀದಿ ಮಾಡುವಾಗ ಹೆಚ್ಚು ಎಕ್ಸೈಟ್‌ ಆಗಿದ್ದೆ. ಬಿಹಾರಕ್ಕೆ ಬಂದಾಗ ಒಂದು ಲೋಟ ತಾಜಾ ಎಮ್ಮೆ ಹಾಲು ಕುಡಿಯುತ್ತೇನೆ’ ಎಂದಿದ್ದಾರೆ ಸೋನು ಸೂದ್‌.

ಈ ರೀತಿ ಸಹಾಯಕ್ಕಾಗಿ ಪ್ರತಿ ದಿನ ಸೋನು ಸೂದ್‌ಗೆ ಸಾವಿರಾರು ಮನವಿಗಳು ಬರುತ್ತಿವೆ. ಸೋಶಿಯಲ್ ಮೀಡಿಯಾ ಮೂಲಕ ಅನೇಕರು ನೆರವು ಕೇಳುತ್ತಿದ್ದಾರೆ. ದಿನವೊಂದಕ್ಕೆ ಸರಾಸರಿ 1137 ಇಮೇಲ್‌, 19 ಸಾವಿರ ಫೇಸ್‌ಬುಕ್‌ ಮೆಸೇಜ್‌, 4,812 ಇನ್‌ಸ್ಟಾಗ್ರಾಮ್‌ ಮೆಸೇಜ್‌, 6741 ಟ್ವಿಟರ್‌ ಮೆಸೇಜ್‌ಗಳು ಬರುತ್ತಿವೆ ಎಂದು ಇತ್ತೀಚೆಗಷ್ಟೇ ಅವರು ಹೇಳಿದ್ದರು. ಎಲ್ಲದಕ್ಕೂ ಪ್ರತಿಕ್ರಿಯಿಸಲು ಸಾಧ್ಯವಾಗದಿದ್ದರೆ ಕ್ಷಮಿಸಿ ಎಂಬುದಾಗಿಯೂ ಸೋನು ಸೋದ್‌ ಕೇಳಿಕೊಂಡಿದ್ದಾರೆ.

About vijay_shankar

Check Also

ಎ, ನಾಗರಾಜ ರೆಡ್ಡಿ ನಿರ್ಮಿಸುತ್ತಿರುವ ‘ಮುಗಿಲ ಮಲ್ಲಿಗೆ’ ಕನ್ನಡ ಚಲನಚಿತ್ರ ಚಿತ್ರೀಕರಣ ಮುಕ್ತಾಯ

Veryಬೆಂಗಳೂರ : ಸ್ನೇಹಾಲಯಂ ಕ್ರಿಯೇಷನ್ಸ್ ಸಮರ್ಪಿಸಿ ಎ.ಎ.ನ್.ಆರ್ ಪಿಕ್ಚರ್ಸ್ ಬ್ಯಾನರ್ಅಡಿಯಲ್ಲಿ ಎ. ನಾಗರಾಜ ರೆಡ್ಡಿ ನಿರ್ಮಿಸುತ್ತಿರುವ ‘ಮುಗಿಲ ಮಲ್ಲಿಗೆ’ ಕನ್ನಡಚಲನಚಿತ್ರದ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.