ನವದೆಹಲಿ: ಸಿಎಎ ವಿರೋಧಿಸಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಸಿರುವ ದೆಹಲಿ ಪೊಲೀಸರು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ಸ್ವರಾಜ್ ಅಭಿಯಾನ್ ನಾಯಕ ಯೋಗೇಂದ್ರ ಯಾದವ್ ಸೇರಿ ಹಲವರ ಹೆಸರು ಸೇರಿಸಿದೆ.
ಸಿಎಎ ವಿರೋಧಿಸಿ 2020 ರ ಫೆಬ್ರವರಿ ತಿಂಗಳಲ್ಲಿ ಈಶಾನ್ಯ ದೆಹಲಿಯಲ್ಲಿ ವ್ಯಾಪಕ ಪ್ರತಿಭಟನೆ ನಡೆದಿತ್ತು. ಈ ಪ್ರಕರಣದಲ್ಲಿ ಯೆಚೂರಿ, ಯೋಗೇಂದ್ರ ಯಾದವ್, ಅರ್ಥಶಾಸ್ತ್ರಜ್ಞರಾದ ಜಯತಿ ಘೋಷ್, ದೆಹಲಿ ವಿವಿ ಪ್ರಾಧ್ಯಾಪಕ, ಕಾರ್ಯಕರ್ತ ಅಪೂರ್ವಾನಂದ್ ಹಾಗೂ ಡಾಕ್ಯುಮೆಂಟರಿ ಫಿಲ್ಮ್ ಮೇಕರ್ ರಾಹುಲ್ ರಾಯ್ ಹೆಸರು ಸಹ ಸೇರಿಸಲಾಗಿದೆ
ಇವರು ಸಿಎಎ ಪ್ರತಿಭಟನಾ ನಿರತರಿಗೆ ಸಿಎಎ ವಿರೋಧಿಸಲು ‘ಯಾವುದೇ ಮಟ್ಟಕ್ಕೆ’ ಹೋಗುವಂತೆ ಹೇಳಿದ್ದರು ಎಂದು ಚಾರ್ಜ್ ಶೀಟ್ ನಲ್ಲಿ ದಾಖಲಿಸಲಾಗಿದೆ.
ದೆಹಲಿಯಲ್ಲಿ ನಡೆದ ಗಲಭೆಯಲ್ಲಿ ಫೆ.23-26 ವರೆಗೆ 53 ಜನರು ಸಾವನ್ನಪ್ಪಿದ್ದು 581 ಜನರಿಗೆ ಗಾಯವಾಗಿತ್ತು, 97 ಜನರಿಗೆ ಗುಂಡೇಟು ತಗುಲಿತ್ತು.
Bayalu Birugali – BB News BB News I Kannada Breaking News | Kannada Latest News | News Updates | Political News Updates – Bayalu Birugali News