ಕೊಪ್ಪಳ : ಜಿಲ್ಲೆಯದ್ಯಂತ ಕೊರೊನಾ ಮಾರ್ಗಸೂಚಿಯನ್ನ ಲೆಕ್ಕಿಸದೇ ಶ್ರೀ ಶುಕಮುನಿ ತಾತಾನವರ ಅಡ್ಡಪಲ್ಲಕ್ಕಿ ಉತ್ಸವದ ಹೆಸರಿನಲ್ಲಿ ಕಿಡಿಗೇಡಿಗಳು ಪೊಲೀಸ್ ಜೀಪ್ ನ್ನು ಜಖಂಗೊಳಿಸಿದ ಹಿನ್ನೆಲೆಯಲ್ಲಿ ದೋಟಿಹಾಳ ಗ್ರಾಮದ ಸುತ್ತಮುತ್ತಲಿನ 50 ಮಂದಿ ವಿರುದ್ದ ಕುಷ್ಟಗಿ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ. ಜಿಲ್ಲೆಯ ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮದ ಶ್ರೀ ಶುಕಮುನಿ ಆರಾಧನಾ ಮಹೋತ್ಸವದ ಅಡ್ಡಪಲ್ಲಕ್ಕಿ ಗುರುವಾರ ನಡೆಯಬೇಕಿತ್ತು. ಇದರ ಬಗ್ಗೆ ಜಿಲ್ಲಾಡಳಿತ ಕೂಡಾ ಅದ್ಧೂರಿ ಉತ್ಸವ ಬದಲು ಸರಳವಾಗಿ …
Read More »ಕೊರೊನಾ ತವರು ಚೀನಾದ ಬೀಜಿಂಗ್ ಈಗ ಮಾಸ್ಕ್ ಮುಕ್ತ..! ಸತತ 13 ದಿನ ಹೊಸ ಕೇಸ್ ಇಲ್ಲ
ಚೀನಾದ ರಾಜಧಾನಿ ಬೀಜಿಂಗ್ ಮಾಸ್ಕ್ ಮುಕ್ತವಾಗಿದ್ದು, ಇನ್ಮೇಲೆ ಮಾಸ್ಕ್ ಇಲ್ಲದೆಯೂ ನಗರದಲ್ಲಿ ಹೊರಗಡೆ ಓಡಾಡಬಹುದು. ಸತತ 13 ದಿನ ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗದ ಹಿನ್ನೆಲೆ ಬೀಜಿಂಗ್ ಮಾಸ್ಕ್ ಫ್ರೀ ಆಗಿದೆ. ಬೀಜಿಂಗ್: ಚೀನಾದ ರಾಜಧಾನಿ ಬೀಜಿಂಗ್‌ನಲ್ಲಿ ಇನ್ಮೇಲೆ ಮಾಸ್ಕ್‌ಇಲ್ಲದೆಯೂ ಹೊರಗಡೆ ಓಡಾಡಬಹುದು. ಹೌದು, ಸತತ 13 ದಿನ ಹೊಸ ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು ವರದಿಯಾಗದ ಹಿನ್ನೆಲೆ ಬೀಜಿಂಗ್‌ನ ಆರೋಗ್ಯ ಅಧಿಕಾರಿಗಳು ಹೊರಾಂಗಣದಲ್ಲಿ ಮಾಸ್ಕ್ ಧರಿಸುವ ನಿಯಮವನ್ನು ರದ್ದುಗೊಳಿಸಿದ್ದಾರೆ. ಜೊತೆಗೆ ಕೊರೊನಾ ನಿಯಂತ್ರಣಕ್ಕೆ …
Read More »ಬಾಂಬ್ ಬೆದರಿಕೆ ಕರೆ: ಆರೋಪಿ ಕಸ್ಟಡಿಗೆ
ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿರುವುದಾಗಿ ಬುಧವಾರ ಹುಸಿ ಕರೆ ಮಾಡಿದ್ದ ವ್ಯಕ್ತಿಯನ್ನು ಉಡುಪಿ ಜಿಲ್ಲೆ ಕಾರ್ಕಳ ತಾಲೂಕು ಮುದ್ರಾಡಿಯ ವಸಂತ (33) ಎಂದು ಗುರುತಿಸಲಾಗಿದ್ದು, ಪೊಲೀಸರು ಬಂಧಿಸಿ ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆತನನ್ನು