Breaking News
ಐಹೊಳ್ಳೆಯ ಮಯೂರ ಹೋಟೆಲ್ ನಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ-೨೦೨೫

ಐಹೊಳ್ಳೆಯ ಮಯೂರ ಹೋಟೆಲ್ ನಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ-೨೦೨೫

ಅಮೀನಗಡ : ಸಮೀಪದ ಐಹೊಳೆ ಗ್ರಾಮದಲ್ಲಿ ಇಂದು ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಆಚರಿಸಲಾಯಿತು. ಜಿಲ್ಲಾಡಳಿತ ಜಿಲ್ಲಾ ಪಂಚಾಯತ ಹಾಗೂ ಪ್ರವಾಸೋದ್ಯಮ ಇಲಾಖೆ ಬಾಗಲಕೋಟೆ ೨೦೨೫ ಇವರ ಸಹಯೋಗದೊಂದಿಗೆ ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಜಿಲ್ಲಾಧಿಕಾರಿ ಸಂಗಣ್ಣ ಅವರು ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಅವರು ಇಂದು ವಿಶ್ವ ಪ್ರವಾಸೋದ್ಯಮ ದಿನಾಚರಣೆ ಶುಭಾಶಯ ಕೋರುತ್ತಾ ಐಹೊಳೆ ಗ್ರಾಮದಲ್ಲಿ ಇರುವಂತಹ ಈ ಸುಂದರ ವಾಸ್ತುಶಿಲ್ಪದ ಕೆತ್ತನೆಯು ಪ್ರವಾಸಿಗರನ್ನು ದೇಶ ವಿದೇಶದಿಂದ ಬರುವಂತೆ ಮಾಡಿದೆ, ಮುಂದಿನ ನಮ್ಮ ಫೀಳಿಗೆಗೆ ಇತಿಹಾಸದ ಮಾಹಿತಿ ನೀಡಲು ಇವುಗಳ ಸಂಸಕ್ಷಣೆ ನಮ್ಮ ನಿಮ್ಮೆಲ್ಲರ ಹೊಣೆಯಾಗಿದೆ.

ಸಾಧ್ಗವಾದಷ್ಟು ಈ ಗ್ರಾಮದ ಸ್ಥಳಾಂತರ ಪ್ರಕ್ರಿಯೆ ಸಧ್ಯದಲ್ಲಿ ಹಂತ ಹಂತವಾಗಿದೆ. ನಡೆಯಲಿದೆ. ಗ್ರಾಮದ ಪ್ರಮುಖರು,& ಸ್ಥಳೀಯರು ಸಹಕಾರ ನೀಡುವಂತೆ ಮನವಿ ಮಾಡಿದರು.

ನಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ರಾಜ್ಯ ಸಭಾ ಸದಸ್ಯ ಶ್ರೀ ನಾರಾಯಣಸಾ ಭಾಂಡಗೆ ಅವರು ಮಾತನಾಡಿ ಇತ್ತಲು ಗಿಡ ಯಾವತ್ತೂ ಮದ್ದಲ್ಲ ,ಹಾಗೆ ಪಕ್ಕದಲ್ಲಿ ಇರುವ ನಮಗೆ ಇತಿಹಾಸ ಅರಿಯಲು ನಾವು ವಿಫಲರಾಗಿದ್ದೇವೆ. ದೇಶ – ವಿದೇಶದಿಂದ ಅಧ್ಯಯನ ಮಾಡಲು ಪ್ರವಾಸಿಗರು ತಿಂಗಳ ಗಟ್ಟಲೆ ಅಧ್ಯಯನ ಮಾಡುತ್ತಾರೆ. ನಮ್ಮ ನಾಡಲ್ಲಿ ವಿಜಯನಗರ ಸಾಮ್ರಾಜ್ಯದಲ್ಲಿ ಮುತ್ತು-ರತ್ನಗಳನ್ನು ಶೇರಿನಿಂದ ಬಿದಿ ಬಿದಿಗಳಲ್ಲಿ ಇಟ್ಟು ವ್ಯಾಪಾರ ಮಾಡಿದ ಬಂಗಾರದ ನಾಡಿದು, ಇದರ ಇತಿಹಾಸದ ಉಳಿವಿಗಾಗಿ ಕೇಂದ್ರ & ರಾಜ್ಯ ಸರಕಾರ ಬದ್ದವಾಗಿದೆ.

