ನಮಸ್ತೆ ಸ್ನೇಹಿತರೆ, ಮಹಿಳೆಯರಿಗೆ ರಾತ್ರಿ ಸಮಯದಲ್ಲಿ ಅನಾನುಕೂಲ ಆಗುವಂತಹ ಘಟನೆಗಳು ಪ್ರತಿದಿನ ನಡೆಯುತ್ತಲೇ ಇರುತ್ತವೆ.. ಆಗ ಎಲ್ಲರೂ ಕೇಳುವ ಪ್ರಶ್ನೆ ಒಂದೇ ಪೋಲಿಸರು ಏನು ಮಾಡ್ತಾಯಿದ್ದಾರೆ ಎಂದು. ಇನ್ನೂ ಈ ಪ್ರಶ್ನೆಗೆ ಉತ್ತರ ಹುಡುಕಲು ಹೊರಟ ಒಬ್ಬ ಮಹಿಳಾ DCP ರಾತ್ರಿ ವೇಳೆಯಲ್ಲಿ ಸಾಮಾನ್ಯ ಮಹಿಳೆಯಂತೆ ಎಲ್ಲಾ ಸ್ಥಳಗಳಲ್ಲಿ ಸುತ್ತಾಡುತ್ತಾರೆ.. ಹೌದು ಕೇರಳ ರಾಜ್ಯದ ಕ್ಯಾಲಿಕಟ್ ನಗರದ DCP ಯಾಗಿ ಕೆಲಸ ಮಾಡುತ್ತಿರುವ ಮೇರಿ ಜೋಸೆಫ್ ರಾತ್ರಿ ವೇಳೆ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳು ಏನು ಎಂಬುದನ್ನು ತಿಳಿದುಕೊಳ್ಳಲು ಒಂದು ಪ್ಲಾನ್ ಮಾಡುತ್ತಾರೆ..

ಇದರ ಪ್ರಕಾರ ಯಾರಿಗೂ ಗೊತ್ತಾಗದಂತೆ DCP ಮೇರಿ ಜೊಸೆಫ್ ಹಾಗೂ ಇಬ್ಬರು ಮಹಿಳಾ ಪೇದೆಗಳು ಸಾಮಾನ್ಯ ಬಟ್ಟೆ ಧರಿಸಿ ಕ್ಯಾಲಿಕಟ್ ನ ಹಲವು ಬೀದಿಗಳಲ್ಲಿ ಮಧ್ಯರಾತ್ರಿಯಲ್ಲಿ ಸುತ್ತಾಡುತ್ತಾರೆ.. ಈ ಪ್ರಯತ್ನದ ಭಾಗವಾಗಿ ರಾತ್ರಿ ಸುಮಾರು 9.30 ಕ್ಕೆ ಸೌಮ್ಯ ಮತ್ತು ಸವಿತಾ ಹೆಸರಿನ ಮಹಿಳಾ ಪೋಲಿಸರು ಸಾಮಾನ್ಯ ಮಹಿಳೆಯರಂತೆ ಬಟ್ಟೆ ಧರಿಸಿ ಹಲವು ಬೀದಿಗಳಲ್ಲಿ ಸುತ್ತಾಡುತ್ತಾರೆ.. ಬೇಬಿ ಮೆಮೊರಿಯಲ್ ಆಸ್ವತ್ರೆ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಬೈಕ್ ನಲ್ಲಿ ಬಂದ ಯುವಕರು ಕೆಟ್ಟ ಬಾಷೆ ಮಾತನಾಡುತ್ತಾ ನಮ್ಮ ಜೊತೆ ಬರುತ್ತೀಯಾ ಎಂದು ಕೇಳುತ್ತಾರೆ.

