
ಹುಬ್ಬಳ್ಳಿ : ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಹಿತಿ ಡಾ. ಸಂಗಮೇಶ ಹಂಡಿಗಿ ಅವರ ಸ್ಮರಣೆಯಲ್ಲಿ ಡಾ. ಸಂಗಮೇಶ ಹಂಡಿಗಿ ಸಾಹಿತ್ಯ ಪ್ರತಿಷ್ಠಾನ ನೀಡುವ ೨೦೨೫ ನೇ ಸಾಲಿನ ರಾಜ್ಯಮಟ್ಟದ “ಸಂಗಮಸಿರಿ” ಪ್ರಶಸ್ತಿಗೆ ‘ಶರಣರು ಹಾಗೂ ವಚನ ಸಾಹಿತ್ಯ’ದ ಪೂರಕ ಕೃತಿಗಳಿಗೆ

ಆಹ್ವಾನ ನೀಡಲಾಗಿದೆ. ಉತ್ತಮ ಸಾಹಿತ್ಯ ಹಾಗೂ ,ಕೃತಿಗಳು ಹಾಗೂ ಅದ್ಬುತ ಲೇಖಕರಿಗೆ ಈ ವರ್ಷದ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ. ಈ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರು ತಮ್ಮ ಮಾಹಿತಿಯನ್ನು ಹಾಗೂ ಸಾಹಿತ್ಯದ ವಿವರಗಳನ್ನು ಅಕ್ಟೋಬರ್ ೧೫ ರ ಒಳಗೆ ಡಾ. ಸಂಗಮೇಶ ಹಂಡಿಗಿ ಸಾಹಿತ್ಯ ಪ್ರತಿಷ್ಠಾನ, ಮನೆ ನಂಬರ್ ೩೩೮, ಬಸವ ಬನಸಿರಿ, ಗೋಕುಲ್ ರಸ್ತೆ ಹುಬ್ಬಳ್ಳಿ ೫೮೦೦೩೦.ಗೆ ಕಳಿಸಲು ಪ್ರತಿಷ್ಠಾನದ ಅಧ್ಯಕ್ಷ ಜಿ. ಬಿ. ಗೌಡಪ್ಪಗೊಳ, ಗೌರವಾಧ್ಯಕ್ಷ ಗಣಪತಿ ಗಂಗೊಳ್ಳಿ ,ಸಂಯೋಜಕ ಡಾ. ಪ್ರಭು ಗಂಜಿಹಾಳ ತಿಳಿಸಿದ್ದಾರೆ. ಪ್ರಶಸ್ತಿಯು ೧೦ ಸಾವಿರ ರೂ.ನಗದು ಹಾಗೂ ಫಲಕ ಹೊಂದಿದೆ. ಮಾಹಿತಿಗೆ ಮೋ. ೯೦೬೦೯೩೩೫೯೬, ೯೯೮೬೪ ೭೬೭೩೩ ಗೆ ಸಂಪರ್ಕಿಸಬಹುದು.
ಡಾ.ಪ್ರಭು ಗಂಜಿಹಾಳ
ಮೊ: ೯೪೪೮೭೭೫೩೪೬

Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News