ಚಿಕ್ಕಮಗಳೂರು: ಮದುವೆಯೆನ್ನುವುದು ಸ್ವರ್ಗದಲ್ಲಿಯೇ ಆಗುತ್ತದೆ ಎನ್ನುತ್ತಾರೆ. ಆದರೆ ಚಿಕ್ಕಮಗಳೂರಿನಲ್ಲಿ ನಡೆದ ಮದುವೆ ಮಾತ್ರ ಎಲ್ಲಿಂದ ನಿಶ್ಚಯ ಆಗಿರುವುದೋ ತಿಳಿದಿಲ್ಲ.
ಏಕೆಂದರೆ ಇಲ್ಲಿಯ ವಧು 38 ವರ್ಷದ ಆಂಟಿ ಹಾಗೂ ವರ 22 ವರ್ಷದ ಯುವಕ. ಇದೇನೂ ಅಪರೂಪದ ವಿಷಯವಲ್ಲ ಬಿಡಿ. ಖುದ್ದು ಪ್ರಿಯಾಂಕಾ ಛೋಪ್ರಾ ತನಗಿಂತ 11 ವರ್ಷ ಚಿಕ್ಕವನನ್ನು ಮದುವೆಯಾಗಿರುವಾಗಿ ಇದೇನು ಅಪರೂಪವಲ್ಲ ಎನ್ನಬಹುದು. ಆದರೆ ಇಲ್ಲಿಯ ಕೇಸ್ ಸ್ವಲ್ಪ ಡಿಫರೆಂಟ್ ಇದೆ.
38 ವರ್ಷದ ಪ್ರಿಯಾಳಿಗೆ ಇದು ಆರನೇ ಮದುವೆ. ಇದಾಗಲೇ ಐದು ಮಂದಿಯನ್ನು ವರಿಸಿ, ಪ್ರೀತಿಸಿ, ಮದುವೆಯಾಗಿ ನಂತರ ಒಬ್ಬಾರದ ಮೇಲೊಬ್ಬರನ್ನು ಬಿಟ್ಟು ಆರನೆಯವನಿಗಾಗಿ ಹುಡುಕಾಟ ನಡೆಸಿದ್ದಾಗ ಸಿಕ್ಕಿದವನು 22 ವರ್ಷದ ಚಂದ್ರು.
ಈಕೆ 2 ಮಕ್ಕಳ ತಾಯಿ, ಐದು ಮಂದಿಯ ಮಾಜಿ ಹೆಂಡತಿಯಾಗಿದ್ದರೂ, ಈಕೆಯೇ ತನಗೆ ಬೇಕು ಎಂದು ಪಟ್ಟು ಹಿಡಿದಿರುವ ಚಂದ್ರು ಇದೀಗ ಪ್ರಿಯಾಳ ಜತೆ ಸಂಸಾರ ಶುರು ಮಾಡಿದ್ದಾನೆ.
ಹಿಂದೆ ಮದುವೆಯಾದವರೆಲ್ಲರೂ ತನಗೆ ಹಿಂಸೆ ಕೊಡುತ್ತಿದ್ದರು. ಆದ್ದರಿಂದ ಎಲ್ಲರನ್ನೂ ಬಿಟ್ಟಿದ್ದೇನೆ. ಚಂದ್ರು ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ ಎನ್ನುವ ಭರವಸೆ ಇದೆ ಎಂದು ಪ್ರಿಯಾ ಹೇಳಿದ್ದಾಳೆ.
ಇತ್ತ ಚಂದ್ರು ಅಪ್ಪ-ಅಮ್ಮನಿಲ್ಲದ ಅನಾಥ. ಅಕ್ಕನೇ ಸಾಕಿದ್ದಾರೆ. ಪ್ರಿಯಾಳನ್ನು ಮದುವೆಯಾಗಬೇಡ ಎಂದು ಎಷ್ಟು ಬುದ್ಧಿ ಹೇಳಿದರೂ ಚಂದ್ರು ಕೇಳಲಿಲ್ಲವಂತೆ. ತನ್ನ ಹೊಸ ಹೆಂಡತಿಯ ಬಗ್ಗೆ ಚಂದ್ರು ಹೇಳುವುದು ಹೀಗೆ: ‘ಪ್ರಿಯಾ ನಮ್ಮ ಮನೆ ಪಕ್ಕದಲ್ಲೇ ರೂಂ ಮಾಡಿಕೊಂಡಿದ್ದಳು. ಒಂದು ತಿಂಗಳಿಂದ ಲವ್ ಮಾಡ್ತಿದ್ವಿ.
ನನಗೆ ಇವಳು ತುಂಬಾನೇ ಇಷ್ಟ ಆಗಿದ್ದಾಳೆ. ನಾನೇ ಇಷ್ಟಪಟ್ಟು ಮದ್ವೆ ಆಗಿರೋದು, ಈಕೆಗೊಂದು ಬಾಳು ಕೊಡ್ತೀನಿ. ನಾನು ಈಕೆಯನ್ನು ಬಿಡುವುದಿಲ್ಲ. ಚೆನ್ನಾಗಿ ಸಂಸಾರ ಮಾಡ್ತೀವೆ’ ಅಂದಿದ್ದಾನೆ.
ತನ್ನ ಹಿಂದಿನ ಗಂಡಂದಿರೆಲ್ಲಾ ಹಿಂಸ ಕೊಡ್ತಿದ್ದರು ಎಂದು ಪ್ರಿಯಾ ಹೇಳಿದ್ದರೂ, ಐವರು ಗಂಡಂದಿರು ಮಾತ್ರ ಈಕೆಯ ಮೇಲೆ ಸಿಕ್ಕಾಪಟ್ಟೆ ಆರೋಪ ಮಾಡಿದ್ದಾರೆ. ಇವಳ ಕೆಲಸವೇ ಮದುವೆಯಾಗುವುದು, ಸಿಕ್ಕದ್ದನ್ನು ದೋಚುವುದು. ಗಂಡನ ಆಸ್ತಿಯಲ್ಲಿ ಪಾಲು ಕೇಳ್ತಾಳೆ ಎಂದು ಒಬ್ಬ ಅಂದಿದ್ದರೆ, ಮನೆಯಿಂದ 40 ಗ್ರಾಂ ಚಿನ್ನದ ಸರ ಕದ್ದಿದ್ದಾಳೆಂದು ಎರಡನೇ ಗಂಡ ದೂರು ದಾಖಲಿಸಿದ್ದಾನೆ.