ಕೋವಿಡ್ ಸೋಂಕು ಪರೀಕ್ಷೆ ನಡೆಸಬೇಕಾಗಿರುವುದರಿಂದ ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ಪರೀಕ್ಷಾ ವರದಿ ನೆಗೆಟಿವ್ ಬಂದರೆ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗೆ ಪೊಲೀಸ್ ಕಸ್ಟಡಿಗೆ ಪಡೆಯಲು ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಪೊಲೀಸ್ ಆಯುಕ್ತ …
Read More »ನಕಲಿ ಪಾಸ್ ಪೋರ್ಟ್ ತಯಾರಿಕೆ: ಮೂವರ ಬಂಧನ
ಶಿರಸಿ: ನಕಲಿ ಪಾಸ್‌ಪೋರ್ಟ್ ತಯಾರಿಸಿದ ಆರೋಪದಡಿಯಲ್ಲಿ ಮೂವರನ್ನು ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಾಲ್ಲೂಕಿನ ಹುಲೇಕಲ್ ಗ್ರಾಮದ ಹಂಚರಟ್ಟಾದ ಅಬ್ದುಲ್ ರೆಹಮಾನ್ (22) ವಿದೇಶಕ್ಕೆ ತೆರಳಲು ನಕಲಿ ಪಾಸ್‌ಪೋರ್ಟ್ ಮಾಡಿಸಿಕೊಂಡಿದ್ದ. ಈ ಮೊದಲು ಪಾಸ್‌ಪೋರ್ಟ್ ಹೊಂದಿದ್ದ ಈತನಿಗೆ ಇಸಿಎನ್‌ಆರ್ ಪಾಸ್‌ಪೋರ್ಟ್ ಸಿಗದ ಕಾರಣಕ್ಕೆ, ನಕಲಿ ಆದಾಯ ಪ್ರಮಾಣ ಪತ್ರ ನೀಡಿ ಮತ್ತೆ ಪಾಸ್‌ಪೋರ್ಟ್ ಮಾಡಿಸಿಕೊಂಡಿದ್ದ. ಅಧಿಕಾರಿಗಳು ತಪಾಸಣೆ ನಡೆಸಿದ್ದ ವೇಳೆ, ಪಾಸ್‌ಪೋರ್ಟ್ ನಕಲಿ ಎಂಬುದು ದೃಢಪಟ್ಟಿತ್ತು. ಈ ಕುರಿತು ಶಿರಸಿ …
Read More »ನಿಮಗೆ ಜಂತು ಹುಳುಗಳ ಸಮಸ್ಯೆ ಇದ್ದರೆ ಈ ರೀತಿ ಮಾಡಿ
ಮಕ್ಕಳಿರಲೀ ದೊಡ್ಡವರಿರಲೀ, ಜಂತು ಹುಳುಗಳು ಸಾಮಾನ್ಯ. ಆದರೆ ಅವುಗಳ ಪರಿಹಾರಕ್ಕೆ ಔಷಧಿಯೇ ಆಗಬೇಕೆಂದೇನಿಲ್ಲ. ಮನೆಮದ್ದುಗಳೂ ತುಂಬಾ ಪರಿಣಾಮಕಾರಿ. ಪುಟ್ಟ ಮಕ್ಕಳಿಗೆ ಜಂತು ಹುಳುಗಳು ಕಂಡು ಬಂದರೆ ಜಂತು ಹುಳುವಿನ ಔಷಧಿ ಕುಡಿಸುತ್ತೇವೆ. ಆದರೆ ಇದು ದೊಡ್ಡವರಾದ ನಮಗೆ ಕೆಲಸ ಮಾಡುವುದಿಲ್ಲ. ಕೆಲವೊಂದು ಬಾರಿ ಡಬಲ್ ಡೋಸ್ ತೆಗೆದುಕೊಂಡರೂ ಅಷ್ಟೇನೂ ಪ್ರಯೋಜನ ಆಗುವುದಿಲ್ಲ. ತುಂಬಾ ಕಲುಷಿತ ಪ್ರದೇಶಗಳಲ್ಲಿ ವಾಸಿಸುವ ಜನರಲ್ಲಿ ಹೊಟ್ಟೆಯ ಹಾಗೂ ಕರುಳಿನ ಭಾಗದಲ್ಲಿ ಇಂತಹ ಹುಳುಗಳು ಸಾಮಾನ್ಯವಾಗಿ ಕಂಡು …
Read More »ಇಡೀ ರಾಜ್ಯಕ್ಕೇ ಪ್ರವಾಹ, ಮಳೆ ಇದ್ದರೆ ಚಿಕ್ಕಬಳ್ಳಾಪುರದಲ್ಲಿ ಮಾತ್ರ ಬರಗಾಲ!
