
ಅಮೀನಗಡ: ಕಳೆದ ೧೨ ವರ್ಷಗಳಿಂದ ಶ್ರೀ ಶಾಂತಾದೇವಿ ಶಿಕ್ಷಣ ಸಂಸ್ಥೆಯಲ್ಲಿ ಹಾಗೂ ಈ ಹೋಟೆಲ್ ಸೇರಿದಂತೆ ಈ ಸಂಸ್ಥೆಯ ವಿವಿಧ ಶಾಖೆಯಲ್ಲಿ ೧೨ ಕಡೆ ಗಣೇಶನನ್ನು ಕೂಡಿಸಲಾಗುತ್ತದೆ. ಪ್ರತಿ ವರ್ಷವೂ ಕೂಡ ಬಹಳ ವಿಶೇಷವಾಗಿ ದೊಡ್ಡ ಗಣಪತಿಯನ್ನು ಸ್ಥಾಪಿಸಿ ನಿತ್ಯ ಪೂಜೆ ಹಾಗೂ ಈ ಹೋಟೆಲ್ ಗೆ ಬರುವ ಗ್ರಾಹಕರಲ್ಲಿ ಬಹಳ ವಿಶೇಷ ಧಾರ್ಮಿಕ ಶ್ರದ್ದಾ ಭಕ್ತಿ ಮೂಡುವ ಹಾಗೆ ಸದಾ ವಿಜ್ರಂಬಿಸುವ ಈ ಗಣೇಶನನ್ನು ನೋವುದೇ ಒಂದು ವಿಶೇಷ,
ಈ ಗಣಪತಿ ವಿಸರ್ಜನೆಯ ನಿಮಿತ್ತವಾಗಿ ಅಮೀನಗಡ ನಗರದ ಕಲ್ಮನಾ ರಾಜ್ ಮೆಲೊಡಿಸ್ ಇವರಿಂದ ಭಕ್ತಿ ಸಿಂಚನ ರಸಮಂಜರಿ ಕಾರ್ಯಕ್ರಮವನ್ನು ಮಧ್ಯಾಹ್ನ ೨ ಗಂಟೆಗೆ ಹಮ್ಮಿಕೊಳ್ಳಲಾಗಿದೆ.


ನಗರದ ಎಲ್ಲಾ ಸದ್ಬಕ್ತರು ಈ ಗಣೇಶ ವಿಸರ್ಜನೆ ಧಾರ್ಮಿಕ ಕಾರ್ಯಕ್ರಮಕ್ಕೆ ತಮ್ನೆಲ್ಲರಿಗೂ ಆತ್ಮೀಯ ಸ್ವಾಗತವನ್ನು ಈ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ: ಪ್ರಶಾಂತ್ ನಾಯಕ್ ಅವರು ಹಾಗೂ ಅಧ್ಯಕ್ಷರಾದ ಶ್ರೀಮತಿ ಶಾಂತಾದೇವಿ ನಾಯಕ್ ಅವರು ಶ್ರೀಮತಿ ಡಾ: ಸರಸ್ವತಿ ನಾಯಕ್ ಹಾಗೂ ಶ್ರೀಮತಿ ಡಾ: ಕಾವೇರಿ ನಾಯಕ್ ಅವರು ಸ್ವಾಗತ ಕೋರಿದರು. ನಗರದ ಎಲ್ಲ ಸಂಘ ಸಂಸ್ಥೆಗಳ ಆಡಳಿತ ಮಂಡಳಿ & ಪೋಲಿಸ್ ಇಲಾಖೆ ಹಾಗೂ ನಗರದ ಎಲ್ಲಾ ಪ್ರಮುಖರು ಭಾಗವಹಿಸಿ
ಗಣಪತಿಯವ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಸರ್ವರಿಗೂ ಹಾರ್ದಿಕ ಸ್ವಾಗತವನ್ನು ಶ್ರೀ ಹರಿಶ್ಚಂದ್ರ ನಾಯಕ್, ಶ್ರೀ ವೆಂಕಟೇಶ ನಾಯಕ್, ಶ್ರೀಮತಿ ರೇಣುಕಾ ನಾಯಕ್, ಶ್ರೀಮತಿ ಮಂಜುಳಾ ನಾಯಕ, ಹಾಗೂ ಅಮೀನಗಡ ಶ್ರೀ ಶಾಂತಾದೇವಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಪರವಾಗಿ ಸರ್ವರಿಗೂ ಹಾರ್ದಿಕ ಸ್ವಾಗತ ಕೋರಿದರು.


Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News