ರಾತ್ರಿ 11.45 ಕ್ಕೆ ಸಾಮಾನ್ಯ ಬಟ್ಟೆ ಧರಿಸಿ ಒಂದು ಬಸ್ ಸ್ಟಾಂಡ್ ನಲ್ಲಿ ನಿಂತ DCP ಮೇರಿ ಜೋಸೆಫ್ ಗೆ ಅಲ್ಲಿ ಯಾವ ಮಹಿಳೆಯರು ಕಾಣಿಸಲಿಲ್ಲ.. ಎಲ್ಲಾ ಯುವಕರೆ ಇದ್ದರು.. ಹಗಲಿನಲ್ಲಿ ತುಂಬಾ ಬ್ಯುಸಿ ಇರುತ್ತಿದ್ದ ಸ್ಟ್ರೀಟ್ ನಲ್ಲಿ ಮೇರಿ ಜೊಸೆಫ್ ನಡೆದುಕೊಂಡು ಹೋಗುವಾಗ ವಾಹನಗಳನ್ನು ಸ್ಲೋ ಮಾಡುತ್ತಿದ್ದ ಜನ ಅವರನ್ನೇ ದಿಟ್ಟಿಸಿ ನೋಡುತ್ತಿದ್ದರು.. ನಂತರ ಒಂದು ಬಸ್ ಸ್ಟಾಂಡ್ ನಲ್ಲಿ ನಿಂತುಕೊಂಡಿದ್ದ DCP ಮೇರಿ ಜೊಸೆಫ್ ಅವರನ್ನು ಅಲ್ಲಿದ್ದ ಕೆಲವರು ಕೆಟ್ಟ ಪದಗಳನ್ನು ಬಳಸಿ ಚುಡಾಯಿಸುತ್ತಾರೆ.

ಈಗೆ ಬೀದಿ ಎಲ್ಲಾ ನಗರಗಳಲ್ಲಿ ಹಾಗೂ ಸಮುದ್ರ ದಡದ ಸ್ಥಳಗಳಲ್ಲಿ ಸುತ್ತಾಡಿದ ಮೇರಿ ಜೋಸೆಫ್ ಗೆ ಕೆಟ್ಟ ಅನುಭವ ಆಗುತ್ತದೆ.. ರಾತ್ರಿ ಹೊತ್ತು ಮಹಿಳೆಯರು ಕಾಣಿಸಿದಾಗ ಕೆಟ್ಟ ರೀತಿ ನಡೆದುಕೊಂಡರೇ ಹೊರತು ನೀನು ಯಾರು, ಯಾಕೆ ಇಲ್ಲಿ ಇದ್ದೀಯಾ ಎಂದು ಯಾರು ಕೇಳಲಿಲ್ಲ.. ಆದರೆ ಒಂದು ಪ್ರದೇಶದಲ್ಲಿ DCP ಮೇರಿ ಜೋಸೆಫ್ ಕೂತಿದ್ದಾಗ ಅಲ್ಲಿಗೆ ಬಂದ ಪೆಟ್ರೋಲ್ ಪೋಲಿಸ್ ಯಾರು ನೀನು, ಏನಾದರೂ ಸಹಾಯ ಬೇಕಾ ಎಂದು ಕೇಳಿದ್ದಾರೆ..

ಆದರೆ DCP ಯನ್ನು ಆ ಪೋಲಿಸರು ಗುರುತಿಸಲಿಲ್ಲ. ಈಗೆ ನೇರವಾಗಿ ಮಹಿಳೆಯರಿಗೆ ಯಾವ ರೀತಿ ಕೆಟ್ಟ ಅನುಭವ ಆಗುತ್ತಿದೆ ಹಾಗೂ ಯಾವ ಪ್ರದೇಶಗಳು ಮಹಿಳೆಯರಿಗೆ ಸುರಕ್ಷಿತವಲ್ಲ ಎಂದು ರಾತ್ರಿಯಿಡೀ ನೋಡಿದ DCP ಮೇರಿ ಜೋಸೆಫ್ ಮರುದಿನವೇ ಆ ಸ್ಥಳಗಳಿಗೆ ಪೋಲಿಸರನ್ನು ನೇಮಿಸುತ್ತಾರೆ.. ಹಾಗೆ ಆ ಏರಿಯಾಗಳ ಬೀದಿ ದೀಪಗಳು ಸರಿಯಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಂಡರು. ಎಲ್ಲಾ ಪೋಲಿಸ್ ಆಫಿಸರ್ ಗಳು ಈ ರೀತಿ ಇದ್ದರೆ ಎಷ್ಟು ಅನುಕೂಲ ಆಗುತ್ತಿತ್ತು ಅಲ್ವಾ.. DCP ಮೇರಿ ಜೋಸೆಫ್ ಅವರ ಕೆಲಸ ನಿಮಗೆ ಇಷ್ಟವಾಗಿದ್ದರೆ ಅವರ ಬಗ್ಗೆ ಒಂದು ಅನಿಸಿಕೆ ತಿಳಿಸಿ.