ರಾಜ್ಯ ಸಭಾ ಸದಸ್ಯ ಸನ್ಮಾನ್ಯ ಶ್ರೀ ನಾರಾಣಸಾ ಭಾಂಡಗೆ

ಪ್ರಧಾನಿ ನರೇಂದ್ರ ಮೊದಿ ಅವರ ವರ್ಚೆಸಿನಿಂದ ಭಾರದ ಇತರೆ ದೇಶಗಳೊಂದಿಗೆ ಗಟ್ಟಿಯಾಗಿದೆ. ಇದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ, ರಾಜ್ಯ ಸರಕಾರ ಇತ್ತ ಕಡೆ ಗಮನ ಹರಿಸಿ ಹೆಚ್ಚಿನ ಅಭಿವೃದ್ಧಿ ಕೈಗೊಳ್ಳಲು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಮಾಜಿ ತಾ,ಪ ಅಧ್ಯಕ್ಷರಾದ ಬಸವರಾಜ್ ಅಂಟರತಾಣಿ KMF ಹಾಲು ಒಕ್ಕೂಟದ ನಿರ್ದೇಶಕ ಸಂಗಣ್ಣ ಹಂಡಿ, ಅಪಾರ ಜಿಲ್ಲಾಧಿಜಾರಿ ಅಶೋಕ ತೆಲಿ, ಎಸಿ,ಸಂತೋಷ ಜಗಲಾಸರ್,ಪುರಾತತ್ವ ಇಲಾಖೆ ಅಧಿಕ್ಷಿಕ ರಮೇಶ ಮೂಲಿಮನಿ, ಮತ್ತು ಪ್ರಶಾಂತ ಕುಲಕರ್ಣಿ, ಉಪನ್ಯಾಸಕರಾಗಿ ಡಾ: ಪರವಿರನಕೌಸರ ಮೋಮಿನ್ ,

ಉಪನಿರ್ದೇಶಕ ಗೋಪಾಲ ಎಸ್ ಹಿತ್ತಲಮನಿ, ಉಪಸ್ಥಿತಿ ಇದ್ದರು ಈ ವಿಶ್ವ ಪ್ರವಾಸೋದ್ಯಮದ ದಿನಾರಣೆ ಅಂಗವಾಗಿ ಕೂಡಲ ಸಂಗಮದ ಪ್ರವಾಸ ಮಿತ್ರರಾದ ಶ್ರೀ ಯಮನಪ್ಪ ಭೋಜಪ್ಪ ಭಜಂತ್ರಿ ಇವರಿಗೆ ಅತ್ಯುತ್ತಮ ಪ್ರವಾಸಿ ಮಿತ್ರ ಪ್ರಶೌಂಶನ ಪ್ರಶಸ್ತಿ ನೀಡಿ ಜಿಲ್ಲಾಧಿಕಾರಿಗಳು ಗೌರವಿಸಿ ಸನ್ಮಾನಿಸಿದರು.

ವರದಿ ; ಭೀಮಸಿಂಗ್ ರಾಠೋಡ : ಅಮೀನಗಡ

About vijay_shankar

Check Also

ರಾಜ್ಯ ಮಟ್ಟದ ಜಾನಪದ ಸಂಭ್ರಮ ಜನಪದ ಸಂಸ್ಕೃತಿ ಜಗತ್ತಿನ ಶ್ರೇಷ್ಠ ಸಂಸ್ಕೃತಿ-  ರಾಜ್ಯಾದ್ಯಕ್ಷ ಡಾ: ಎಸ್ ನಯನ  ಬಾಲಾಜಿ

ರಾಜ್ಯ ಮಟ್ಟದ ಜಾನಪದ ಸಂಭ್ರಮ ಜನಪದ ಸಂಸ್ಕೃತಿ ಜಗತ್ತಿನ ಶ್ರೇಷ್ಠ ಸಂಸ್ಕೃತಿ- ರಾಜ್ಯಾದ್ಯಕ್ಷ ಡಾ: ಎಸ್ ನಯನ ಬಾಲಾಜಿ

ಇಂಡಿ: ‘ಜನಪದ ಸಂಸ್ಕೃತಿ ಜೇನುಗೂಡಿನ ಸಂಸ್ಕೃತಿ. ಜನ ಸಾಮಾನ್ಯರನ್ನು ಆಕರ್ಷಿಸುವ ಅದಮ್ಯ ಶಕ್ತಿ ಅದರಲ್ಲಿದೆ. ಇಂತಹ ಜನಪದವನ್ನು ಉಳಿಸಿ ಬೆಳೆಸಿಕೊಂಡು …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.