
ಅಮೀನಗಡ : ಹುನಗುಂದ ತಾಲೂಕಿನ ಅಮೀನಗಡ ನಗರದ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ೩೪ ಹಳ್ಳಿಗಳನ್ನು ಒಳಗೊಂಡ ಈ ಠಾಣೆಯ ವ್ಯಾಪ್ತಿಯಲ್ಲಿ ಅನೇಕ ರೌಡಿ ಶೀಟರ್ ಗಳು MOB ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳನ್ನು ಬಕ್ರೀದ್ ಹಬ್ಬದ ನಿಮಿತ್ತವಾಗಿ ಮುಂಜಾಗ್ರತೆ ಸಲುವಾಗಿ ಅವರ ಚಲನವಲನ ಹಾಗೂ ಅವರ ಸಧ್ಯದ ಕಾರ್ಯ ಚಟುವಟಿಕೆಗಳನ್ನು ಪಡೆದು ಉತ್ತಮ ಜೀವನ ನಡೆಸಲು ಸಲಹೆ ಹೇಳಿದರು ರೌಡಿ ಶೀಟರ್ ಗಳು ತಾವು ಬದಲಾಗಬೇಕು ಮೊದಲಿನಂತೆ ತಾವು ಈಗಲೂ ಅದೇ ಚಾಳಿ ಮುಂದುವರಿಸಿದರೆ ನಿಮ್ಮ ಬಾಲ ಹೇಗೆ ಕಟ್ ಮಾಡಬೇಕು ಅಂತ ಗೊತ್ತು ಬಹಳ ಎಚ್ಚರಿಕೆಯಿಂದ ಈ ಸಮಾಜದಲ್ಲಿ ತಾವು ಸಹ ಬಾಳ್ವೆ ಮಾತ್ರ ಬೇಕು ಎಂದು PSI ಮಲ್ಲಿಕಾರ್ಜುನ ಕುಲಕರ್ಣಿ ಹೇಳಿದರು ,ಉತ್ತಮ ಜೀವನ ಮಾಡಿ ಈ ಸಮಾಜಕ್ಕೆ ತಮ್ಮ ಬದಲಾವಣೆ ಮಾದರಿ ಆಗಬೇಕು ಅಂತವರನ್ನು ಎಷ್ಟೊ ಮಂದಿಯನ್ನು ನಾನು ಗದಗದಲ್ಲಿ ಈ ರೌಡಿ ಶೀಟ್ ಪಟ್ಟಿಯಿಂದ ತಗೆದು ಹಾಕಿದಿನಿ ಎಂದರು.

ಇತ್ತಿಚ್ಚಿಗೆ ಹುನಗುಂದ ತಾಲೂಕಿಗೆ ಹೊಸದಾಗಿ ಬಂದ CPI ಹೊಸಕೇರಪ್ಪ ಅವರು ಎಲ್ಲಾ ರೌಡಿ ಶೀಟರ್ ಹಾಗೂ MOB ಆರೋಪಿತರನ್ನು ಉದ್ದೇಶಿಸಿ ತಾವು ಬದಲಾದರೆ ಒಳ್ಳೆಯದು ನಾವು ತಮಗೂ ಉತ್ತಮ ಜೀವನ ಕಲ್ಪಿಸಲು ಸಹಕಾರ ನೀಡುತ್ತೇವೆ, ನಿಮ್ಮ ಉತ್ತಮ ನಡುವಳಿಕೆ ಗುರುತ್ತಿಸಿ ಈ MOB ಕಾಡ್೯ ಹಾಗೂ ರೌಡಿ ಶೀಟ್ ನಿಂದ ಕಿತ್ತು ಹಾಕುತ್ತೇವೆ ತಾವು ನಿತ್ಯ ಏನ್ ಮಾಡುತ್ತಿರಿ? ಎಲ್ಲಿ ಹೋಗುತ್ತಿರಿ ನಿಮ್ಮ ಎಲ್ಲಾ ಚಟುವಟಿಕೆಗಳನ್ನು ಬಹಳ ಸೂಕ್ಷ್ಮವಾಗಿ ನಮ್ಮ ಇಲಾಖೆ ಗಮನಿಸಿ ,ತಮ್ಮ ಮೇಲೆ ಹದ್ದಿನ ಕಣ್ಣಿಟ್ಟಿದೆ . ತಾವು ಈ ಬರುವ ಬಕ್ರೀದ್ ಹಬ್ಬ ಬಹಳ ಶಾಂತಿಯುತವಾಗಿ ನಡೆಯಬೇಕು. ತಾವು ಈ ಸಮಾಜದ ಶಾಂತಿ ಕಾಪಾಡಬೇಕು ಅಂತಹ ಅಹೀತಕರ ಘಟನೆಗಳನ ಮಾಡಲು ಯಾರಾದರೂ ಪ್ರಚೋದನೆ ಮಾಡುವವರು ಕಂಡುಬಂದರೆ ತಾವು ನಮ್ಮ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಸಹಕರಿಸಬೇಕು ಎಂದು CPI ಹೊಸಕೇರಪ್ಪ ಕೆ ಅವರು ಖಡಕ್ ವಾನ್೯ ಮಾಡಿದರು. ಈ ಸಂಧರ್ಭದಲ್ಲಿ ಎಲ್ಲಾ ರೌಡಿ ಶೀಟರ್ ಹಾಗೂ MOB ಆರೋಪಿತರು ಹಾಜರಿದ್ದರು.CPI ಹೊಸಕೇರಪ್ಪ ಕೆ ಹಾಗೂ PSI ಮಲ್ಲಿಕಾರ್ಜುನ ಕುಲಕರ್ಣಿ ಹಾಗೂ ಸಿಬ್ಬಂದಿ ಬಸವರಾಜ ಲಿಂಗದೋಳಿ ಎಲ್ಲಾ ಆರೋಪಿತರಿಗೆ ವಿಚಾರಿಸಿದರು.