ಬಾಗಲಕೋಟೆ : ಹುನಗುಂದ ತಾಲೂಕಿನ ಅಮೀನಗಡ ಪಟ್ಟಣದಲ್ಲಿ ಇಂದು ಕರೋನಾ ರೋಗದಿಂದ ಸಾವನ್ನಪ್ಪಿದ್ದ ಅಬ್ದುಲ್ ರಜಾಕ್ ಜಮಖಾನ ಅವರ ಅಂತ್ಯ ಸಂಸ್ಕಾರ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರು ಮಾಡಿದರು.

ಕೊರೊನಾ ಕಾಲದ ಪ್ರಾರಂಭದಲ್ಲಿ ಭೀತಿಯ ಕಾರಣದಿಂದಾಗಿ ಸೋಂಕಿತ ವ್ಯಕ್ತಿಗಳಿಗೆ ಬಹಿಷ್ಕಾರ ಹಾಕುವ, ಮೃತದೇಹಗಳನ್ನು ಕುಟುಂಬಸ್ಥರೇ ತಿರಸ್ಕರಿಸುವ ಸನ್ನಿವೇಶ ಕಂಡು ಬಂದಿತ್ತು. ಮೃತದೇಹಗಳಿಗೆ ಕನಿಷ್ಠ ಗೌರವವನ್ನೂ ನೀಡದೆ ಅವುಗಳನ್ನು ಎಲ್ಲೆಂದರಲ್ಲಿ ಎಸೆಯುವ, ಸಾಮೂಹಿಕವಾಗಿ ಹೂತು ಬಿಡುವ ಘಟನಾವಳಿಗಳಿಗೆ ನಾಡಿನ ಜನರು ಸಾಕ್ಷಿಯಾಗಿದ್ದರು.

ಇಂಥಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕೊರೊನಾ ವಾರಿಯರ್ಸ್ ಗಳಾಗಿ ಮುಂದೆ ಬಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರು, ಧರ್ಮ ಬೇಧವಿಲ್ಲದೆ ದೇಶದಾದ್ಯಂತ ಕೋವಿಡ್ ಬಾಧಿತ ಮೃತದೇಹಗಳ ಅಂತ್ಯ ಸಂಸ್ಕಾರದಲ್ಲಿ ಕೈಜೋಡಿಸುತ್ತಿದ್ದಾರೆ.