ಇಡೀ ರಾಜ್ಯದಲ್ಲಿ ಯಥೇಚ್ಛ ಮಳೆಯಿಂದಾಗಿ ಅತಿವೃಷ್ಟಿಯಾಗುತ್ತಿದೆ. ಇದರಿಂದ ಕೃಷಿ ಚಟುವಟಕೆಗಳಿಗೆ ಕಷ್ಟವಾಗುತ್ತಿದೆ. ಆದರೆ ಚಿಕ್ಕಬಳ್ಳಾಪುರದಲ್ಲಿ ಮಳೆ ಇಲ್ಲದೆ ಕೃಷಿ ಕುಂಠಿತವಾಗಿದೆ. ಚಿಕ್ಕಬಳ್ಳಾಪುರ: ರಾಜ್ಯದ ಹಲವು ಭಾಗದಲ್ಲಿ ಯಥೇಚ್ಛ ಮಳೆಯಿಂದಾಗಿ ಅತಿವೃಷ್ಟಿಯಾಗುತ್ತಿದೆ. ಅತಿಯಾದ ಮಳೆ ಹಾಗೂ ಪ್ರವಾಹದಿಂದ ಜನಜೀವನ ತತ್ತರಿಸಿರುವ ಜತೆಗೆ ಕೃಷಿಗೂ ನಷ್ಟ ಉಂಟಾಗುತ್ತಿದೆ. ಆದರೆ ಇತ್ತ ಬಯಲುಸೀಮೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಳೆ ಅಭಾವದಿಂದ ಅನಾವೃಷ್ಟಿ ಉಂಟಾಗುವ ಆತಂಕ ಎದುರಾಗಿದೆ. ಜಿಲ್ಲೆಯಲ್ಲಿ ಕಳೆದ ಎರಡು ವಾರಗಳಿಂದ ಮಳೆ ಕಣ್ಮರೆಯಾಗಿದೆ. ಒಂದು ವಾರದಿಂದ ದೊಡ್ಡ ಮಟ್ಟದಲ್ಲಿಮೋಡಗಳು ಬರುತ್ತಿಯೆಯಾದರೂ, ಅಲ್ಲಲ್ಲಿ …
Read More »ಕೊರೊನಾ ವೈರಸ್ ಆತಂಕದ ನಡುವೆಯೇ ನಾಡಿನೆಲ್ಲೆಡೆ ಗೌರಿ ಹಬ್ಬದ ಸಂಭ್ರಮ
ಬೆಂಗಳೂರು : ಕೊರೊನಾ ವೈರಸ್ ಆತಂಕದ ನಡುವೆಯೇ ನಾಡಿನೆಲ್ಲೆಡೆ ಗೌರಿ ಹಬ್ಬದ ಸಂಭ್ರಮ ಕಳೆಗಟ್ಟಿದ್ದು, ಹೂ, ಹಣ್ಣು ತರಕಾರಿ ಖರೀದಿಯಲ್ಲಿ ಜನರು ಬ್ಯುಸಿಯಾಗಿದ್ದಾರೆ. ಬೆಲೆ ಏರಿಕೆಯ ನಡುವೆಯೂ ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಬಳ್ಳಾರಿ ಸೇರಿದಂತೆ ನಾಡಿನಾದ್ಯಂತ ಗೌರಿ ಹಬ್ಬದ ಸಂಭ್ರಮ ಜೋರಾಗಿದ್ದು, ಒಂದು ಮೊಳ ಮಲ್ಲಿಗೆ ಹೂವಿನ ಬೆಲೆ 40 ರೂ. ಇದ್ದರೆ, ಕನಕಾಂಬರ ದರ 50 ರೂ. ಬಿಡಿಹೂವು ಕೆಜಿಗೆ 400 ರಿಂದ 450 ರೂ. …
Read More »ವಿನಯ್ ಗುರೂಜಿ ಅವರು ಸೇವಿಸಿದ ಆಹಾರವನ್ನು ಪ್ರಸಾದವೆಂದು ಭಾವಿಸುತ್ತೇವೆ
ಬೆಂಗಳೂರು (ಆ.21): ಗುರುಗಳಲ್ಲಿ ಭಗವಂತನನ್ನು ಕಾಣುವುದರಿಂದ ವಿನಯ್ ಗುರೂಜಿ ಅವರು ಸೇವಿಸಿದ ಆಹಾರವನ್ನು ಪ್ರಸಾದವೆಂದು ಭಾವಿಸುತ್ತೇವೆ ವಿಧಾನಪರಿಷತ್ ಮಾಜಿ ಸದಸ್ಯ ಟಿ.ಎ.