ಕೂಡಲಸಂಗಮದ ವಿದ್ಯುತ್ ಪ್ರಸರಣ ನಿಗಮದಲ್ಲಿ ಇಂದು 1 ಹೆಣ್ಣು ಮಂಗ ವಿದ್ಯುತ್ ತಂತಿಯಲ್ಲಿ ಹರಿಯುತ್ತಿರುವ ವಿದ್ಯುತ್ ಲೆಕ್ಕಿಸದೆ ತಂತಿಯಲ್ಲಿ ಜೋತು ಬಿದ್ದು ಒದ್ದಾಡ್ಡಿ ಸಾವನಪ್ಪಿದೆ ಸ್ಥಳದಲಿದ್ದ ಕ ,ವಿ, ಪ್ರ, ನಿ, ನಿ, ಅಧಿಕಾರಿಗಳು ಬಚಾವ್ ಮಾಡಲು ಯತ್ನಿಸಿದರು, ಬಿದಿರಿನ ಕೋಲು ತಂದು ಬಿಡಿಸಲು ಯತ್ನಿಸಿದರೂ ಫಲ ನೀಡಲಿಲ್ಲ. ನಂತರ ವಿದ್ಯುತ್ ಸ್ಥಗಿತಗೊಳಿಸಿ ಲೈನ್‌ಮೆನ್‌ಗಳ ಸಹಾಯದಿಂದ ಮಂಗವನ್ನು ತಂತಿಯಿಂದ ಬಿಡಿಸಲಾಯಿತು,

ಆದರೂ ಅಷ್ಟರಲ್ಲೇ ಅದು ಕೊನೆಯುಸಿರೆಳೆದಿದೆ. ಪ್ರಾಣತೆತ್ತ ಮಂಗದ ಜತೆ ಆಗಮಿಸಿದ್ದ ಇತರ ಮಂಗಗಳ ಚೀರಾಟ ಹೃದಯ ಕಲಕುವಂತಿತ್ತು ಸತ್ತ ಮಂಗನ ಅಂತ್ಯವನ್ನು ವಿಧಿ ವಿಧಾನಗಳ ಮೂಲಕ ಮಾಡಲಾಯಿತು, ಸತ್ತ ಮಂಗವನ್ನು ಶಾಸ್ತ್ರೋಕ್ತವಾಗಿ ಹೆಸ್ಕಾಂ ಅಧಿಕಾರಿಗಳು ನೆರವೇರಿಸಿದರು.

ಸತ್ತ ಮಂಗವನ್ನು ಸ್ನಾನ ಮಾಡಿಸಿ ಹೂವಿನ ಶೃಂಗಾರ ಮಾಡಿ ನಂತರ ಬಟ್ಟೆಹಾಕಿ ಮಂಗವನ್ನು ಅಲಂಕಾರ ಮಾಡಿ ಮೆರವಣಿಗೆಯಲ್ಲಿ ಕೊಂಡೊಯ್ದು ಹೆಸ್ಕಾಂ ಕಚೇರಿಯ ಮುಂದೆ ಅಂತ್ಯಸಂಸ್ಕಾರ ನೆರವೇರಿಸಿದರು. ಆ ಸಂದರ್ಭದಲ್ಲಿ ಹೆಸ್ಕಾಂ ಅಧಿಕಾರಿಗಳಾದ ಸಂಗಮೇಶ ಮುರನಾಳ, ಶಿವು ಕಾಳಗಿ, ಸುರೇಶ, ಮುತ್ತು, ಬಸವರಾಜ, ಮಂಜು, ಸಂಗಪ್ಪ ಅನೇಕ ಜನರು ಇದ್ದರು,