ಶರವಣ ತಿಳಿಸಿದ್ದಾರೆ. ವಿನಯ್ ಗುರೂಜಿ ಕುರಿತ ವಿಧಾನಪರಿಷತ್ ಸದಸ್ಯ ರಘು ಆಚಾರ್ ಹೇಳಿಕೆಯನ್ನು ಖಂಡಿಸಿರುವ ಶರವಣ, ತಮ್ಮ ಹಗುರವಾದ ಮಾತುಗಳಿಂದ ನನ್ನ ಮನಸ್ಸಿಗೆ ನೋವಾಗಿದೆ. ಇದು ನಿಮ್ಮ ಸ್ಥಾನಕ್ಕೆ ಶೋಭೆ ತರುವ ಮಾತಲ್ಲ ಎಂದು ತಿಳಿಸಿದ್ದಾರೆ. ಧಾರ್ಮಿಕ ನಂಬಿಕೆಗಳು ಜನರ ವೈಯಕ್ತಿಕ ವಿಚಾರಕ್ಕೆ ಮತ್ತು ಅವರವರ ಭಾವನೆಗಳಿಗೆ ಒಳಪಟ್ಟಿರುತ್ತದೆ. ಅವಧೂತ …
Read More »ಕರ್ನಾಟಕ ಭೂ ಸುಧಾರಣೆಗಳ (ತಿದ್ದುಪಡಿ) ಕಾಯ್ದೆ : ಹೈಕೋರ್ಟನಲ್ಲಿ ಸಾರ್ವಜನಿಕ ಹಿತಾಸಕ್ತಿ ಪ್ರಕರಣ
ಬೆಂಗಳೂರು: ರಾಜ್ಯದಲ್ಲಿ ಬಹು ಚರ್ಚಿತವಾಗುತ್ತಿರುವ ಕರ್ನಾಟಕ ಭೂ ಸುಧಾರಣೆಗಳ (ತಿದ್ದುಪಡಿ) ಕಾಯ್ದೆ ಸುಗ್ರೀವಾಜ್ಞೆ- 2020ನ್ನು ಅನೂರ್ಜಿತಗೊಳಿಸಬೇಕು ಎಂದು ಕೋರಿ ಹೈಕೋರ್ಟನಲ್ಲಿ ಸಾರ್ವಜನಿಕ ಹಿತಾಸಕ್ತಿ ಪ್ರಕರಣ ದಾಖಲಾಗಿದೆ. ಸಾಮಾಜಿಕ ಹೋರಾಟಗಾರ- ಪತ್ರಕರ್ತ ನಾಗರಾಜ ಹೊಂಗಲ್ ಅವರು ದಾಖಲಿಸಿರುವ ಮೊಕದ್ದಮೆಯ ವಿಚಾರಣೆಯನ್ನು ಗುರುವಾರ ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಶ್ರೀನಿವಾಸ ಎ ಓಕಾ ಮತ್ತು ಅಶೋಕ ಕಿಣಗಿ ಅವರನ್ನು ಒಳಗೊಂಡ ಪೀಠ ಈ ಬಗ್ಗೆ ಸೆಪ್ಟೆಂಬರ್ 18ರ ಒಳಗಾಗಿ ತನ್ನ ನಿಲುವನ್ನು ತಿಳಿಸುವಂತೆ ಸರಕಾರಕ್ಕೆ …
Read More »ಮನೆ ಮನೆಯಲ್ಲಿ ಗೌರಿ ಪೂಜೆ
ಚಿಕ್ಕಮಗಳೂರು: ಕರೊನಾ ಮತ್ತು ಮಳೆಹಾನಿಯಿಂದ ತೊಂದರೆಗೆ ಸಿಲುಕಿದ ಜನ ಈ ಬಾರಿ ಸಂಪ್ರದಾಯಕ್ಕಷ್ಟೇ ಗೌರಿ-ಗಣೇಶ ಹಬ್ಬ ಆಚರಿಸುತ್ತಿದ್ದಾರೆ. ಹಬ್ಬದ ಆಚರಣೆಗೆ ಗುರುವಾರ ಹೂವು, ಹಣ್ಣು, ಅಗತ್ಯ ಸಾಮಗ್ರಿ ಖರೀದಿಗೆ ಜನ ನಗರಕ್ಕೆ ಬಂದಿದ್ದರು. ಆದರೆ ಈ ಹಿಂದಿನ ಖರೀದಿ ಭರಾಟೆ ಇರಲಿಲ್ಲ. ನಗರದಲ್ಲಿ ಗ್ರಾಹಕರು ವಿರಳವಾಗಿದ್ದರು. ಶುಕ್ರವಾರ ಮನೆ ಮನೆಯಲ್ಲಿ ಗೌರಿ ಹಬ್ಬ ಆಚರಿಸಲಿದ್ದು, ಮುತೆôದೆಯರಿಗೆ ಬಾಗಿನ ನೀಡಲಿದ್ದಾರೆ. ನಗರಸಭೆ ಬೀದಿ ಬದಿ ಹೂವು-ಹಣ್ಣು, ಮಾವಿನ ಸೊಪ್ಪು, ಬಾಳೆಕಂದು, ಗೌರಿ ಪೂಜಾ …
Read More »
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News